ಇ ಸ್ವತ್ತು ವ್ಯವಸ್ಥೆಯ ಲೋಪದೋಷ ಸರಿಪಡಿಸಲಿ huvina balli

ಹುಬ್ಬಳ್ಳಿ ಗೋಕುಲ ರಸ್ತೆ ಕೆಇಸಿ ಎದುರಿನ ಗಾಂಧಿನಗರ ಕುಮಾರ ಪಾರ್ಕ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಹೂವು ಬಳ್ಳಿಯ ಮೇಳವನ್ನು ಸಂಸದ ಜಗದೀಶ ಶೆಟ್ಟರ್ ಉದ್ಘಾಟಿಸಿದರು. ಮೃತ್ಯುಂಜಯ ಮರೋಳ, ಮಹೇಶ ಕೂಕನೂರ, ಜಿ.ಬಿ. ಹಳ್ಯಾಳ, ಆರತಿ ಮರೋಳ, ಇತರರಿದ್ದರು.
ಹುಬ್ಬಳ್ಳಿ ಗೋಕುಲ ರಸ್ತೆ ಕೆಇಸಿ ಎದುರಿನ ಗಾಂಧಿನಗರ ಕುಮಾರ ಪಾರ್ಕ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಹೂವು ಬಳ್ಳಿಯ ಮೇಳವನ್ನು ಸಂಸದ ಜಗದೀಶ ಶೆಟ್ಟರ್ ಉದ್ಘಾಟಿಸಿದರು. ಮೃತ್ಯುಂಜಯ ಮರೋಳ, ಮಹೇಶ ಕೂಕನೂರ, ಜಿ.ಬಿ. ಹಳ್ಯಾಳ, ಆರತಿ ಮರೋಳ, ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಸಲಹೆ
  • ಹೂವು ಬಳ್ಳಿಯ ಮೇಳ ಉದ್ಘಾಟನೆ

ಹುಬ್ಬಳ್ಳಿ: ಭೂಮಿ,ಮನೆ,ವಾಣಿಜ್ಯಮಳಿಗೆ ಖರೀದಿಗೆ ಸರ್ಕಾರ ಕೆಲವರ್ಷಗಳಿಂದ ಇ ಸ್ವತ್ತು ವ್ಯವಸ್ಥೆಜಾರಿಗೆ ತಂದಿದೆ.ಆದರೆ,ಇದರಲ್ಲಿಕೆಲ ಲೋಪದೋಷಗಳಿದ್ದು,ಅವುಗಳನ್ನುಸರ್ಕಾರ ಶೀಘ್ರ ಸರಿಪಡಿಸಿ ಜನರಿಗೆಅನುಕೂಲ ಮಾಡಿಕೊಡಬೇಕು ಎಂದುಬೆಳಗಾವಿ ಸಂಸದ ಜಗದೀಶ ಶೆಟ್ಟರ್ಹೇಳಿದರು.

ಗೋಕುಲರಸ್ತೆ ಕೆಇಸಿ ಎದುರಿನ ಗಾಂಧಿನಗರಕುಮಾರ ಪಾರ್ಕ್ ಯಶಸ್ವಿಎನ್‌ಕ್ಲೇವ್‌ನಲ್ಲಿ ಯಶಸ್ವಿಡೆವಲಪರ್ಸ್‌ ಆಶ್ರಯದಲ್ಲಿಶುಕ್ರವಾರ ಏರ್ಪಡಿಸಿದ್ದ ಹೂವುಬಳ್ಳಿಯ ಮೇಳ ಉದ್ಘಾಟಿಸಿ ಅವರುಮಾತನಾಡಿದರು.

