ಪ್ರಧಾನ ಭಾಷಣ ಮಾಡಿದ ಆರ್ಥಿಕ ತಜ್ಞ ಡಾ. ಆರ್. ವೈದ್ಯನಾಥನ್, ಆರ್ಥಿಕ ಹಿಂಜರಿಕೆ ಅಥವಾ ಕುಸಿತದಂತ ಮಾತುಗಳು ಕೇವಲ ಅಮೆರಿಕ, ಜರ್ಮನಿ, ಇಂಗ್ಲಂಡನಂತಹ ಮುಂದುವರಿದ ದೇಶಗಳಿಗೆ ಸೀಮಿತವಾಗಿವೆ. ಭಾರತದಂತ ಸ್ವಯಂ ಶಿಸ್ತು, ಸುಸ್ಥಿರ ಆರ್ಥಿಕತೆ ಹೊಂದಿದ ದೇಶದಲ್ಲಿ ಅಭಿವೃದ್ಧಿ ನಿರಂತರವಾಗಿರುತ್ತದೆ. ಆವಿಷ್ಕಾರಕ್ಕಿಂತ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅಭಿವೃದ್ಧಿ ಸಾಧಿಸುವುದರಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದರು.