ಹುಬ್ಬಳ್ಳಿ: ನಗರದ ಆಟೋ (Auto driver) ಚಾಲಕರೊಬ್ಬರು ಪ್ರಯಾಣಿಕರು ಬಿಟ್ಟು ಇಳಿದಿದ್ದ ಬ್ಯಾಗ್ ಅನ್ನು ಪೊಲೀಸ್ ಠಾಣೆಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಹಾಗೂ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಗಬ್ಬೂರ ಬೈಪಾಸ್ ಬಳಿಯ ಜಗಜ್ಯೋತಿ ಬಸವೇಶ್ವರ ಆಟೋ ನಿಲ್ದಾಣದಿಂದ ಪ್ರಯಾಣಿಕರು ಆಟೋ ಹತ್ತಿದರು. ಅವರು ಹೊಸ ಬಸ್ ನಿಲ್ದಾಣಕ್ಕೆ ತೆರಳಿದ ನಂತರ ಅವಸರದಲ್ಲಿ ಬ್ಯಾಗ್ ಆಟೋದಲ್ಲಿಯೇ ಮರೆತು ಹೋಗಿದ್ದರು.
ಆಟೋ ಚಾಲಕ ಮಂಜುನಾಥ ಅವರು ಇದನ್ನು ಗಮನಿಸಿದ ಕೂಡಲೇ ಆಟೋ ಚಾಲಕರ ಸಂದ ಅಧ್ಯಕ್ಷ ಶೇಖರಯ್ಯ ಮಠಪತಿ ಅವರಿಗೆ ವಿಷಯ ತಿಳಿಸಿದ್ದಾರೆ. ಮಠಪತಿ ಅವರು ತಕ್ಷಣವೇ ಬಸ್ ನಿಲ್ದಾಣ ಬಳಿ ಇರುವ ಗೋಕುಲ್ ರೋಡ್ ಪೊಲೀಸ್ ಠಾಣೆಗೆ ಬ್ಯಾಗ್ ಒಪ್ಪಿಸಿ ಸಂಬಂಧಪಟ್ಟವರಿಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.