ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಶ್ಲಾಘನೀಯ health on wheel

ಹುಬ್ಬಳ್ಳಿ ದೇಶಪಾಂಡೆ ನಗರದ ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಚಾರಿ ಆರೋಗ್ಯ ಸೇವೆ ವಾಹನದ ಕೀಲಿಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಎನ್‌ಎಂಆರ್ ಫೌಂಡೇಷನ್‌ಗೆ ಹಸ್ತಾಂತರಿಸಿದರು. ಲೀಂಗರಾಜ ಪಾಟೀಲ, ಡಾ. ಶ್ರೀನಿವಾಸ ಜೋಶಿ, ಡಾ. ರವೀಂದ್ರ ಕಲಘಟಗಿ, ಸುಹಾಸ ಕಲಘಟಗಿ, ಮಹಿಮಾ ದಂಡ, ಎನ್.ಎ. ಚರಂತಿಮಠ, ಇತರರಿದ್ದರು.
ಹುಬ್ಬಳ್ಳಿ ದೇಶಪಾಂಡೆ ನಗರದ ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಚಾರಿ ಆರೋಗ್ಯ ಸೇವೆ ವಾಹನದ ಕೀಲಿಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಎನ್‌ಎಂಆರ್ ಫೌಂಡೇಷನ್‌ಗೆ ಹಸ್ತಾಂತರಿಸಿದರು. ಲೀಂಗರಾಜ ಪಾಟೀಲ, ಡಾ. ಶ್ರೀನಿವಾಸ ಜೋಶಿ, ಡಾ. ರವೀಂದ್ರ ಕಲಘಟಗಿ, ಸುಹಾಸ ಕಲಘಟಗಿ, ಮಹಿಮಾ ದಂಡ, ಎನ್.ಎ. ಚರಂತಿಮಠ, ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸಚಿವ ಪ್ರಲ್ಹಾದ ಜೋಶೀ ಹೇಳಿಕೆ
  • ಸಂಚಾರಿ ಆರೋಗ್ಯ ಸೇವೆ ವಾಹನ ಲೋಕಾರ್ಪಣೆ
ಹುಬ್ಬಳ್ಳಿ: ಜಿಲ್ಲೆಯ ಗ್ರಾಮೀಣ ಭಾಗದ ಜನರ ಆರೋಗ್ಯದ ಕಾಳಜಿಯಿಂದ ಅತ್ಯಾಧುನಿಕ ಸೌಲಭ್ಯವುಳ್ಳ ಸಂಚಾರಿ ಆರೋಗ್ಯ ವಾಹನ (ಹೆಲ್ತ್ ಆನ್ ವ್ಹೀಲ್) ಸೇವೆ ನೀಡಲು ಮುಂದಾಗಿರುವ ರೋಟರಿ ಕ್ಲಬ್ ವಿದ್ಯಾನಗರ, ಹುಬ್ಬಳ್ಳಿ ಮತ್ತು ಎನ್‌ಎಂಆರ್ ಫೌಂಡೇಷನ್ ಕಾರ್ಯ ಶ್ಲಾಘನೀಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. 
ದೇಶಪಾಂಡೆ ನಗರದ ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಸಂಚಾರಿ ಆರೋಗ್ಯ ಸೇವೆ ವಾಹನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರೋಗ್ಯ ಸೇವೆ ಅಗತ್ಯವುಳ್ಳ ಸ್ಥಳಗಳಿಗೆ ಎನ್‌ಜಿಒ ಮತ್ತು ಜನರ ಬೇಡಿಕೆಗೆ ಅನುಗುಣವಾಗಿ ಜನರ ಮನೆ ಬಾಗಿಲಿಗೆ ಹೋಗಿ ಉಚಿತವಾಗಿ ರೋಗಿಗಳ ರಕ್ತ ತಪಾಸಣೆ, ಮೂತ್ರ ತಪಾಸಣೆ, ಎಕ್ಸ್ ರೇ, ಇಸಿಜಿ, ಕಿವಿ, ಚರ್ಮ ತಪಾಸಣೆ ಮಾಡಿ ಅವರಿಗೆ ಸ್ಥಳದಲ್ಲಿಯೇ ವರದಿ ನೀಡುತ್ತಿರುವುದು ಮಾದರಿ ಕಾರ್ಯ ಎಂದರು.
