ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಬರ್ಟ್ ದದ್ದಾಪುರಿ ಅವರು, ಈ ಹಿಂದೆ ಪ್ರಾಧಿಕಾರ ಸದಸ್ಯನಾಗಿ ಕೆಲಸ ಮಾಡಿರುವೆ. ಆಗ ನಗರದಲ್ಲಿ ಹೈಮಾಸ್ಟ್ ದೀಪ ಅಳವಡಿಕೆ, ಸ್ಮಶಾನ ಅಭಿವೃದ್ಧಿ ಸೇರಿದಂತೆ ಅನೇಕ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದೇ ರೀತಿ ಈಗಲೂ ಮಹಾನಗರದ ಅಭಿವೃದ್ಧಿಗೆ ಹಲವು ಕನಸು, ಯೋಜನೆಗಳಿದ್ದು, ಅಧ್ಯಕ್ಷನಾಗಿ ಅವುಗಳ ಸಾಕಾರಕ್ಕೆ ಪ್ರಯತ್ನಿಸುವೆ ಎಂದರು.