ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಧಾರವಾಡ ವಿದ್ಯಾಗಿರಿ ಜೆಎಸ್​ಎಸ್​ ಶ್ರೀ ಮಂಜುನಾಥೇಶ್ವರ ಸೆಂಟ್ರಲ್​ ಸ್ಕೂಲ್​ ವಿದ್ಯಾರ್ಥಿಗಳನ್ನು ಕಾರ್ಯದರ್ಶಿ ಡಾ. ಅಜಿತ ಪ್ರಸಾದ್​ ಸನ್ಮಾನಿಸಿದರು.
ಧಾರವಾಡ ವಿದ್ಯಾಗಿರಿ ಜೆಎಸ್​ಎಸ್​ ಶ್ರೀ ಮಂಜುನಾಥೇಶ್ವರ ಸೆಂಟ್ರಲ್​ ಸ್ಕೂಲ್​ ವಿದ್ಯಾರ್ಥಿಗಳನ್ನು ಕಾರ್ಯದರ್ಶಿ ಡಾ. ಅಜಿತ ಪ್ರಸಾದ್​ ಸನ್ಮಾನಿಸಿದರು.
Published on
ಧಾರವಾಡ: ನಗರದ ವಿದ್ಯಾಗಿರಿ ಜೆಎಸ್​ಎಸ್​ ಶ್ರೀ ಮಂಜುನಾಥೇಶ್ವರ ಸೆಂಟ್ರಲ್​ ಸ್ಕೂಲ್​ ವಿದ್ಯಾರ್ಥಿಗಳು ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದಿದ್ದಾರೆ.
ಅನೂಪ್​ ಪೂಜಾರಿ ಚಿಲ್ಲಿ ಸ್ಪೋರ್ಟ್ಸ್​ ಕ್ಲಬ್​ ನಡೆಸಿದ ಇನ್ವೆನ್ಶನಲ್​ ಕರ್ನಾಟಕ ಕರಾಟೆ ಚಾಂಪಿಯನ್​ಶಿಪ್​ ಮತ್ತು ಟೈಗರ್​ ಮಾರ್ಶಲ್​ ಆರ್ಟ್​ ಅಕಾಡೆಮಿ ನಡೆಸಿದ ಟೈಗರ್​ ವಾರಿಯರ್​ ಕಪ್​ನಲ್ಲಿ ದ್ವೀತಿಯ ಸ್ಥಾನ ಪಡೆದಿದ್ದಾನೆ. ಧಾರವಾಡ ಚಿಲ್ಡ್ರನ್ಸ್​ ಅಕಾಡೆಮಿ ನಡೆಸಿದ ಮಕ್ಕಳ ಪ್ರತಿಭಾ ಕವಿಗೋಷ್ಠಿಯಲ್ಲಿ ರೋಹನ್​ ಮಿಶ್ರಾಂಕರ ಪ್ರಥಮ, ಆದ್ಯಶ್ರೀ ದ್ವೀತಿಯ ಸ್ಥಾನ ಪಡೆದಿದ್ದಾರೆ. ಈಶಾನಿ ದರ್ಗದ ಬೆಳಗಾವಿಯ ಅಂತರ ಶಾಲಾ ಹಾಗೂ ಕಾಲೇಜುಗಳ ಈಜು ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾಳೆ.
ಸಾಧಕ ವಿದ್ಯಾರ್ಥಿಗಳನ್ನು ಜೆಎಸ್​ಎಸ್​ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್​, ಆಡಳಿತಾಧಿಕಾರಿ ಅರಿಹಂತ ಪ್ರಸಾದ್​, ಮಹಾವೀರ ಉಪಾಧ್ಯೆ, ರಜಿನಿ ಪಾಟೀಲ ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net