ಪತಂಜಲಿ ಯೋಗಪೀಠ ಹರಿದ್ವಾರದ ಸಂಸ್ಥಾಪಕ ಆಯುರ್ವೆದ ರತ್ನ ಆಚಾರ್ಯ ಬಾಲಕೃಷ್ಣ ಅವರ ಜನ್ಮದಿನ
ವಿವಿಧ ಸ್ಥಳಗಳಲ್ಲಿ ಗಿಡಮೂಲಿಕೆ ದಿನಾಚರಣೆ ಆಚರಿಸಲಾಗುವುದು.
ಸಾರ್ವಜನಿಕರು ಈ ಅಭಿಯಾನದಲ್ಲಿ ಸ್ವ ಪ್ರೇರಣೆಯಿಂದ ಭಾಗವಹಿಸಬೇಕು
ಗಿಡಮೂಲಿಕೆ ಸಸ್ಯಗಳನ್ನು ವಿತರಿಸಿ ಮಾತನಾಡಿದ ಭವರಲಾಲ್ ಆರ್ಯ, ಆಯುರ್ವೆದ ರತ್ನ ಆಚಾರ್ಯ ಬಾಲಕೃಷ್ಣ ಅವರ ಜನ್ಮ ದಿನದ ಅಂಗವಾಗಿ ಆಗಷ್ಟ್ ತಿಂಗಳಿನಾದ್ಯಂತ ರಾಜ್ಯದ ಎಲ್ಲ ಜಿಲ್ಲೆ, ತಾಲೂಕು, ಗ್ರಾಮ, ವಾರ್ಡ್ಗಳಲ್ಲಿ ಉಚಿತವಾಗಿ 25 ಸಾವಿರಕ್ಕಿಂತ ಹೆಚ್ಚು ಗಿಡಮೂಲಿಕೆ ಸಸಿಗಳನ್ನು ನೆಡಲಾಗುವುದು ಎಂದರು.
ತಂಜಲಿ ಕರ್ನಾಟಕದ 1,500 ಹೆಚ್ಚು ಉಚಿತ ಯೋಗ ಕೇಂದ್ರಗಳಲ್ಲಿ ಮತ್ತು ವಿವಿಧ ಸ್ಥಳಗಳಲ್ಲಿ ಗಿಡಮೂಲಿಕೆ ದಿನಾಚರಣೆ ಆಚರಿಸಲಾಗುವುದು. ಸಾರ್ವಜನಿಕರು ಈ ಅಭಿಯಾನದಲ್ಲಿ ಸ್ವ ಪ್ರೇರಣೆಯಿಂದ ಭಾಗವಹಿಸಬೇಕು ಎಂದು ಹೇಳಿದರು.
ನಿಮ್ಮ ಮತ್ತು ಕುಟುಂಬದ ಸದಸ್ಯರ ಹುಟ್ಟು ಹಬ್ಬದ ಸಂಧರ್ಭದಲ್ಲಿ, ಜೀವನದ ವಿಶೇಷ ಶುಭ ಸಂಧರ್ಭಗಳಲ್ಲಿ ಸಸ್ಯಗಳನ್ನು ನೆಟ್ಟು ಬೆಳೆಸಿ, ಅಗ್ನಿಹೋತ್ರ, ನಿರಂತರ ಯೋಗ ಅಭ್ಯಾಸ ಮಾಡುವ ಮೂಲಕ ಪರಿಸರ ರಕ್ಷಣೆ ಮತ್ತು ಆರೋಗ್ಯಯುತ ಜೀವನ ನಡೆಸುವ ಸಂಕಲ್ಪ ಮಾಡಿರಿ ಎಂದು ತಿಳಿಸಿದರು.
ಪಾಲಿಕೆ ಸದಸ್ಯ ಶಂಕರ ಶೇಳಕೆ, ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡೆರೇಶನ್ ರಾಷ್ಟ್ರೀಯ ಅಧ್ಯಕ್ಷ ಡಾ. ಲತಾ ಮುಳ್ಳೂರ, ಪತಂಜಲಿ ಪರಿವಾರದ ಉಮಾ ಅಗಡಿ ಹಾಗೂ ಇತರರಿದ್ದರು.