ಸಾವಯವ ಆಹಾರದಿಂದ ಆರೋಗ್ಯಯುತ ಜೀವನ healthy

healthy ಸಮರ್ಥ ಬಯೊಟೆಕ್ ಲಿಮಿಟೆಡ್​ನ ಚೇರ್ಮನ್ ಮಂಜುನಾಥ ಸಾನು ಅವರ ಆತ್ಮಕಥನ ‘ನಮಗೆ ನಾವೇ ಮಾದರಿ’ಯನ್ನು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಬಿಡುಗಡೆ ಮಾಡಿದರು. ಮಂಜುನಾಥ ಸಾನು, ಡಾ. ಮಂಜುನಾಥ ರೇವಣಕರ, ಅರುಣಕುಮಾರ ಹಬ್ಬು , ಇತರರಿದ್ದರು.
healthy ಸಮರ್ಥ ಬಯೊಟೆಕ್ ಲಿಮಿಟೆಡ್​ನ ಚೇರ್ಮನ್ ಮಂಜುನಾಥ ಸಾನು ಅವರ ಆತ್ಮಕಥನ ‘ನಮಗೆ ನಾವೇ ಮಾದರಿ’ಯನ್ನು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಬಿಡುಗಡೆ ಮಾಡಿದರು. ಮಂಜುನಾಥ ಸಾನು, ಡಾ. ಮಂಜುನಾಥ ರೇವಣಕರ, ಅರುಣಕುಮಾರ ಹಬ್ಬು , ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಮಗೆ ನಾವೇ ಮಾದರಿ ಆತ್ಮಕಥನ ಬಿಡುಗಡೆ ಸಮಾರಂಭದಲ್ಲಿ ಡಾ. ವಿಜಯ ಸಂಕೇಶ್ವರ ಅಭಿಮತ
  • ನಿಗದಿತ ಗುರಿ ತಲುಪಲು ಪ್ರಯತ್ನಿಸಿದರೆ ಯಶಸ್ಸು ಸಿಗುತ್ತದೆ.
  • ಸ್ವಂತ ಅಭಿವೃದ್ಧಿಗಾಗಿ ಮತ್ತೊಬ್ಬರನ್ನು ಅನುಕರಿಸಬಾರದು.
ಸಮರ್ಥ ಬಯೊಟೆಕ್ ಲಿಮಿಟೆಡ್​ನ ಚೇರ್ಮನ್ ಮಂಜುನಾಥ ಸಾನು ಅವರ ಆತ್ಮಕಥನ ‘ನಮಗೆ ನಾವೇ ಮಾದರಿ’ ಬಿಡುಗಡೆ ಹಾಗೂ ಸಮರ್ಥ ಭಾರತ ರೈತ ಸೇವಾ ಕೇಂದ್ರದ ಮಳಿಗೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇವರು ಉತ್ತಮ ಪರಿಸರ ನೀಡಿದ್ದಾನೆ. ಕೃಷಿಯು ನೈಸರ್ಗಿಕವಾಗಿದ್ದರೆ ಮನುಷ್ಯ ದೀರ್ಘಾಯುಷಿಯಾಗುತ್ತಾನೆ. ರಾಸಾಯನಿಕ ಬಳಕೆಯ ಕೃಷಿಯಿಂದಾಗಿ ವಿಷಯುಕ್ತ ಆಹಾರ ಮನುಷ್ಯನ ದೇಹ ಸೇರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಿವೃತ್ತಿಯ ನಂತರ ಅನೇಕರು ದುಶ್ಚಟಗಳ ದಾಸರಾಗುತ್ತಾರೆ. ಆದರೆ, ಕೆಲವರು ಮಾತ್ರ ನಿವೃತ್ತಿ ನಂತರವೂ ಸಮಾಜ ಸೇವೆ, ಉದ್ಯಮ ಹಾಗೂ ಇನ್ನಿತರ ಚಟುವಟಿಕೆಗಳನ್ನು ಆರಂಭಿಸುತ್ತಾರೆ ಎಂದರು.
ಪ್ರತಿಯೊಬ್ಬರೂ ತಮ್ಮ ಲಕ್ಷ್ಮಣ ರೇಖೆಯ ಗಡಿಯಲ್ಲಿಯೇ ಇದ್ದು, ನಿಗದಿತ ಗುರಿ ತಲುಪಲು ಪ್ರಯತ್ನಿಸಿದರೆ ಯಶಸ್ಸು ಸಿಗುತ್ತದೆ. ಅಡ್ಡದಾರಿ ಅನುಸರಿಸಿದರೆ ಯಶಸ್ಸು ಸಿಗುವುದಿಲ್ಲ. ಪ್ರತಿಯೊಬ್ಬರೂ ತಮ್ಮಲ್ಲಿನ ಆದರ್ಶಗಳನ್ನು ಅನುಸರಿಸಬೇಕು. ಪ್ರಾಮಾಣಿಕತೆ, ಗುರಿ ಸಾಧಿಸುವ ಛಲ ಅಳವಡಿಸಿಕೊಳ್ಳಬೇಕು. ಸ್ವಂತ ಅಭಿವೃದ್ಧಿಗಾಗಿ ಮತ್ತೊಬ್ಬರನ್ನು ಅನುಕರಿಸಬಾರದು ಎಂದು ಹೇಳಿದರು.
ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಮಾತನಾಡಿ, ಕಾನೂನು ಮೀರಿ ಗಳಿಸಿದ ಹಣದಿಂದ ಸಂತೃಪ್ತ ಜೀವನ ನಡೆಸಲು ಸಾಧ್ಯವಿಲ್ಲ. ಇಂದಿನ ಸಮಾಜ ಸಿರಿವಂತಿಕೆ ಹಾಗೂ ಅಧಿಕಾರಕ್ಕೆ ಆದ್ಯತೆ ನೀಡುತ್ತಿದೆ ಎನ್ನುವುದು ಬೇಸರದ ಸಂಗತಿ ಎಂದರು.
ಜೀವನದಲ್ಲಿ ತೃಪ್ತಿ ಕಾಣುವ ಗುಣ ಅಳವಡಿಸಿಕೊಳ್ಳಬೇಕು. ತೃಪ್ತಿ ಇದ್ದರೆ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸುತ್ತದೆ. ದುರಾಸೆಯ ಕಾರಣದಿಂದ ಭ್ರಷ್ಟಾಚಾರ, ಹಗರಣಗಳು ನಡೆಯುತ್ತವೆ. ಭವಿಷ್ಯದ ಭದ್ರತೆಗೆ ಹಣ ಗಳಿಕೆ ಬೇಕು. ಆದರೆ, ಕಾನೂನು ಚೌಕಟ್ಟಿನಲ್ಲಿ ಪ್ರಾಮಾಣಿಕವಾಗಿ ಗಳಿಸಿದ ಹಣದಿಂದ ಮಾತ್ರ ಸುಖ ಜೀವನ ನಡೆಸಲು ಸಾಧ್ಯ ಎಂದರು.
ಸಮರ್ಥ ಬಯೊಟೆಕ್ ಲಿಮಿಟೆಡ್​ನ ಚೇರ್ಮನ್ ಮಂಜುನಾಥ ಸಾನು ಮಾತನಾಡಿ, ಮಣ್ಣಿನ ಪರೀಕ್ಷೆಗಾಗಿ ಪ್ರಯೋಗಾಲಯ ಆರಂಭಿಸಿದ್ದೇವೆ. ರೈತರಿಗೆ ತಾಲೂಕುವಾರು ಹಾಗೂ ಹೋಬಳಿವಾರು ಫ್ರಾಂಚೈಸಿ ಡೀಲರ್​ಶಿಪ್ ನೀಡಲು ತೀರ್ವನಿಸಿದ್ದಾಗಿ ಹೇಳಿದರು. ಜೋಡೆತ್ತುಗಳು ಕೃಷಿಯ ಮೂಲ. ಆಧುನಿಕ ಯಂತ್ರೋಪಕರಣಗಳಿಂದಾಗಿ ಜೋಡೆತ್ತು ಸಾಕುವುದನ್ನು ರೈತರು ಬಿಡಬಾರದು. ಜಾನುವಾರಗಳ ನಿರ್ವಹಣೆಗಾಗಿ ಸರ್ಕಾರ ರೈತರಿಗೆ ನೆರವಾಗಬೇಕು. ರೈತ ತಾನು ಬೆಳೆದ ಬೆಳೆಯ ಬೆಲೆ ನಿರ್ಧರಿಸುವ ಅಧಿಕಾರ ಹೊಂದಿರಬೇಕು ಎಂದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಜೆ.ಎಚ್. ಕುಲಕರ್ಣಿ ಮಾತನಾಡಿ, ವ್ಯಾಪಾರ ಹೇಗೆ ಮಾಡಬೇಕು ಎಂಬುದರ ಬಗ್ಗೆ ರೈತರಿಗೆ ಸರ್ಕಾರದಿಂದ ತಿಳಿವಳಿಕೆ ಕಾರ್ಯಾಗಾರ ಏರ್ಪಡಿಸಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್​ನ ಮಂಗಳೂರು ಅಧ್ಯಕ್ಷ ಡಾ. ಮಂಜುನಾಥ ರೇವಣಕರ ಹಾಗೂ ಹಿರಿಯ ಪತ್ರಕರ್ತ ಅರುಣಕುಮಾರ ಹಬ್ಬು ಮಾತನಾಡಿದರು. ರಿತೇಶ ಸಾನು, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net