ಪ್ರದರ್ಶನ ಮೇಳ ಉದ್ಘಾಟಿಸಿದ ಶಾಸಕ ಮಹೇಶ ಟೆಂಗಿನಕಾಯಿ ಅವರು, ಇದೊಂದು ಕುಟುಂಬ ಸಮೇತರಾಗಿ ಬಂದು ನೋಡುವ ಮೇಳವಾಗಿದೆ. ದೇಶದ ವಿವಿಧ ಕಡೆಗಳಿಂದ ನಮ್ಮ ಕಲೆ, ಸಂಸ್ಕೃತಿ ಬಿಂಬಿಸುವ ಅಲಂಕಾರಿಕ ವಸ್ತುಗಳು ಇಲ್ಲಿವೆ. ಹೊಸ ಲೋಕವನ್ನೆ ಕಣ್ಮುಂದೆ ತರುವಂತಿದೆ. ಅವಳಿನಗರ ಹಾಗೂ ಸುತ್ತಲಿನ ಜನರಿಗೆ ಇದು ಆಕರ್ಷಕವಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ ಎಲ್ಲ ವಿಶೇಷತೆಗಳು ಒಂದೇ ಸೂರಿನಡಿ ನೋಡಲು ಹಾಗೂ ಖರೀದಿಸಲು ಸಿಗುತ್ತಿವೆ ಎಂಬುದು ವಿಶೇಷ ಎಂದರು.