ಕುಸುಗಲ್ಲ ಗ್ರಾಮದೇವತೆಯರ ಮೂರ್ತಿ ಮರುಪ್ರತಿಷ್ಠಾಪನೆ ಏ. 20ರಂದು dyamavvadevi

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹಿರಿಯರಾದ ವಿ.ಎಸ್. ಕೆಂಚನಗೌಡ್ರ ಮಾತನಾಡಿದರು. ಶೇಖಪ್ಪ ಕರೆಣ್ಣವರ, ಸಕ್ರಪ್ಪ ಕಮ್ಮಾರ, ಚನ್ನಯ್ಯ ಮರಯ್ಯನವರಮಠ, ಪ್ರಕಾಶಗೌಡ ಕೆಂಚನಗೌಡ್ರ ಇದ್ದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹಿರಿಯರಾದ ವಿ.ಎಸ್. ಕೆಂಚನಗೌಡ್ರ ಮಾತನಾಡಿದರು. ಶೇಖಪ್ಪ ಕರೆಣ್ಣವರ, ಸಕ್ರಪ್ಪ ಕಮ್ಮಾರ, ಚನ್ನಯ್ಯ ಮರಯ್ಯನವರಮಠ, ಪ್ರಕಾಶಗೌಡ ಕೆಂಚನಗೌಡ್ರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕುಸುಗಲ್ಲ ಗ್ರಾಮದಲ್ಲಿ 20ರಿಂದ 28ರವರೆಗೆ ಧಾರ್ಮಿಕ ಕಾರ್ಯಕ್ರಮ
  • ನಿತ್ಯ ಸಂಜೆ ಧರ್ಮಸಭೆ, ಪ್ರವಚನ
ಹುಬ್ಬಳ್ಳಿ: ತಾಲೂಕಿನ ಕುಸುಗಲ್ಲ ಗ್ರಾಮದಲ್ಲಿ ಗ್ರಾಮದೇವತೆ ದೇವಸ್ಥಾನದಲ್ಲಿ ದ್ಯಾಮವ್ವ-ದುರ್ಗವ್ವ ದೇವಿ ಮೂರ್ತಿಗಳ ಮರು ಪ್ರತಿಷ್ಠಾಪನೆ ಕಾರ್ಯಕ್ರಮ ವಿವಿಧ ಮಠಾಧೀಶರಿಂದ ಧರ್ಮಸಭೆ ಏಪ್ರಿಲ್ 20ರಿಂದ 28ರವರೆಗೆ ಕುಸುಗಲ್ಲ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ಗ್ರಾಮದ ಹಿರಿಯರಾದ ವಿ.ಎಸ್. ಕೆಂಚನಗೌಡ್ರ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 
ಏ. 20ರಂದು ಬೆಳಗ್ಗೆ 6 ಗಂಟೆಗೆ ಮುಕ್ತಿಮಂದಿರದ ವೀರಮುಕ್ತಿಮುನಿ ಶಿವಾಚಾರ್ಯರು, ಸುಳ್ಳ ಪಂಚಗೃಹ ಹಿರೇಮಠದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯರ ಅಮೃತ ಹಸ್ತದಿಂದ ದೇವಸ್ಥಾನದಲ್ಲಿ ಗ್ರಾಮದೇವತೆಯರ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ. ಮಲ್ಲಯ್ಯ ಬೆಳ್ಳೇರಿಮಠ, ಅಣ್ಣಯ್ಯ ಬೆಳ್ಳೇರಿಮಠ ಪೂಜೆ, ಧಾರ್ಮಿಕ ಕೈಂಕರ್ಯ ನೆರವೇರಿಸುವರು. ಸಂಜೆ 6ಕ್ಕೆ ಗ್ರಾಮದ ಶಿವನಗೌಡ ಕೆಂಚನಗೌಡ್ರ ಅವರ ಹೊಲದಲ್ಲಿ ನಿರ್ಮಿಸಿರುವ ಮಂಟಪದಲ್ಲಿ ಧರ್ಮಸಭೆ ಜರುಗಲಿದ್ದು, ಮೂರುಸಾವಿರಮಠದ ಶ್ರೀ ಜಗದ್ಗುರು ಗುರುಸಿದ್ಧರಾಜಯೋಗೇಂದ್ರ ಸ್ವಾಮೀಜಿ ಉಪಸ್ಥಿತರಿರುವರು. ಶಾಸಕ ಎನ್.ಎಚ್. ಕೋನರಡ್ಡಿ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಸಮಾರಂಭ ಉದ್ಘಾಟಿಸುವರು. ಗ್ರಾಮದ ನಾಟ್ಯಾಂಜಲಿ ಕಲಾಮಂದಿರದ ಕಲಾವಿದರಿಂದ ಭರತನಾಟ್ಯ ಪ್ರದರ್ಶನವಿದೆ ಎಂದರು.
