helen keller ಹುಬ್ಬಳ್ಳಿಯ ಸಕ್ಷಮ ವತಿಯಿಂದ ಹೆಲೆನ್ ಕೆಲ್ಲರ್ ಜಯಂತಿ ಆಚರಿಸಲಾಯಿತು. ಪೂಜಾ ಕರವೀರಶೆಟ್ಟರ್, ಡಾ. ಸುನಿಲ ಗೋಖಲೆ, ಡಾ. ನಾಗಲಿಂಗ ಮುರಗಿ, ಶಶಿಕಾಂತ ಬಿಜವಾಡ, ಎಸ್.ಎಂ. ಕಂದಗಲ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಡಾ. ಹೆಲೆನ್ ಕೆಲ್ಲರ ಜಯಂತಿ ಆಚರಣೆ
ಅಸಾಧಾರಣ ಛಲದಿಂದ ಜಗತ್ತಿಗೆ ಮಾದರಿ
ಹುಬ್ಬಳ್ಳಿ: helen keller ಡಾ. ಹೆಲೆನ್ ಕೆಲ್ಲರ್ ಅಮೆರಿಕಾದ ಪ್ರಸಿದ್ಧ ಲೇಖಕಿ, ಶಿಕ್ಷಣ ತಜ್ಞೆ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ದೃಷ್ಟಿ ಮತ್ತು ಶ್ರವಣ ಶಕ್ತಿ ಕಳೆದುಕೊಂಡರೂ ತಮ್ಮ ಅಸಾಧಾರಣ ಛಲದಿಂದ ಜಗತ್ತಿಗೆ ಮಾದರಿಯಾದವರು. ಇಂಥವರ ದಿನಾಚರಣೆ ಮಾಡುತ್ತಿರುವುದು ಅವರ ಜೀವನ ಸಾಧನೆ ಕುರಿತು ಜಾಗೃತಿ ಮೂಡಿಸುವ ಕಾರ್ಯ ಕೈಗೊಂಡ ಸಕ್ಷಮ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಲೆಕ್ಕಪರಿಶೋಧಕಿ, ದೃಷ್ಟಿ ದಿವ್ಯಾಂಗರಾದ ಪೂಜಾ ಕರಿವೀರಶೆಟ್ಟರ ಹೇಳಿದರು.
ಸಕ್ಷಮ ನಗರ ಘಟಕದ ವತಿಯಿಂದ ಸರ್ಕಾರಿ ಅಂಧರ ಶಾಲೆಯಲ್ಲಿ ಸಕ್ಷಮ ಸಂಸ್ಥಾಪನಾ ದಿನ, ಪರಿಸರ ದಿನ ಮತ್ತು ಡಾ. ಹೆಲೆನ್ ಕೆಲ್ಲರ್ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಅತಿಥಿಗಳಾಗಿ ಮಾತನಾಡಿದರು.
ಜೀವನದ ಪ್ರತಿ ಕ್ಷಣವೂ ಸವಾಲುಗಳನ್ನು ಎದುರಿಸಿ ಜೀವನ ನಡೆಸಲು ಭಗವಂತ ಶಕ್ತಿ ನೀಡಿರುತ್ತಾನೆ. ಹೀಗಾಗಿ ಸ್ಪಷ್ಟ ಗುರಿ ಇಟ್ಟುಕೊಂಡು ಗುರುಗಳ ಸಹಾಯದೊಂದಿಗೆ ಸಾಧಿಸಿ ಜಗತ್ತಿಗೆ ಕೊಡುಗೆಯನ್ನು ನೀಡೋಣ. ಅಂಗವಿಕಲರು ಅಸಾಧ್ಯವಾದುದನ್ನು ಸಾಧಿಸಬಲ್ಲರು ಎಂಬುದನ್ನು ತೋರಿಸೋಣ ಎಂದರು.
ಸಕ್ಷಮ ಉತ್ತರ ಕರ್ನಾಟಕ ಪ್ರಾಂತ ಅಧ್ಯಕ್ಷ ಡಾ. ಸುನೀಲ ಗೋಖಲೆ ಮಾತನಾಡಿ, ಸಂಸ್ಥೆ ವತಿಯಿಂದ ಅಂಗವಿಕಲರಿಗೆ ವಿಶಿಷ್ಟ ಗುರುತಿನ ಚೀಟಿ, ಬೆಲ್ ಕಿಟ್, ಇತರೆ ಸಾಧನಗಳನ್ನು ಜೊತೆಗೆ ಯಾವುದೇ ರೀತಿಯ ಸಹಾಯ ಸಹಕಾರ ನೀಡಲು ಸದಾ ಸಿದ್ಧ ಎಂದು ಹೇಳಿದರು.
ಸಕ್ಷಮ ಉತ್ತರ ಕರ್ನಾಟಕ ಪ್ರಾಂತ ಸಹಕಾರ್ಯದರ್ಶಿ ಡಾ. ನಾಗಲಿಂಗ ಮುರಗಿ ಮಾತನಾಡಿ, ಕೀಳರಿಮೆ ಭಾವನೆಯಿಂದ ಎಷ್ಟೋ ಪ್ರತಿಭಾನ್ವಿತ ಅಂಗವಿಕಲರು ಸಮಾಜದ ಮುಖ್ಯ ವಾಹಿನಿಗೆ ಬರುತ್ತಿಲ್ಲ. ಅಂತಹ ಪ್ರತಿಭೆಗಳನ್ನು ಹುಡುಕಿ ಬೆಳಕಿಗೆ ತರುವಲ್ಲಿ ಸಕ್ಷಮ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದು ಹೇಳಿದರು.