ಹಿಟ್​ ಆ್ಯಂಡ್​ ರನ್​ "ಹಂತಕ' ಲಾರಿ ವಶಕ್ಕೆ

ತಮಿಳುನಾಡಿನಲ್ಲಿ ಲಾರಿ ವಶ
ತಮಿಳುನಾಡಿನಲ್ಲಿ ಲಾರಿ ವಶ
Published on
ಧಾರವಾಡ: ರಂಜಾನ್​ ಹಬ್ಬದಂದು ಬೈಕ್​ಗೆ ಡಿಕ್ಕಿ ಹೊಡೆದು ಇಬ್ಬರು ಯುವಕರ ಸಾವಿಗೆ ಕಾರಣವಾಗಿದ್ದ ಲಾರಿ ಮತ್ತು ಚಾಲಕನನ್ನು ಧಾರವಾಡ ಸಂಚಾರಿ ಠಾಣೆ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ.
ಮಾ. 21ರಂದು ಕೆಲಗೇರಿ ಸೇತುವೆ ಬಳಿ ಬೈಕ್​ಗೆ ಲಾರಿ ಡಿಕ್ಕಿ ಹೊಡೆದಿದ್ದ ಚಾಲಕ ಲಾರಿ ಸಮೇತ ಪರಾರಿಯಾಗಿದ್ದ. ಅಪಘಾತದಲ್ಲಿ ತಾಲೂಕಿನ ಲಕಮಾಪುರ ಗ್ರಾಮದ ಇಮಾಮ ಹೆಬ್ಬಳ್ಳಿ ಹಾಗೂ ಅನಾಸ್​ ಮುಲ್ಲಾನವರ ಎಂಬುವರು ಮೃತಪಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡ ಸಂಚಾರಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ತಮಿಳುನಾಡಿನಲ್ಲಿ ಲಾರಿಯನ್ನು ಪತ್ತೆ ಮಾಡಿದ್ದಾರೆ. ಚಾಲಕ ಸ್ಟಿಲ್​ ಬ್ರಿಟ್ಟೋ ಎಂಬಾತನನ್ನು ವಶಕ್ಕೆ ಪಡೆದು ಲಾರಿ ಸಮೇತ ಕರೆತಂದು ಹಿಟ್​ ಆ್ಯಂಡ್​ ರನ್​ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net