ಹುಬ್ಬಳ್ಳಿ: hu balli ಹೊಸ ಮನೆ, ಅಂಗಡಿ ಮತ್ತು ಬಾಡಿಗೆ ವಾಣಿಜ್ಯ ಆಸ್ತಿಗಳ ಮಾರಾಟ ಕುರಿತು ಹೂವು ಬಳ್ಳಿಯ ಮೇಳವನ್ನು ಯಶಸ್ವಿ ಡೆವಲಪರ್ಸ್ ಆಶ್ರಯದಲ್ಲಿ ಜೂನ್ 26ರಿಂದ ಮೂರು ದಿನಗಳ ವರೆಗೆ ಗೋಕುಲ ರಸ್ತೆ ಕೆಇಸಿ ಎದುರಿನ ಗಾಂಧಿನಗರ ಕುಮಾರ ಪಾರ್ಕ್ ಯಶಸ್ವಿ ಎನ್ಕ್ಲೇವ್ನಲ್ಲಿ ಏರ್ಪಡಿಸಲಾಗಿದೆ.
ಜೂನ್ 26ರಂದು ಬೆಳಗ್ಗೆ 11ಕ್ಕೆ ರುದ್ರಾಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಉದ್ಘಾಟಿಸಲಾಗುವುದು. ಮಾಜಿ ಸಿಎಂ ಜಗದೀಶ ಶೆಟ್ಟರ್, ಮಲ್ಲಿಕಾರ್ಜುನ ಸಾವಕಾರ, ಜಿ.ಬಿ. ಹಳ್ಯಾಳ, ರಮೇಶ ಪಾಟೀಲ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಜೆ 6ಕ್ಕೆ ಬಿಗ್ ಬಾಸ್ ವಿಜೇತ ಹನುಮಂತ ಲಮಾಣಿ ಮತ್ತು ತಂಡದಿಂದ ರಸ ಸಂಜೆ ನಡೆಯಲಿದೆ.
ಜೂನ್ 27ರಂದು ಬೆಳಗ್ಗೆ 11ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಜೆ 6ಕ್ಕೆ ಗಂಗಾವತಿ ಪ್ರಾಣೇಶ ಮತ್ತು ತಂಡದಿಂದ ಹಾಸ್ಯ ಸಂಜೆ ನಡೆಯಲಿದೆ.
ಜೂನ್ 28ರಂದು ಬೆಳಗ್ಗೆ 11ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕೆಎಲ್ಇ ಮಾಜಿ ಅಧ್ಯಕ್ಷ ಡಾ. ಪ್ರಭಾಕರ ಕೋರೆ, ಶಂಕರಣ್ಣ ಮುನವಳ್ಳಿ, ಡಾ. ಎಸ್.ಪಿ. ಬಳಿಗಾರ, ಡಾ. ಜಿ.ಬಿ. ಸತ್ತೂರ, ವೀರೇಂದ್ರ ಕೌಜಲಗಿ, ವಿಜಯ ಮೆಟಗುಡ್ಡ, ಆನಂದ ಮನಗುಳಿ ಅತಿಥಿಗಳಾಗಿ ಪಾಲ್ಗೊಳ್ಳುವರು.