ಹುಬ್ಬಳ್ಳಿ: hackthon ಎಸ್.ಡಿ.ಎಂ ಜೈನ ಮಠ ಟ್ರಸ್ಟ್ ಎಜಿಎಂ ರೂರಲ್ ಇಂಜಿನಿಯರಿಂಗ್ ಕಾಲೇಜ ಮತ್ತು ತಾಂತ್ರಿಕ ಮಹಾವಿದ್ಯಾಲಯವು ಇತ್ತೀಚೆಗೆ ಅಯೋಜಿಸಿದ್ದ ಅಗ್ರಥ್ 2ಕೆ26 ಹ್ಯಾಕ್ ಫ್ಯುಶನ್ 2.0 ರಾಷ್ಟ್ರೀಯ ತಾಂತ್ರಿಕ ಜ್ಞಾನ ಹ್ಯಾಕ್ಥಾನ್ ಸ್ಪರ್ಧೆ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸುವಲ್ಲಿ ಯಶಸ್ವಿಯಾಯಿತು.
ಇಂದಿನ ತಾಂತ್ರಿಕ ಯುಗದಲ್ಲಿ ಮಕ್ಕಳಿಗೆ ತಂತ್ರಜ್ಞಾನ ಆಧಾರಿತ ಶಿಕ್ಷಣದ ಜತೆಗೆ ಅಂತಹ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಜ್ಞಾನಾಭಿವೃದ್ಧಿಗೆ ವೇದಿಕೆ ಒದಗಿಸಲಾಯಿತು.
ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳ ಪೈಕಿ ಕೆಎಲ್ಇ ಸಂಸ್ಥೆಯ ಪಿ.ಸಿ. ಜಾಬಿನ್ ಸೈನ್ಸ್ ಕಾಲೇಜಿನ ಎಂಸಿಎ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಸೈ ಎನಿಸಿಕೊಂಡರು.
24 ತಾಸುಗಳ ಹ್ಯಾಕ್ಥಾನ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಸುಮೀತ ಜಾಧವ, ಶ್ರೀಶೈಲ ಎಂ, ಸಹನಾ ಡಿ. ಮತ್ತು ಜಯಲಕ್ಷ್ಮೀ ಎಸ್. ಭಾಗವಹಿಸಿದ್ದರು. ಇದರಲ್ಲಿ ಪ್ರಥಮ ಪ್ರಶಸ್ತಿ ಮತ್ತು 18 ಸಾವಿರ ನಗದು ಬಹುಮಾನ ಪಡೆದಿದ್ದಾರೆ.