ಏ. 10ರಂದು ಇಲ್ಲಿನ ಹಾಶ್ಮಿನಗರದ ಮನೆಗೆ ನುಗ್ಗಿದ್ದ ಗುಂಪು ಫೈರೋಜ್ ಪಠಾಣ್ನನ್ನು ಭೀಕರವಾಗಿ ಹತ್ಯೆ ಮಾಡಿತ್ತು. ಇದಕ್ಕೂ ಮೊದಲು ಫೈರೋಜ್ ಮತ್ತು ಇಸ್ಮಾಯಿಲ್ ತಮಟಗಾರ ನಡುವೆ ಹಲವು ಬಾರಿ ಮೊಬೈಲ್ ಸಂಭಾಷಣೆ ನಡೆದಿತ್ತು. ಫೈರೋಜ್ ಪಠಾಣ್ ಸೇರಿ ಜಿಲ್ಲೆ ಹಾಗೂ ರಾಜ್ಯದ ಕಾಂಗ್ರೆಸ್ ಮುಖಂಡರನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೆ, "ನಿನ್ನನ್ನು ಮನೆ ಹೊಕ್ಕು ಹೊಡೆಯುತ್ತಾರೆ ಹುಷಾರಾಗಿರು' ಎಂದು ಇಸ್ಮಾಯಿಲ್ ತಮಟಗಾರ ಹೇಳಿದ್ದ ಆಡಿಯೋಗಳು ವೈರಲ್ ಆಗಿದ್ದವು. ಇದಾದ ಬಳಿಕ ಇಸ್ಮಾಯಿಲ್ ನಾಪತ್ತೆಯಾಗಿದ್ದಾರೆ.