

ಪ್ರಮುಖ ಮುಖ್ಯಾಂಶಗಳು
ಹುಬ್ಬಳ್ಳಿ: hdb workshop ಇಲೆಕ್ಟ್ರಿಕ್ ವಾಹನ (ಇವಿ)
ಕ್ಷೇತ್ರ
ವು ಹೊಸ ಕೈಗಾರಿಕೆ, ತಂತ್ರಜ್ಞಾನ, ಪೂರೈಕೆ ಸರಪಳಿ ಹಾಗೂ ಹೊಸದಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ಯಮ ವಲಯದ ಪರಿವರ್ತನೆಯಾಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ ಅಭಿಪ್ರಾಯಪಟ್ಟರು.
ಕ್ಷೇ
ತ್ರವನ್ನು ಕೇವಲ ಭವಿಷ್ಯದ ಸಾರಿಗೆ ವ್ಯವಸ್ಥೆಯಾಗಿ ನೋಡದೆ, ಉತ್ತರ ಕರ್ನಾಟಕದ ಕೈಗಾರಿಕಾ ಅಭಿವೃದ್ಧಿಗೆ ದೊರೆತಿರುವ ದೊಡ್ಡ ಅವಕಾಶವಾಗಿ ನೋಡಬೇಕಾಗಿದೆ. ಹುಬ್ಬಳ್ಳಿ- ಧಾರವಾಡ- ಬೆಳಗಾವಿ ಪ್ರದೇಶವನ್ನು (ಎಚ್ಡಿಬಿ) ಇವಿ ಉತ್ಪಾದನೆ ಮತ್ತು ಘಟಕಗಳ ಪೂರೈಕೆಯ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಸಾಮರ್ಥ್ಯ ಇಲ್ಲಿದೆ. ಸ್ಥಳಿಯ ಎಂಎಸ್ಎಂಇಗಳು ಮತ್ತು ಯುವ ಉದ್ಯಮಿಗಳು ಈ ಹೊಸ ಅವಕಾಶವನ್ನು ಬಳಸಿಕೊಳ್ಳಬೇಕು ಎಂದರು.
ಅತಿಥಿಗಳಾಗಿದ್ದ ಸಂಸ್ಥೆಯ ಮಾಜಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಅವರು, ಇವಿ
ಕ್ಷೇ
ತ್ರದಲ್ಲಿ ಬ್ಯಾಟರಿ, ಮೋಟಾರ್, ಕಂಟ್ರೋಲರ್, ಚಾರ್ಜರ್, ಪವರ್ ಇಲೆಕ್ಟ್ರಾನಿಕ್ಸ್, ವಯರಿಂಗ್ ಹಾರ್ನೆಸ್, ಸೆನ್ಸರ್ಗಳು, ಹಾಗೂ ವಿವಿಧ ಆಟೋಮೊಬೈಲ್
ಗಳ ತಯಾರಿಕೆಯಲ್ಲಿ ಸ್ಥಳಿಯ ಎಂಎಸ್ಎಂಇಗಳಿಗೆ ಹೆಚ್ಚಿನ ಅವಕಾಶಗಳಿವೆ. ಈ ಅವಕಾಶಗಳನ್ನು ಬಳಸಿಕೊಂಡು ಸ್ಥಳಿಯ ಕೈಗಾರಿಕೆಗಳನ್ನು ರಾಷ್ಟ್ರೀಯ ಹಾಗೂ ಜಾಗತಿಕ ಇವಿ ಪೂರೈಕೆ ಸರಪಳಿಯೊಂದಿಗೆ ಸಂಪರ್ಕಿಸುವ ಕುರಿತು ಅರಿವು ನೀಡುವ ಕಾರ್ಯಾಗಾರ ಇದಾಗಿದೆ ಎಂದರು.