21ರಂದು ಬೆಳಗ್ಗೆ 6 ಗಂಟೆಗೆ ಗ್ರಾಮದೇವಿ ದೇವಸ್ಥಾನದಲ್ಲಿ ಸೋಮಾಚಾರ್ಯ ಕಡ್ಲಾಸ್ಕರ ಅವರಿಂದ ಹೋಮ, ಹವನ ನಡೆಯಲಿದೆ.  ಬೆಳಗ್ಗೆ 9 ಗಂಟೆಗೆ ಗ್ರಾಮದೇವಿಯರಿಗೆ ಉಡಿ ತುಂಬುವ ಕಾರ್ಯಕ್ರಮ. ಸಂಜೆ 6ಕ್ಕೆ ನಡೆಯುವ ಧರ್ಮಸಭೆಯಲ್ಲಿ ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರಿಂದ ಆಶೀರ್ವಚನ ನೀಡುವರು. 
22ರಂದು ಸಂಜೆ 6ಕ್ಕೆ ಶಿರಹಟ್ಟಿ ಸಂಸ್ಥಾನಮಠದ ಜಗದ್ಗುರು ಶ್ರೀ ಕೀರ ಸಿದ್ಧರಾಮ ಸ್ವಾಮೀಜಿ, ಕುಂದಗೋಳ ಕಲ್ಯಾಣಪುರದ ಶ್ರೀ ಬಸವಣ್ಣಜ್ಜನವರು ಆಶೀರ್ವಚನ ನೀಡುವರು. ಸಭಾಪತಿ ಬಸವರಾಜ ಹೊರಟ್ಟಿ ಪಾಲ್ಗೊಳ್ಳುವರು. 23ರಂದು ಸಂಜೆ 6ಕ್ಕೆ ಮಣಕವಾಡದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ, ಡಾ. ಎ.ಸಿ. ವಾಲಿ ಗುರೂಜಿಯಿಂದ ಆಶೀರ್ವಚನ. 24ರಂದು ಸಂಜೆ 6ಕ್ಕೆ ಅಮ್ಮಿನಭಾವಿ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಸ್ವಾಮೀಜಿ, ಬ್ಯಾಹಟ್ಟಿ ಹಿರೇಮಠದ ಶ್ರೀ ಮರುಳಸಿದ್ಧ ಶಿವಾರ್ಯರರಿಂದ ಆಶೀರ್ವಚನ. ಸಂಸದ ಬಸವರಾಜ ಬೊಮ್ಮಾಯಿ ಉಪಸ್ಥಿತರಿರುವರು. 25ರಂದು ಸಂಜೆ 6ಕ್ಕೆ ಹಾರಿಕ ಮಂಜುನಾಥ ಅವರಿಂದ ಉಪನ್ಯಾಸ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಡಾ. ಬಸವರಾಜ ಸಾದರ, ಡಾ. ಶಿವಲೀಲಾ ವೈಜಿನಾಥ ಪಾಲ್ಗೊಳ್ಳುವರು. 26ರಂದು ಸಂಜೆ 6ಕ್ಕೆ ಜುಕ್ತಿ ಹಿರೇಮಠದ ಶ್ರೀ ಗುರುಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡುವರು. ಸಂಸದ ಜಗದೀಶ ಶೆಟ್ಟರ್, ಡಾ. ಜ್ಯೋತಿಲಕ್ಷ್ಮೀ ಡಿ.ಪಿ. ಉಪಸ್ಥಿತರಿರುವರು. 27ರಂದು ಸಂಜೆ 6ಕ್ಕೆ ಹಾಲಕೇರಿ ಅನ್ನದಾನೇಶ್ವರಮಠದ ಶ್ರೀ ಮುಪ್ಪಿನಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡುವರು. ವಿನೋದ ಅಸೂಟಿ, ಡಾ. ರಾಮು ಮೂಲಗಿ ಪಾಲ್ಗೊಳ್ಳುವರು. 28ರಂದು ಬೆಳಗ್ಗೆ 7ಕ್ಕೆ ಸಕಲ ವಾದ್ಯಮೇಳದೊಂದಿಗೆ ಗ್ರಾಮದೇವಿಯರ ಭಾವಚಿತ್ರ ಮೆರವಣಿಗೆ, ಪಲ್ಲಕ್ಕಿ ಉತ್ಸವ ನಡೆಯಲಿದೆ. ಬೆಳಗ್ಗೆ 11ಕ್ಕೆ ಕನ್ನೇರಿಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರಿಂದ ರೈತ ಜಾಗೃತಿ ಕಾರ್ಯಕ್ರಮ, ರಾತ್ರಿ 10ಕ್ಕೆ ತತ್ವಪದ ಭಜನಾ ಕಾರ್ಯಕ್ರಮ ನಡೆಯಲಿದೆ. ನಿತ್ಯ ಸಂಜೆ 7ಕ್ಕೆ ಬೂದಗುಂಪ ಕೊಟ್ಟೂರುಸ್ವಾಮಿ ಶಾಖಾಮಠದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಪ್ರವಚನ ನೀಡುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಶೇಖಪ್ಪ ಕರೆಣ್ಣವರ, ಸಕ್ರಪ್ಪ ಕಮ್ಮಾರ, ಚನ್ನಯ್ಯ ಮರಯ್ಯನವರಮಠ, ಪ್ರಕಾಶಗೌಡ ಕೆಂಚನಗೌಡ್ರ, ಹನುಮಂತಪ್ಪ ಶಿವಳ್ಳಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net