gurudev puc ಗುರುದೇವ ಕಾಲೇಜಿನಲ್ಲಿ ಸಾಧಕರಿಗೆ ಸನ್ಮಾನ

gurudev puc ಧಾರವಾಡದ ಗುರುದೇವ ವಿಜ್ಞಾನ ಪಪೂ ಕಾಲೇಜಿನಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಖಿಲಕುಮಾರ ಹಲಗತ್ತಿ, ಮದನ್​, ಕುಮಾರ ಪೂಜಾರ, ಮಹಾಲಿಂಗ ಕಮತಗಿ, ಇತರರು ಇದ್ದರು.
gurudev puc ಧಾರವಾಡದ ಗುರುದೇವ ವಿಜ್ಞಾನ ಪಪೂ ಕಾಲೇಜಿನಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಖಿಲಕುಮಾರ ಹಲಗತ್ತಿ, ಮದನ್​, ಕುಮಾರ ಪೂಜಾರ, ಮಹಾಲಿಂಗ ಕಮತಗಿ, ಇತರರು ಇದ್ದರು.
Published on
ಹುಬ್ಬಳ್ಳಿ: gurudev puc ಧಾರವಾಡ ಭಾರತಿನಗರದ ಗುರದೇವ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗಾಗಿ "ಸಾಧಕರ ಸಂಭ್ರಮ' ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಅತಿಥಿಗಳಾಗಿದ್ದ ಗುರುದೇವ ಸಂಸ್ಥೆಯ ಅಧ್ಯಕ್ಷ ಅಖಿಲಕುಮಾರ ಹಲಗತ್ತಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಸರಿಯಾದ ಅಡಿಪಾಯ ದೊರೆತಿದೆ. ಪಿಯುಸಿ ಫಲಿತಾಂಶವನ್ನು ಉನ್ನತಿಕರಿಸಿದ ವಿದ್ಯಾರ್ಥಿಗಳ ಸಾಧನೆ ಶ್ಲಾನೀಯ ಎಂದರು.
ಗುರುದೇವ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯ ಪ್ರಾಚಾರ್ಯ ಮದನ್​ ಇ.ಜಿ. ಮಾತನಾಡಿ, ಮೊದಲ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳ ವಿವರ ನೀಡಿ, ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗದಗ ಕಾಲೇಜಿನ ಪ್ರಾಚಾರ್ಯ ಕುಮಾರ ಪೂಜಾರ, ಪಾಲಕರ ಬೆಂಬಲ, ಉಪನ್ಯಾಸಕರ ನಿರಂತರ ಪರಾಮರ್ಶೆ, ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಉತ್ತಮ ಫಲಿತಾಂಶಕ್ಕೆ ಕಾರಣವಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದರು.
ವಲಯಾಧಿಕಾರಿ ಮಹಾಲಿಂಗ ಕಮತಗಿ, ಫಲಿತಾಂಶದ ವಿವರಣೆ ನೀಡಿದರು. ವಿನಾಯಕ ರಗಟಿ ಕಾರ್ಯಕ್ರಮ ನಿರೂಪಿಸಿದರು, ಡಾ. ಅವಿನಾಶ ಅಮ್ಮನಗಿ ಸ್ವಾಗತಿಸಿದರು. ಡಾ. ಶ್ರೀಧರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net