ಹುಬ್ಬಳ್ಳಿ ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದು ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಸಹಕಾಯದರ್ಶಿ ವಿನಾಯಕ ತಲಗೇರಿ ಮಾತನಾಡಿದರು. ಪ್ರಾಂತ ಕೋಶಾಧ್ಯಕ್ಷ ಸಂಜೀವ ಬಡಸ್ಕರ್, ಚೇತನರಾವ್, ನಿರಾಮಯ ಫೌಂಡೇಷನ್ ಅಧ್ಯಕ್ಷ ಗುರು ಬನ್ನಿಕೊಪ್ಪ ಇದ್ದರು.
ಹುಬ್ಬಳ್ಳಿ: ಇಲ್ಲಿನ ಸವಾಯಿ ಗಂಧರ್ವ ಸಭಾಭವನದಲ್ಲಿ ಜ. 19ರಂದು ಸಂಜೆ 6ಗಂಟೆಗೆ ಕೊಡಗಿನ ಅಡ್ಡಂಡ ಕಾರ್ಯಪ್ಪ ರಚಿಸಿ, ನಿರ್ದೇಶಿಸಿದ ‘ನಿಜಮಹಾತ್ಮ ಬಾಬಾಸಾಹೇಬ’ ನಾಟಕ ಉಚಿತ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ವಿಶ್ವ ಹಿಂದು ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಸಹಕಾಯದರ್ಶಿ ವಿನಾಯಕ ತಲಗೇರಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರೇರಣಾ ಸೇವಾ ಸಂಸ್ಥೆ ಹಾಗೂ ನಿರಾಮಯ ಫೌಂಡೇಷನ್ ಸಹಯೋಗದಲ್ಲಿ ಕೊಡಗಿನ ರಂಗಭೂಮಿ ಟ್ರಸ್ಟ್ ಪ್ರಸ್ತುತಪಡಿಸುತ್ತಿದೆ ಎಂದರು.
ಡಾ. ಬಾಬಾಸಾಹೇಬ ಅಂಬೇಡ್ಕರ್ ಅಚರಿಗಿದ್ದ ಖಚಿತತೆ, ನಿಷ್ಠುರತೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಅವರಿಗಿದ್ದ ನಿಲುವು, ಭಾರತ-ಪಾಕಿಸ್ತಾನ ವಿಭಜನೆ ಸಂದರ್ಭ ಮುಸ್ಲಿಂ ಸಮಾಜದ ಬಗೆಗಿನ ಅವರ ಅಭಿಪ್ರಾಯ ಮತ್ತಿತರ ಅನೇಕ ಸತ್ಯಗಳನ್ನು ನಾಟಕದಕಲ್ಲಿ ಪ್ರಸ್ತುತಪಡಿಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದು ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಕೋಶಾಧ್ಯಕ್ಷ ಸಂಜೀವ ಬಡಸ್ಕರ್, ಹುಬ್ಬಳ್ಳಿ ನಗರ ಕಾರ್ಯದರ್ಶಿ ಚೇತನರಾವ್, ನಿರಾಮಯ ಫೌಂಡೇಷನ್ ಅಧ್ಯಕ್ಷ ಗುರು ಬನ್ನಿಕೊಪ್ಪ ಇದ್ದರು.