ಅನಧಿಕೃತಬಡಾವಣೆ ನಿರ್ಮಾಣವನ್ನು ತಡೆಯಬೇಕಿದೆ.ಕೆಲವರುಬಡಾವಣೆ ನಿರ್ಮಿಸುವುದಾಗಿ ಹೇಳಿಜನರಿಂದ ಲಕ್ಷಾಂತರ ರೂ.ಪಡೆದಿರುತ್ತಾರೆ.ಕೊನೆಗೆಗ್ರಾಹಕರಿಗೆ ಹಣವನ್ನೂ ಕೊಡುವುದಿಲ್ಲ,ನಿವೇಶನವನ್ನೂಕೊಡುತ್ತಿಲ್ಲ.ಇಂಥಸಮಸ್ಯೆ ಬಗೆಹರಿಸುವಂತೆ ಅನೇಕರುಜನಪ್ರತಿನಿಧಿಗಳ ಬಳಿ ಅಲೆಯುತ್ತಿದ್ದಾರೆ.ಹೀಗಾಗಿ,ನಿವೇಶನಖರೀದಿ ಮುನ್ನ ಜನರು ತುಂಬಾ ಎಚ್ಚರಿಕೆವಹಿಸಬೇಕು ಎಂದರು.

ಯಶಸ್ವಿಡೆವಲಪರ್ಸ್‌ನ ಮೃತ್ಯುಂಜಯ ಮರೋಳಅವರು 20ವರ್ಷಗಳಿಂದನಗರದಲ್ಲಿ ಗುಣಮಟ್ಟದ ಮನೆ,ವಣಿಜ್ಯಮಳಿಗೆ ಕಟ್ಟಿ ಕೊಟ್ಟಿದ್ದಾರೆ.ಈಗವಾಣಿಜ್ಯ ಮಳಿಗೆ ಪಡೆಯುವ ಗ್ರಾಹಕರಿಗೆ5ವರ್ಷಗಳಬಾಡಿಗೆ ಗ್ಯಾರಂಟಿ ನೀಡುತ್ತಿರುವುದುರಾಜ್ಯದಲ್ಲಿಯೇ ಹೊಸ ಪ್ರಯತ್ನವಾಗಿದೆಎಂದರು.

ಸಾನ್ನಿಧ್ಯವಹಿಸಿದ್ದ ರುದ್ರಾಕ್ಷಿಮಠದ ಶ್ರೀಬಸವಲಿಂಗ ಸ್ವಾಮೀಜಿ ಮಾತನಾಡಿ,ಯಶಸ್ವಿಡೆವಲಪರ್ಸ್‌ನ ಮೃತ್ಯುಂಜಯ ಮರೋಳಮತ್ತು ಮಹೇಶ ಕೂಕನೂರ ಅವರಿಂದ ಈಭಾಗದ ಜನರಿಗೆ ಇನ್ನೂ ಹೆಚ್ಚಿನಗುಣಮಟ್ಟದ ಮನೆ,ಅಂಗಡಿಕಟ್ಟಡಗಳು ಸಿಗುವಂತಾಗಲಿ ಎಂದರು.

ಮೇಳದಅಧ್ಯಕ್ಷ ಮೃತ್ಯುಂಜಯ ಮರೋಳಮಾತನಾಡಿ,ಜನರಿಗೆಕೈಗೆಟುಕುವ ದರದಲ್ಲಿ ಮನೆ,ವಾಣಿಜ್ಯಮಳಿಗೆಗಳನ್ನು ಕಡಿಮೆ ದರದಲ್ಲಿನೀಡಬೇಕು ಎಂಬ ಉದ್ದೇಶದಿಂದ ಹೂವುಬಳ್ಳಿ ಮೇಳ ಆಯೋಜಿಸಲಾಗಿದೆ.ಶನಿವಾರಮತ್ತು ಭಾನುವಾರ ಕೂಡ ಮೇಳ ನಡೆಯಲಿದೆಎಂದರು.

ಮೇಳದಉಪಾಧ್ಯಕ್ಷ ಮಹೇಶ ಕೂಕನೂರ,ಬಸವಕೇಂದ್ರದ ಅಧ್ಯಕ್ಷ ಜಿ.ಬಿ.ಹಳ್ಯಾಳ,ಆರತಿಮರೋಳ,ಪ್ರಭಣ್ಣಅಂಗಡಿ,ಚಂದ್ರಶೇಖರಮರೋಳ,ಬಿ.ಎಸ್.ರೇಖಾ,ಮಲ್ಲಿಕಾರ್ಜುನಸಾವಕಾರ,ಡಾ.ಅರುಣಾ,ರಮೇಶಪಾಟೀಲ,ಇತರರಿದ್ದರು.ಶೈಲಜಾಕೋಕರೆ ಮತ್ತು ಶೋಭಾ ಜಾಬಿನ್ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net