ಹವ್ಯಕ ಹಬ್ಬ ಆಚರಣೆ ಶ್ಲಾಘನೀಯ havyak

ಹುಬ್ಬಳ್ಳಿಯ ಹವ್ಯಕ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಹವ್ಯಕ ಹಬ್ಬ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಜಿ.ಆರ್. ಭಟ್ಟ, ನಿವೃತ್ತ ಉಪನ್ಯಾಸಕಿ ಪ್ರೇಮಾ ಹೆಗಡೆ, ಐಆರ್‌ಟಿಎಸ್ ಅಧಿಕಾರಿ ಕಾರ್ತಿಕ ಹೆಗಡೆಕಟ್ಟೆ ಅವರನ್ನು ಸನ್ಮಾನಿಸಲಾಯಿತು. ಎಂಎಲ್‌ಸಿ ಲಿಂಗರಾಜ ಪಾಟೀಲ, ಶ್ರೀಕೃಷ್ಣ ಹೆಗಡೆ, ವಸಂತ ಭಟ್, ವಿ.ಎಂ. ಭಟ್ಟ, ಅನಿತಾ ಭಟ್, ವೀಣಾ ಹೆಗಡೆ ಇದ್ದರು.
ಹುಬ್ಬಳ್ಳಿಯ ಹವ್ಯಕ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಹವ್ಯಕ ಹಬ್ಬ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಜಿ.ಆರ್. ಭಟ್ಟ, ನಿವೃತ್ತ ಉಪನ್ಯಾಸಕಿ ಪ್ರೇಮಾ ಹೆಗಡೆ, ಐಆರ್‌ಟಿಎಸ್ ಅಧಿಕಾರಿ ಕಾರ್ತಿಕ ಹೆಗಡೆಕಟ್ಟೆ ಅವರನ್ನು ಸನ್ಮಾನಿಸಲಾಯಿತು. ಎಂಎಲ್‌ಸಿ ಲಿಂಗರಾಜ ಪಾಟೀಲ, ಶ್ರೀಕೃಷ್ಣ ಹೆಗಡೆ, ವಸಂತ ಭಟ್, ವಿ.ಎಂ. ಭಟ್ಟ, ಅನಿತಾ ಭಟ್, ವೀಣಾ ಹೆಗಡೆ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಂಎಲ್‌ಸಿ ಲಿಂಗರಾಜ ಪಾಟೀಲ ಅಭಿಪ್ರಾಯ
  • ಸಾಧಕರು, ನಿವೃತ್ತರಿಗೆ ಸನ್ಮಾನ
ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯು ಕಳೆದ 44 ವರ್ಷಗಳಿಂದ ಪ್ರತಿವರ್ಷ ಬಹಳ ವ್ಯವಸ್ಥಿತವಾಗಿ ಹವ್ಯಕ ಹಬ್ಬ ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ ಹೇಳಿದರು.
ನಗರದ ಹವ್ಯಕ ಭವನದಲ್ಲಿ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಭಾನುವಾರ ಏರ್ಪಡಿಸಿದ್ದ ಹವ್ಯಕ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾನು ಹು- ಧಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದ ವೇಳೆ ಹವ್ಯಕ ಸಂಘ ಸೇರಿ 100ಕ್ಕೂ ಅರ್ಹ ವಿವಿಧ ಸಂಘ ಸಂಸ್ಥೆಗಳಿಗೆ ಸಿಎ ಸೈಟ್‌ಗಳನ್ನು ನೀಡಲಾಗಿತ್ತು. ಅವೆಲ್ಲ ಸಂಘಗಳು ಈಗ ಆಯಾ ಜಾಗಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಿಕೊಂಡು ಸಮಾಜದ ಏಳಿಗೆಗೆ ಸದ್ಬಳಕೆ ಮಾಡಿಕೊಂಡಿದ್ದಾರೆ. ಆ ಕೆಲಸ ನನಗೆ ಸಂತೃಪ್ತಿ ತಂದಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಆಯುಕ್ತ (ಜಿಎಸ್‌ಟಿ) ಶ್ರೀಕೃಷ್ಣ ಹೆಗಡೆ ಮಾತನಾಡಿ, ಹವ್ಯಕ ಸಮಾಜದವರು ನಿತ್ಯವೂ ತಪ್ಪದೆ ವಿಷ್ಣು ಸಹಸ್ರನಾಮ ಪಠಣ ಮಾಡಬೇಕು. ಈ ಮೂಲಕ ಹಿರಿಯರು ಪಾಲಿಸಿಕೊಂಡು ಬಂದ ಧರ್ಮಾಚರಣೆ, ಸಂಪ್ರದಾಯ ಮುಂದುವರಿಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.
