ವಿಶೇಷಚೇತನ ಮಕ್ಕಳಿಗಾಗಿ ವಿವಿಧ ಕೋರ್ಸ್ jss college

ಹುಬ್ಬಳ್ಳಿ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮೈಸೂರು ಜೆಎಸ್‌ಎಸ್ ಪಾಲಿಟೆಕ್ನಿಕ್‌ನ ಹಿರಿಯ ಉಪನ್ಯಾಸಕ ಎಂ.ಬಿ. ರಘುಮಾತನಾಡಿದರು. ಉಪ ಪ್ರಾಂಶುಪಾಲ ಎನ್.ಎಂ. ಶಿವಕುಮಾರಸ್ವಾಮಿ,  ಕೆ.ಎಸ್. ಮಹೇಶ, ಡಾ. ಪಳನಿಸ್ವಾಮಿ ಇದ್ದರು.
ಹುಬ್ಬಳ್ಳಿ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮೈಸೂರು ಜೆಎಸ್‌ಎಸ್ ಪಾಲಿಟೆಕ್ನಿಕ್‌ನ ಹಿರಿಯ ಉಪನ್ಯಾಸಕ ಎಂ.ಬಿ. ರಘುಮಾತನಾಡಿದರು. ಉಪ ಪ್ರಾಂಶುಪಾಲ ಎನ್.ಎಂ. ಶಿವಕುಮಾರಸ್ವಾಮಿ, ಕೆ.ಎಸ್. ಮಹೇಶ, ಡಾ. ಪಳನಿಸ್ವಾಮಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೈಸೂರಿನ ಜೆಎಸ್‌ಎಸ್ ಪಾಲಿಟೆಕ್ನಿಕ್‌ನಲ್ಲಿ ಪ್ರವೇಶ ಪ್ರಾರಂಭ
ಹುಬ್ಬಳ್ಳಿ: ಮೈಸೂರಿನ ಜೆಎಸ್‌ಎಸ್ ವಿಶೇಷಚೇತನರ ಪಾಲಿಟೆಕ್ನಿಕ್‌ನಲ್ಲಿ ದೈಹಿಕ ಅಂಗವಿಕಲತೆ, ಶ್ರವಣದೋಷ ಮತ್ತು ಅಂಧತ್ವವುಳ್ಳ ವಿದ್ಯಾರ್ಥಿಗಳಿಗಾಗಿ ವಿವಿಧ ಕೋರ್ಸ್‌ಗಳಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು 2026- 27ರ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪಡೆಯಬಹುದಾಗಿದೆ ಎಂದು ಉಪ ಪ್ರಾಂಶುಪಾಲ ಎನ್.ಎಂ. ಶಿವಕುಮಾರಸ್ವಾಮಿ ತಿಳಿಸಿದರು.   
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷ ಚೇತನರಿಗಾಗಿ ಸ್ಥಾಪಿಸಿದ ರಾಜ್ಯದ ಏಕೈಕ ಸಂಸ್ಥೆ ಇದಾಗಿದೆ. ಆರ್ಕಿಟೆಕ್ಚರ್ ಅಸಿಸ್ಟೆಂಟ್‌ಶಿಪ್, ಕಮರ್ಷಿಯಲ್ ಪ್ರಾೃಕ್ಟೀಸ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಜುವೆಲರಿ ಡಿಸೈನ್ ಮತ್ತು ಟೆಕ್ನಾಲಜಿ, ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್, ಕಂಪ್ಯೂಟರ್ ಅಪ್ಲಿಕೇಷನ್ಸ್, ಅಪರೆಲ್ ಡಿಸೈನ್ ಮತ್ತು ಫ್ಯಾಬ್ರಿಕೇಷನ್ ಟೆಕ್ನಾಲಜಿ ಹಾಗೂ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಮತ್ತು ಇಲೆಕ್ಟ್ರಿಕ್ ವೆಹಿಕಲ್ ಟೆಕ್ನಾಲಜಿ ಡಿಪ್ಲೊಮಾ ಕೋರ್ಸ್‌ಗಳಿವೆ. ಕಲಿಕಾ ಅವಧಿ ಮೂರು ವರ್ಷವಾಗಿದ್ದು, ಬಡ ವಿದ್ಯಾರ್ಥಿಗಳಿಗೆ 50 ಸಾವಿರ ರೂ. ವಿದ್ಯಾರ್ಥಿ ವೇತನ ಸೌಲಭ್ಯವಿದೆ ಎಂದರು.
ಹಿರಿಯ ಉಪನ್ಯಾಸಕ ಎಂ.ಬಿ. ರಘು ಮಾತನಾಡಿ, ಸಂಸ್ಥೆಯಲ್ಲಿ 940ಕ್ಕೂ ವಿಶೇಷಚೇತನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈವರೆಗೆ ವ್ಯಾಸಂಗ ಮಾಡಿದ 3,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶೈಕ್ಷಣಿಕ ಸಂಸ್ಥೆಗಳು, ಸರ್ಕಾರದ ಇಲಾಖೆಗಳು, ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗಾವಕಾಶ ಪಡೆದಿದ್ದಾರೆ. ಮಕ್ಕಳಿಗೆ ವಸತಿ ವ್ಯವಸ್ಥೆ ಇದ್ದು, ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಪ್ರಯೋಜನ ಪಡೆಯಬಹುದು ಎಂದರು. 
ಸಂಸ್ಥೆಯ ವಿಶೇಷತೆ ಹಾಗೂ ವಿಶೇಷಚೇತನರಿಗೆ ನೀಡುತ್ತಿರುವ ಸೇವೆಯನ್ನು ಗುರುತಿಸಿ 2012ರಲ್ಲಿ ರಾಷ್ಟ್ರ ಪ್ರಶಸ್ತಿ ಮತ್ತು 2016ರಲ್ಲಿ ರಾಜ್ಯ ಸರ್ಕಾರದಿಂದ ರಾಜ್ಯಮಟ್ಟದ ಅತ್ಯುತ್ತಮ ಸಂಸ್ಥೆ ಪ್ರಶಸ್ತಿ ಲಭಿಸಿದೆ ಎಂದರು. ಕೆ.ಎಸ್. ಮಹೇಶ, ಡಾ. ಪಳನಿಸ್ವಾಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net