hubballi yuvakaru ‘ಹುಬ್ಬಳ್ಳಿ ಯುವಕರು’ ಪ್ರತಿಭಟನೆ

hubballi yuvakaru ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಇತ್ತೀಚೆಗೆ ನಡೆದ ಹೋರಾಟದ ವೇಳೆ ಹಿಂದೂ ಧರ್ಮ ಹಾಗೂ ರಾಷ್ಟ್ರದ ಸಾರ್ವಭೌಮತೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ‘ಹುಬ್ಬಳ್ಳಿ ಯುವಕರು’ ನೇತೃತ್ವದಲ್ಲಿ ಹಲವರು, ಹುಬ್ಬಳ್ಳಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
hubballi yuvakaru ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಇತ್ತೀಚೆಗೆ ನಡೆದ ಹೋರಾಟದ ವೇಳೆ ಹಿಂದೂ ಧರ್ಮ ಹಾಗೂ ರಾಷ್ಟ್ರದ ಸಾರ್ವಭೌಮತೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ‘ಹುಬ್ಬಳ್ಳಿ ಯುವಕರು’ ನೇತೃತ್ವದಲ್ಲಿ ಹಲವರು, ಹುಬ್ಬಳ್ಳಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿಭಟನೆ ನೆಪದಲ್ಲಿ ಭಾರತದ ಸಾರ್ವಭೌಮತೆಗೆ ಧಕ್ಕೆ
ಹುಬ್ಬಳ್ಳಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಇತ್ತೀಚೆಗೆ ನಡೆದ ಹೋರಾಟದ ವೇಳೆ ಹಿಂದೂ ಧರ್ಮ ಹಾಗೂ ರಾಷ್ಟ್ರದ ಸಾರ್ವಭೌಮತೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ‘ಹುಬ್ಬಳ್ಳಿ ಯುವಕರು’ hubballi yuvakaru ನೇತೃತ್ವದಲ್ಲಿ ಹಲವರು, ನಗರದ ಕೆಎಂಸಿಆರ್‌ಐ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಹಿಂದೂ ಧರ್ಮವನ್ನು ಅವಹೇಳನ ಮಾಡಲಾಗಿದೆ. ರಾಷ್ಟ್ರ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ಭಾರತದ ಏಕತೆ, ಸಮಗ್ರತೆ ಹಾಗೂ ಸಾರ್ವಭೌಮತ್ವಕ್ಕೆ ಇದರಿಂದ ಧಕ್ಕೆಯಾಗಿದೆ.
ಹೋರಾಟಗಾರ್ತಿ ಅರುಂಧತಿ ರಾಯ್ ಸೇರಿ ಹಲವರು ಸಾರ್ವಜನಿಕ ವೇದಿಕೆಯಲ್ಲಿ ಹಿಂದೂ ಹಾಗೂ ಭಾರತ ವಿರೋಧಿ ಮಾತುಗಳನ್ನಾಡಿದ್ದಾರೆ. ಇದರಿಂದ ಭಾರತದ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ಹಿಂದೂ ಧರ್ಮೀಯರ ಮನಸ್ಸುಗಳಿಗೆ ನೋವುಂಟಾಗಿದೆ. ಇವರ ಭಾಷಣಗಳು, ದೇಶದ ವಿಭಜನೆ, ದ್ವೇಷವನ್ನು ಉಂಟು ಮಾಡಿವೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಇಂಥ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಮುನ್ನ ಸಂಬಂಧಿಸಿದ ಇಲಾಖೆಗಳು ಪರಿಶೀಲಿಸಬೇಕು. ವೇದಿಕೆಯಲ್ಲಿ ರಾಷ್ಟ್ರದ ಸಾರ್ವಭೌಮತ್ವಕ್ಕೆ ಧಕ್ಕೆಯನ್ನು ತರುವಂತಿದ್ದರೆ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.
ಇಂಥ ವಿರೋಧಿ ಮನಸ್ಸು ಹೊಂದಿದವರ ವಿರುದ್ಧ ಕೂಡಲೇ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ ಮನವಿಯನ್ನು ಉತ್ತರ ವಿಭಾಗದ ಎಸಿಪಿ ಶಿವಾನಂದ ಚಲವಾದಿ ಅವರ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರವಾನಿಸಲಾಯಿತು.
ಪ್ರಮುಖರಾದ ವಿಕ್ರಮ್ ಗಲಾಂಡೆ, ವಿನಾಯಕ ಬೆಂಕಿಶೆಟ್ಟರ್, ಜಯೇಶ ಕಬಾಡೆ, ಸಂಜಯ ಉದ್ನೂರ, ವಿಶಾಲ ಸಿಂಗ್ನಳ್ಳಿ, ಪ್ರೀತಂ ಪಾಟೀಲ, ಅಮಯ್ ನವಲಗುಂದಮಠ, ನಕುಲ ಮಲ್ಜಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net