ಹವ್ಯಕ ಸಂಸ್ಥೆ ಅಧ್ಯಕ್ಷ ವಿ.ಎಂ. ಭಟ್ಟ ಮಾತನಾಡಿ, ಸಮಾಜವರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಂಘಟಿತರಾಗಬೇಕಿದೆ. ಸಮಾಜದ ಅಭಿವೃದ್ಧಿಗಾಗಿ ಇಂಥ ಅನೇಕ ಕಾರ್ಯಕ್ರಮಗಳನ್ನು ಮಾಡಲು ಸಹಾಯ, ಸಹಕಾರ ನೀಡಬೇಕು ಎಂದರು.
ಸನ್ಮಾನಿತರ ಪರವಾಗಿ ಮಾತನಾಡಿದ ಐಆರ್‌ಟಿಎಸ್ ಅಧಿಕಾರಿ ಕಾರ್ತಿಕ ಹೆಗಡೆಕಟ್ಟೆ, ಜ್ಞಾನದ ಬಲದಿಂದ ಭಾರತ 4 ಸಾವಿರ ವರ್ಷಗಳ ಹಿಂದೆಯೇ ವಿಶ್ವಗುರುವಾಗಿತ್ತು. ವಿಜ್ಞಾನ, ತಂತ್ರಜ್ಞಾನ, ಯೋಗ, ಮತ್ತಿತರ ಕ್ಷೇತ್ರಗಳಲ್ಲಿ ಅಗಾಧ ಸಾಧನೆಗೈಯ್ಯುವ ಮೂಲಕ ಇದೀಗ ಮತ್ತೊಮ್ಮೆ ವಿಶ್ವಗುರುವಾಗುವ ಕಾಲ ಹತ್ತಿರ ಬಂದಿದೆ. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮಹತ್ವದ ಪಾತ್ರ ವಹಿಸಲಿದೆ. ಸಮಾಜವರು ತಂತ್ರಜ್ಞಾನಕ್ಕೆ ತಕ್ಕಂತೆ  ಕೌಶಲಗಳನ್ನು ಕಲಿತು ಶಿಸ್ತು ಮತ್ತು ಶ್ರದ್ಧೆಯಿಂದ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿದರೆ ಯಶಸ್ಸು ಖಂಡಿತವಾಗಿ ದೊರೆಯುತ್ತದೆ ಎಂದು ಹೇಳಿದರು.
ಹಿರಿಯ ವಕೀಲ ವಿ.ಡಿ. ಹೆಗಡೆ, ಹವ್ಯಕ ಸಂಘ ಸ್ಥಾಪನೆ ಮತ್ತು ಅದಕ್ಕೆ ಜಾಗ ಪಡೆಯಲು ಕಾರಣರಾದವರನ್ನು ನೆನೆದರು. ನಿವೃತ್ತ ಪ್ರಾಂಶುಪಾಲ ಜಿ.ಆರ್. ಭಟ್ಟ, ನಿವೃತ್ತ ಉಪನ್ಯಾಸಕಿ ಪ್ರೇಮಾ ಹೆಗಡೆ, ಐಆರ್‌ಟಿಎಸ್ ಅಧಿಕಾರಿ ಕಾರ್ತಿಕ ಹೆಗಡೆಕಟ್ಟೆ ಅವರನ್ನು ಸನ್ಮಾನಿಸಲಾಯಿತು. ಅರುಣಕುಮಾರ ಹಬ್ಬು ವಿರಚಿತ ‘ಗ್ಲಾನಿ’ ಕಾದಂಬರಿಯನ್ನು ಹುಳಗೋಳ ನಾಗಪತಿ ಹೆಗಡೆ ಬಿಡುಗಡೆ ಮಾಡಿದರು. ವಸಂತ ಭಟ್, ಸುದರ್ಶನ ಜಿ.ಎಚ್., ಶಿವರಾಮ ಹೆಗಡೆ, ಅನಿತಾ ಭಟ್, ವೀಣಾ ಹೆಗಡೆ ಇತರರಿದ್ದರು ಮೂರ್ತಿ ಹೆಗಡೆ ಮತ್ತು ವೀಣಾ ಶಿವರಾಮ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
ಸತ್ಯನಾರಾಯಣ ಪೂಜೆ, ಶತ ರುದ್ರಾಭಿಷೇಕ:
ಬೆಳಗ್ಗೆ ವಿದ್ವಾನ್ ಸೂರ್ಯನಾರಾಯಣ ಭಟ್ಟ ನೇತೃತ್ವದಲ್ಲಿ 108 ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಶತ ರುದ್ರಾಭಿಷೇಕ ಜರುಗಿತು. ಮಧ್ಯಾಹ್ನ ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮ ನಡೆದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net