ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರ್​, ಚಾಲಕ ವಶಕ್ಕೆ

ಬೈಕ್​ಗೆ ಕಾರು ಡಿಕ್ಕಿ
ಬೈಕ್​ಗೆ ಕಾರು ಡಿಕ್ಕಿ
Published on
ಧಾರವಾಡ: ಸಂಚಾರಿ ನಿಯಮ ಉಲ್ಲಂಘಿಸಿ ಬೈಕ್​ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರನ್ನು ಬೆನ್ನತ್ತಿದ ಪೊಲೀಸರು, ಕಾರು ಸಮೇತ ಚಾಲಕನನ್ನು ವಶಕ್ಕೆ ಪಡೆದ ಟನೆ ಮಂಗಳವಾರ ನಡೆದಿದೆ.
ರಾಂಗ್​ ರೂಟ್​ಲ್ಲಿ ಬಂದ ಕಾರು, ಬೈಕ್​ನಲ್ಲಿ ಹೋಗುತ್ತಿದ್ದವನಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರನ ಕಾಲು ತುಂಡರಿಸಿದೆ. ರಸ್ತೆಯಲ್ಲಿ ನರಳುತ್ತ ಬಿದ್ದಿದ್ದ ಬೈಕ್​ ಸವಾರ ಉದಯ ಗೋವಿಂದಪ್ಪ ಕಿತ್ತಳಿ ಎಂಬುವರನ್ನು ಸಾರ್ವಜನಿಕರು ಕಾರೊಂದರಲ್ಲಿ ಆಸ್ಪತ್ರೆಗೆ ಸಾಗಿಸಿದರು. ಅಪಘಾತವಾದರೂ ಕಾರು ನಿಲ್ಲಸದೆ ಚಾಲಕ ಹುಬ್ಬಳ್ಳಿ ಕಡೆ ಪರಾರಿಯಾಗಿದ್ದ. ಸ್ಥಳದಲ್ಲಿದ್ದ ಸಂಚಾರಿ ಠಾಣೆಯ ಎಎಸ್​ಐ ಎಂ.ಜಿ. ಕುಲಕಣಿರ್ ಹಾಗೂ ಹೆಡ್​ ಕಾನ್​ಸ್ಟೇಬಲ್​ ಮಂಜುನಾಥ ಗದ್ದಿಕೇರಿ ಕಾರು ಬೆನ್ನಟ್ಟಿದ್ದರು. ನವನಗರದ ಸಮೀಪ ಕಾರನ್ನು ತಡೆದು ನವನಗರದ ಶ್ರೀಶೈಲ ಹಳ್ಳೂರ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಧಾರವಾಡ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಮಯಪ್ರಜ್ಞೆಯಿಂದ ಕಾರು ಬೆನ್ನಟ್ಟಿ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರ ಕಾರ್ಯಕ್ಕೆ ಹಿರಿಯ ಪೊಲೀಸ್​ ಅಧಿಕಾರಿಗಳು ಮತ್ತು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net