ರೋಟರಿ ಮೆಂಟರ್ ಡಾ. ಎನ್.ಎ. ಚರಂತಿಮಠ ಮಾತನಾಡಿ, ರೋಟರಿ ಕ್ಲಬ್ ವಿದ್ಯಾನಗರ, ಹುಬ್ಬಳ್ಳಿ ಮತ್ತು ಎನ್‌ಎಂಆರ್ ಫೌಂಡೇಷನ್ ಸಹಯೋಗದಲ್ಲಿ ಅಂದಾಜು 70 ಲಕ್ಷ ರೂ. ವೆಚ್ಚದಲ್ಲಿ ಆಧುನಿಕ ಸೌಲಭ್ಯವುಳ್ಳ ಮೊಬೈಲ್ ಡಯಗ್ನೋಸ್ಟಿಕ್ ವ್ಯಾನ್ ಸಿದ್ಧಗೊಳಿಸಿದ್ದು, ಜನರ ಮನೆ ಬಾಗಿಲಿಗೆ ತೆರಳಿ ಆರೋಗ್ಯ ಸೇವೆ ನೀಡಲಿದೆ ಎಂದರು.   
ಎನ್‌ಎಂಆರ್ ಫೌಂಡೇಷನ್ ಟ್ರಸ್ಟಿ ಡಾ. ಸುಹಾಸ ಕಲಘಟಗಿ ಮಾತನಾಡಿ, ಹಳ್ಳಿಗಳಲ್ಲಿ ವೃದ್ಧರು, ಅಂಗವಿಕಲರು ತಾವಾಗಿಯೇ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆಗೆ ಮುಂದಾಗುವುದಿಲ್ಲ. ಹೆಚ್ಚಿನ ಜನರು ದಮ್ಮು, ಕೆಮ್ಮು, ತೀವ್ರಗತಿ ಉಸಿರಾಟ ತೊಂದರೆ, ಅಸ್ತಮಾ, ಬಿಪಿ, ಮಧುಮೇಹ ತೊಂದರೆಯಿಂದ ಬಳಲುತ್ತಿರುತ್ತಾರೆ. ಅವರ ಮನೆ ಬಾಗಿಲಿಗೆ ತೆರಳಿ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದರು.
ಡಾ. ರವೀಂದ್ರ ಕಲಘಟಗಿ, ರೋಟರಿಯನ್ ಗಣೇಶ ಭಟ್, ಎಂಎಲ್ಸಿ ಲಿಂಗರಾಜ ಪಾಟೀಲ, ಕೌಸ್ತುಭ ಸಂಶೀಕರ, ಮಡಿವಾಳಪ್ಪ ಜುಂಜಣ್ಣವರ ಮಾತನಾಡಿದರು. 
ಡಾ. ಶ್ರೀನಿವಾಸ ಜೋಶಿ, ರೋಟರಿಯನ್ ರಾಧಿಕಾ ಗೋಖಲೆ, ನೀತಾ ಮೆಹತಾ, ಅಂದಪ್ಪ ಸಂಕನೂರ, ಪ್ರವೀಣ ಜೈನ, ಕಿರಣ ಹೆಬಸೂರ, ಡಾ. ಸನ್ನಿಧಿ ಹೆಗಡೆ, ಇತರರಿದ್ದರು. ನಂದಿನಿ ಹಿರೇಮಠ ಪ್ರಾರ್ಥಿಸಿದರು. ಡಾ. ಮಹಿಮಾ ದಂಡ ಕಾರ್ಯಕ್ರಮ ನಿರ್ವಹಿಸಿದರು.
ಮೋದಿ ವಿಶ್ವಮಾನ್ಯ ನಾಯಕ
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ದೊಡ್ಡ ಪರದೆಯಲ್ಲಿ ವೀಕ್ಷಿಸಲಾಯಿತು. ಬಳಿಕ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ದೇಶದಲ್ಲಿ ನಡೆಯುವ ವಿವಿಧ ವಿಶೇಷ ಕಾರ್ಯಕ್ರಮ, ಸಾಮಾಜಿಕ ಸೇವಾ ಕಾರ್ಯಗಳನ್ನು ಪ್ರಧಾನಮಂತ್ರಿ ಮೋದಿ ಅವರು ಶ್ಲಾಘಿಸುತ್ತಿದ್ದಾರೆ. ಇತರರೂ ಸಮಾಜ ಸೇವೆಯಲ್ಲಿ ತೊಡಗಲು ಈ ಮೂಲಕ ಪ್ರೇರಣೆ ನೀಡುತ್ತಿದ್ದಾರೆ. ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಮೂಲಕ ಮೋದಿ ಅವರು ವಿಶ್ವಮಾನ್ಯ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net