hdmc permission ಪಾಲಿಕೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ

hdmc permission ಹುಬ್ಬಳ್ಳಿಯ ಮಹಾನಗರ ಪಾಲಿಕೆಯಲ್ಲಿ ಮೇಯರ್​ ಜ್ಯೋತಿ ಪಾಟೀಲ್​ ಅವರಿಗೆ ಮನವಿ ಸಲ್ಲಿಸಿದ ಸುರೇಶ ಕಿರೇಸೂರ.
hdmc permission ಹುಬ್ಬಳ್ಳಿಯ ಮಹಾನಗರ ಪಾಲಿಕೆಯಲ್ಲಿ ಮೇಯರ್​ ಜ್ಯೋತಿ ಪಾಟೀಲ್​ ಅವರಿಗೆ ಮನವಿ ಸಲ್ಲಿಸಿದ ಸುರೇಶ ಕಿರೇಸೂರ.
Published on

ಪ್ರಮುಖ ಮುಖ್ಯಾಂಶಗಳು

  • ಕಟ್ಟಡ ಪರವಾನಿಗೆ ಇ-ಸ್ವತ್ತು ವಿಳಂಬ
  • ಜನರ ಅಲೆದಾಟ ತಪ್ಪಿಸಲು ಆಗ್ರಹ
ಹುಬ್ಬಳ್ಳಿ: hdmc permission ಮಹಾನಗರ ಪಾಲಿಕೆಯಲ್ಲಿ ಕಟ್ಟಡ ಪರವಾನಿಗೆ ಹಾಗೂ ಇ-ಸ್ವತ್ತು ಸರಿಯಾದ ಸಮಯಕ್ಕೆ ಸಿಗದೇ ನಾಗರಿಕರು ಅಲೆದಾಡುವಂತಾಗಿದೆ ಎಂದು ಇಂಡಿಯನ್​ ಕಾಂಕ್ರಿಟ್​ ಇನ್​ಸ್ಟಿಟ್ಯೂಟ್​ (ಐಸಿಐ) ಪದಾಧಿಕಾರಿಗಳು ದೂರಿದ್ದಾರೆ.
ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಬಗೆ ಹರಿಸಿ ಪರಿಹಾರ ಕಂಡುಕೊಳ್ಳಬೇಕೆಂದು ಮೇಯರ್​ ಜ್ಯೋತಿ ಪಾಟೀಲ್​ ಅವರಿಗೆ ಐಸಿಐ ಹುಬ್ಬಳ್ಳಿ ಧಾರವಾಡ ಸೆಂಟರ್​ನ ಚೇರ್ಮನ್​ ಸುರೇಶ ಕಿರೇಸೂರ ಅವರು ಮನವಿ ಸಲ್ಲಿಸಿದ್ದಾರೆ.
ಸಿವಿಲ್​ ಇಂಜಿನಿಯರ್ಸ್​ಗಳು ಈಗಾಗಲೇ ಪಾಲಿಕೆಗೆ ಮನವಿ ಮಾಡಿದ್ದು, ಕಟ್ಟಡ ಪರವಾನಿಗೆ ಪಡೆಯಲು ಹಾಗೂ ಇ-ಸ್ವತ್ತು ಪಡೆಯಲು ಪ್ರತಿದಿನ ಮಹಾನಗರ ಪಾಲಿಕೆಗೆ ಎಡತಾಕುವುದನ್ನು ತಪ್ಪಿಸಬೇಕು ಎಂದು ಕೋರಿದ್ದಾರೆ.
ಅಧಿಕಾರಿಗಳು ಇಲ್ಲ ಸಲ್ಲದ ದಾಖಲಾತಿಗಳನ್ನು ಕೇಳುತ್ತಿದ್ದಾರೆ. ಕಟ್ಟಡ ಪರವಾನಿಗೆ ನಿಯಮಾವಳಿಗಳ ಪ್ರಕಾರ "ನಿರ್ಮಾಣ-' ಆನ್​ಲೈನ್​ ಮುಖಾಂತರ ಎಲ್ಲ ದಾಖಲೆಗಳನ್ನು ಸಲ್ಲಿಸಿ ಕಟ್ಟಡ ಪರವಾನಿಗೆಗೆ ಅಜಿರ್ ನೀಡಲಾಗುತ್ತದೆ. ಆದರೆ, ಅಧಿಕಾರಿಗಳು ದಾಖಲಾತಿಗಳ ಹಾರ್ಡ್​ ಕಾಪಿ ಕೇಳುತ್ತಿದ್ದಾರೆ.
ಇದರಿಂದ ಆನ್​ಲೈನ್​ ಮಾಡಿ ಏನು ಉಪಯೋಗ? ಅಲ್ಲದೇ ವಿನಾಕಾರಣ ಸಂಬಂಧವಿಲ್ಲದ ದಾಖಲೆಗಳನ್ನು ಕೇಳಿ ಜನರನ್ನು ಅಲೆದಾಡಿಸುತ್ತಿದ್ದಾರೆ ಎಂದು ದೂರಲಾಗಿದೆ.
"ನಿರ್ಮಾಣ' ಆನ್​ಲೈನ್​ ಮಾಡಿದ್ದು ಜನರ ಅನುಕೂಲಕ್ಕಾಗಿ, ಇದರಿಂದ ಮಧ್ಯವತಿರ್ಗಳ ಹಾವಳಿ ತಪ್ಪಿಸಬಹುದು. ಆದರೆ, ಅಧಿಕಾರಿಗಳು ಮತ್ತೆ ದಾಖಲೆಗಳ ಹೆಸರಿನಲ್ಲಿ ಅಲೆದಾಡಿಸುತ್ತಿರುವುದು ಆನ್​ಲೈನ್​ ವ್ಯವಸ್ಥೆಗೆ ಬೆಲೆ ಇಲ್ಲದಂತಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net