hospice care ರೋಗಿಗಳಿಗೆ ಪ್ರೀತಿ ಸ್ನೇಹದಿಂದ ಆರೈಕೆ ಮಾಡಿ

hospice care ಹುಬ್ಬಳ್ಳಿಯ ನವನಗರ ರಮಿಲಾ ಹಾಸ್ಪೆಸ್​ನಲ್ಲಿ ಬುಧವಾರ ಏರ್ಪಡಿಸಿದ್ದ ಪ್ಯಾಲಿಯೇಟಿವ್​ ಕೇರ್​ ಹಾಗೂ ಜೀವನ ಕೌಶಲ ತರಬೇತಿ ಕಾರ್ಯಾಗಾರವನ್ನು ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಉದ್ಘಾಟಿಸಿದರು. ಜಿತೇಂದ್ರ ಮಜೇಥಿಯಾ, ಡಾ. ವಿ.ಬಿ. ನಿಟಾಲಿ, ಡಾ. ಆರ್​. ಶ್ರೀವಾಣಿ, ಸವಿತಾ ಕಾಳೆ, ಮೋಹನಕುಮಾರ, ಪಿ. ಗೌತಮಿ, ಸುನೀಲಕುಮಾರ ಕುಕನೂರ, ಅಮರೇಶ ಹಿಪ್ಪರಗಿ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮಜೇಥಿಯಾ ಫೌಂಡೇಷನ್​ನಿಂದ ಪ್ಯಾಲಿಯೇಟಿವ್​ ಕೇರ್​ ತರಬೇತಿ
  • ವಿಶ್ವ ಕ್ಯಾನ್ಸರ್​ ದಿನಾಚರಣೆ
ಹುಬ್ಬಳ್ಳಿ: hospice care ಮನೆ ಅಥವಾ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಪ್ರೀತಿ, ಸ್ನೇಹದಿಂದ ಆರೈಕೆ ಮಾಡಬೇಕು, ಕಾಯಿಲೆಯ ಚಿಕಿತ್ಸೆಗಿಂತ ಅವರಿಗೆ ಆತ್ಮೀಯತೆ ಅಗತ್ಯವಾಗಿರುತ್ತದೆ, ಅದರಿಂದ ಅವರು ಗುಣಮುಖರಾಗುತ್ತಾರೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹೇಳಿದರು.
ಇಲ್ಲಿಯ ನವನಗರ ಕೆಸಿಟಿಆರ್​ಐ ಆವರಣದ ರಮಿಲಾ ಹಾಸ್ಪೆಸ್​ ಕ್ಯಾನ್ಸರ್​ ಆರೈಕೆ ಮತ್ತು ಉಪಶಮನ ಆರೈಕೆ ಕೇಂದ್ರದಲ್ಲಿ ಮಜೇಥಿಯಾ ಫೌಂಡೇಷನ್​, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸ್ವಾಮಿ ವಿವೇಕಾನಂದ ಯೂಥ್​ ಮೂವ್​ಮೆಂಟ್​ ವತಿಯಿಂದ ಬುಧವಾರ ವಿಶ್ವ ಕ್ಯಾನ್ಸರ್​ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ಪ್ಯಾಲಿಯೇಟಿವ್​ ಕೇರ್​ ಮತ್ತು ಜೀವನ ಕೌಶಲಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕಾಯಿಲೆ ಪತ್ತೆ ಹಚ್ಚಬೇಕಾದರೆ ವೈದ್ಯರು ಬೇಕು, ಇಂದಿನ ಶಿಕ್ಷಣದ ಜೊತೆಯಲ್ಲಿ ಒಬ್ಬ ರೋಗಿಯ ಆರೈಕೆ ಮಾಡುವುದು ಹೇಗೆ ಎಂಬುದನ್ನು ನಾವುಗಳು ಅರಿತುಕೊಂಡರೆ ಚಿಕಿತ್ಸೆ ನಂತರವೂ ಮನೆಯಲ್ಲಿ ರೋಗಿಗಳನ್ನು ಸರಿಯಾಗಿ ಆರೈಕೆ ಮಾಡಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಜೇಥಿಯಾ ಫೌಂಡೇಷನ್​ ಚೇರ್ಮನ್​ ಜಿತೇಂದ್ರ ಮಜೇಥಿಯಾ ಮಾತನಾಡಿ, ವಿವಿಧ ಕಾಯಿಲೆಗಳಿಂದ ನರಳುವವರಿಗೆ ಅನುಕೂಲವಾಗಬೇಕು. ಅವರನ್ನು ಸರಿಯಾಗಿ ನೋಡಿಕೊಳ್ಳಬೇಕು. ಈ ದಿಸೆಯಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಸೇವಕರು ಇದರ ಪ್ರಯೋಜನ ಪಡೆಯಬೇಕು ಎಂದರು.
50ಕ್ಕೂ ಹೆಚ್ಚು ಜನರು ಪ್ಯಾಲಿಯೇಟಿವ್​ ಕೇರ್​ ತರಬೇತಿ ಪಡೆಯಲಿದ್ದಾರೆ. ಮೋಹನಕುಮಾರ, ಡಾ. ಶ್ರೀವಾಣಿ, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net