ಜೆಎಸ್ಡಬ್ಲ್ಯೂ ಸಂಸ್ಥೆಯ ಅಸೋಸಿಯೇಟ್ ಉಪಾಧ್ಯಕ್ಷ ಸಂಜಯ್ ಅಲಮೇಲಕರ ಮಾತನಾಡಿ, ಇಲೆಕ್ಟ್ರಿಕ್ ವಾಹನಗಳ
ಕ್ಷೇ
ತ್ರದ ವೇಗದ ಬೆಳವಣಿಗೆಯನ್ನು ಬಳಸಿಕೊಂಡು ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳು, ಎಂಎಸ್ಎಂಇಗಳು, ಸ್ಟಾರ್ಟ್ಅಪ್ಗಳು ಹಾಗೂ ಸ್ಥಳಿಯ ಪೂರೈಕೆದಾರರನ್ನು ಒಳಗೊಂಡ ಬಲಿಷ್ಠ ಪ್ರಾದೇಶಿಕ ಕೈಗಾರಿಕಾ ಸರಪಳಿಯನ್ನು ನಿರ್ಮಿಸುವ ಅಗತ್ಯವಿದೆ. ಇಲೆಕ್ಟ್ರಿಕ್ ವಾಹನಗಳ
ಕ್ಷೇ
ತ್ರವು ಕೇವಲ ವಾಹನಗಳ ತಯಾರಿಕೆಗೆ ಸೀಮಿತವಾಗಿರದೆ, ಬ್ಯಾಟರಿ, ಇಲೆಕ್ಟ್ರಿಕ್ ಮೋಟಾರ್, ಪವರ್ ಇಲೆಕ್ಟ್ರಾನಿಕ್ಸ್, ಚಾಜಿಂರ್ಗ್ ಮೂಲಸೌಕರ್ಯ, ಬಿಡಿಭಾಗಗಳ ಉತ್ಪಾದನೆ ಹಾಗೂ ಸಂಬಂಧಿತ ಸೇವಾ
ಕ್ಷೇ
ತ್ರಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದರು.
ಕೆಸಿಸಿಐ ಗೌರವ ಕಾರ್ಯದರ್ಶಿ ಉದಯ ರೇವಣಕರ ಮಾತನಾಡಿ, ಕೈಗಾರಿಕೆಗಳು, ಎಂಎಸ್ಎಂಇಗಳು, ಸ್ಟಾರ್ಟ್ಅಪ್ಗಳು ಮತ್ತು ತಂತ್ರಜ್ಞಾನ ಸಂಸ್ಥೆಗಳ ನಡುವೆ ಹೊಸ ಸಹಭಾಗಿತ್ವ, ತಂತ್ರಜ್ಞಾನ ವರ್ಗಾವಣೆ, ಕೌಶಲಾಭಿವೃದ್ಧಿ ಹಾಗೂ ಪೂರೈಕೆ ಸರಪಳಿ ಸಂಪರ್ಕಗಳಿಗೆ ಕಾರ್ಯಾಗಾರವು ವೇದಿಕೆಯಾಗಿದೆ. ಇವಿ ಕೈಗಾರಿಕಾ ಮೌಲ್ಯ ಸರಪಳಿ ಮತ್ತು ಉತ್ತಮ ರೈಲ್ವೆ ಲಾಜಿಸ್ಟಿಕ್ಸ್ ಸಂಪರ್ಕ ಎರಡೂ ಪರಸ್ಪರ ಪೂರಕವಾಗಿದ್ದು, ಇವುಗಳ ಸಮನ್ವಯದಿಂದ ಹುಬ್ಬಳ್ಳಿ- ಧಾರವಾಡ- ಬೆಳಗಾವಿ ಪ್ರದೇಶವನ್ನು ದೇಶದ ಪ್ರಮುಖ ಕೈಗಾರಿಕಾ ಹಾಗೂ ಲಾಜಿಸ್ಟಿಕ್ಸ್ ಹಬ್ ಆಗಿ ಅಭಿವದ್ಧಿಪಡಿಸಬಹುದು ಎಂದರು.