(hindu) ಹಿಂದೂ ಆರ್ಥಿಕ ಮಹಾಸಂಗಮ 20ರಿಂದ

ಹಿಂದೂ ಆರ್ಥಿಕ ಒಕ್ಕೂಟ ಹು-ಧಾ ಚಾಪ್ಟರ್‌ನಿಂದ ರಾಷ್ಟ್ರೀಯ ಮಟ್ಟದ ಹಿಂದೂ (hindu) ಆರ್ಥಿಕ ಮಹಾಸಂಗಮದ ಕರಪತ್ರಗಳನ್ನು ಹುಬ್ಬಳ್ಳಿಯಲ್ಲಿ ಬುಧವಾರ ಬಿಡುಗಡೆ ಮಾಡಲಾಯಿತು.
ಹಿಂದೂ ಆರ್ಥಿಕ ಒಕ್ಕೂಟ ಹು-ಧಾ ಚಾಪ್ಟರ್‌ನಿಂದ ರಾಷ್ಟ್ರೀಯ ಮಟ್ಟದ ಹಿಂದೂ (hindu) ಆರ್ಥಿಕ ಮಹಾಸಂಗಮದ ಕರಪತ್ರಗಳನ್ನು ಹುಬ್ಬಳ್ಳಿಯಲ್ಲಿ ಬುಧವಾರ ಬಿಡುಗಡೆ ಮಾಡಲಾಯಿತು.
Published on
ಹುಬ್ಬಳ್ಳಿ: ವಿಜಯಾನಂದ ಟ್ರಾವೆಲ್ಸ್ ಟೈಟಲ್ ಸ್ಪಾನ್ಸರ್‌ನೊಂದಿಗೆ ಹಿಂದೂ ಆರ್ಥಿಕ ಒಕ್ಕೂಟ ಹು-ಧಾ ಚಾಪ್ಟರ್‌ನಿಂದ ರಾಷ್ಟ್ರೀಯ ಮಟ್ಟದ ಹಿಂದೂ (hindu) ಆರ್ಥಿಕ ಮಹಾಸಂಗಮವನ್ನು ಹುಬ್ಬಳ್ಳಿಯ ಹೋಟೆಲ್ ಡೆನಿಸನ್ಸ್‌ನ ಮಥುರಾ ಸಭಾಂಗಣದಲ್ಲಿ ಫೆ. 20 ಮತ್ತು 21ರಂದು ಏರ್ಪಡಿಸಲಾಗಿದೆ ಎಂದು ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಟಿ.ಆರ್. ಶಿವಪ್ರಸಾದ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 20ರಂದು ಬೆಳಗ್ಗೆ 9.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಒಕ್ಕೂಟದ ಮುಖ್ಯಸ್ಥ ಶ್ರೀ ಸ್ವಾಮಿ ವಿಗ್ಯಾನಂದಜಿ, ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ. ವೀರೇಂದ್ರ ಹೆಗ್ಗಡೆ ಸಾನ್ನಿಧ್ಯ ವಹಿಸುವರು. ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಶ್ರೀನಿವಾಸ ಮಾನೆ, ತಜ್ಞರಾದ ಡಾ. ಆರ್. ವೈದ್ಯನಾಥನ್, ಹನುಮಂತರಾವ್ ಗಾಯಕ್ವಾಡ್ ಅತಿಥಿಗಳಾಗಿ ಆಗಮಿಸುವರು ಎಂದರು.
21ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಬಸವರಾಜ ಬೊಮ್ಮಾಯಿ ಅವರು ಆಗಮಿಸುವರು. ರಾಷ್ಟ್ರದ ವಿವಿಧ ಭಾಗಗಳಿಂದ ತಜ್ಞರು, ಆರ್ಥಿಕ ಚಿಂತಕರು ಈ ಮಹಾಸಂಗಮದಲ್ಲಿ ಭಾಗವಹಿಸುವರು. ಹಿಂದೂಗಳ ಆರ್ಥಿಕ ಸದೃಢತೆಗೆ ಈ ಮಹಾಸಂಗಮ ವೇದಿಕೆಯಾಗಲಿದೆ ಎಂದರು.
ಹು-ಧಾ ಚಾಪ್ಟರ್ ಅಧ್ಯಕ್ಷ ವಿಜೇಶ ಸೈಗಲ್ ಮಾತನಾಡಿ, ಭಾರತದಾದ್ಯಂತ 100ಕ್ಕೂ ಹೆಚ್ಚು ಚಾಪ್ಟರ್‌ಗಳು ಸಕ್ರಿಯವಾಗಿವೆ. ಬೆಂಗಳೂರಿನಲ್ಲಿಯೇ 37ಕ್ಕೂ ಹೆಚ್ಚು ಚಾಪ್ಟರ್‌ಗಳಿವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಐದು ಸಹಕಾರಿ ಸಂಸ್ಥೆಗಳಿವೆ. ಫೆ. 20ರಂದು ಹುಬ್ಬಳ್ಳಿಯಲ್ಲಿ ಸುವರ್ಣಶಕ್ತಿ ಸೌಹಾರ್ದ ಸಹಕಾರಿಯನ್ನು ಉದ್ಘಾಟಿಸಲಾಗುವುದು. 2027ರ ಡಿಸೆಂಬರ್‌ನೊಳಗೆ ಜಾಗತಿಕ ಸಂಪರ್ಕ ಯೋಜನೆಗಳೊಂದಿಗೆ ಸಾವಿರ ಚಾಪ್ಟರ್ ಆರಂಭಿಸುವ ಗುರಿ ಇದೆ ಎಂದರು.
ಹು-ಧಾ ಚಾಪ್ಟರ್ ಸಂಚಾಲಕ ಅರ್ಜನ ಮಹಾಜನ್, ಕಾರ್ಯದರ್ಶಿ ಗಿರೀಶ ಮಾನೆ, ಉಪಾಧ್ಯಕ್ಷ ಗೌತಮ ಬಾಫಣಾ, ಖಜಾಂಚಿ ಮುಕೇಶ ಪಾಂಚಾಲ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net