gsb conclave ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಅಧ್ಯಕ್ಷ ರಮೇಶ ನಾಯಕ, ಮಹೇಶ ಮಾನಗೆ, ಪ್ರಮೋದ ಕಾಮತ, ಸದಾನಂದ ಕಾಮತ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜಿಎಸ್ಬಿ ಸಮಾಜದಿಂದ ಎಂಎಸ್ಎಂಇ ಸಮಾವೇಶ
ವಿವಿಧ ಕ್ಷೇತ್ರದ ತಜ್ಞರಿಂದ ಉಪನ್ಯಾಸ
ಹುಬ್ಬಳ್ಳಿ: gsb conclave ಗ್ಲೋಬಲ್ ಚೇಂಬರ್ ಆಫ್ ಸಾರಸ್ವತ ಎಂಟ್ರಪ್ರಿನರ್ಸ್ (ಜಿಸಿಎಸ್ಇ) ಹಾಗೂ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಸಂಯುಕ್ತ ಆಶ್ರಯದಲ್ಲಿ ಎಂಎಸ್ಎಂಇ ಹಾಗೂ ಸ್ಟಾರ್ಟಅಪ್ ಸಮಾವೇಶವನ್ನು ಜೂನ್ 6ರಂದು ಬೆಳಗ್ಗೆ 9.30ಕ್ಕೆ ಜೆ.ಸಿ. ನಗರದ ಜಿಎಸ್ಬಿ ಸಮಾಜದ ಆರ್.ಪಿ.ಕೆ. ಹಾಲ್ನಲ್ಲಿ ಏರ್ಪಡಿಸಲಾಗಿದೆ.
ಸಮಾಜದ ಅಧ್ಯಕ್ಷ ರಮೇಶ ನಾಯಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಕೇಂದ್ರ ಸರ್ಕಾರ ಎಂಎಸ್ಎಂಇ ಹಾಗೂ ನವೋದ್ಯಮಕ್ಕೆ ಉತ್ತೇಜನ ನೀಡುತ್ತ ಬಂದಿದೆ. ಈ ಬಗ್ಗೆ ಸಮಾಜದ ಯುವಕರು ಹಾಗೂ ಉದ್ಯಮಿಗಳಿಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಕಾನ್ಕ್ಲೇವ್ ಆಯೋಜಿಸಲಾಗಿದೆ ಎಂದರು.
ಸಮಾವೇಶದಲ್ಲಿ ಮಹತ್ವದ ಗೋಷ್ಠಿಗಳು ನಡೆಯಲಿವೆ. ಬ್ರ್ಯಾಂಡಿಂಗ್- ಮಾರ್ಕೆಟಿಂಗ್ ವಿಷಯದ ಬಗ್ಗೆ ಗಣೇಶ ಶೆಣೈ, ವ್ಯವಹಾರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕುರಿತು ಆರ್.ಎಸ್. ಶಾನಭಾಗ, ಸಾಂಪ್ರದಾಯಿಕ ಎಂಎಸ್ಎಂಇ ಯಿಂದ ಆಧುನಿಕ ಸ್ಟಾರ್ಟಅಪ್ ಕಡೆ- ಪುನರ್ ರಚನೆ ಹಾಗೂ ಪರಿವರ್ತನೆ ಬಗ್ಗೆ ಸುಹಾಸ ಪ್ರಭು.
ಎಂಎಸ್ಎಂಇ ಟೌನಹಾಲ್ ಕುರಿತು ಸಂಕೇತ ನಾಯಕ, ಉದ್ಯಮಶೀಲತೆ ಅಗತ್ಯ ಕೌಶಲ ಅಭಿವೃದ್ಧಿ ವಿಷಯವಾಗಿ ಅರವಿಂದ ಬಾಳೇರ ಹಾಗೂ ಕುಟುಂಬ ಉದ್ಯಮಗಳನ್ನು ಕಾರ್ಪೊರೇಟ್ ರೂಪಕ್ಕೆ ಪರಿವರ್ತನೆ ಬಗ್ಗೆ ಉಲ್ಲಾಸ ಕಾಮತ್.
ಎಸ್ಎಂಇ ಯಿಂದ ಐಪಿಒ ವರೆಗೆ ಯಶಸ್ಸಿನ ಪಯಣ ಕುರಿತು ಅನೂಪ ಪೈ ಅವರು ಮಾತನಾಡಲಿದ್ದಾರೆ ಎಂದು ಹೇಳಿದರು.
ಸಮಾವೇಶ ಸಮಿತಿ ಸದಸ್ಯ ಮಹೇಶ ಮಾನಗೆ ಮಾತನಾಡಿ, ಕಾನ್ಕ್ಲೇವ್ ಉದ್ಘಾಟನೆ ಸಮಾರಂಭಕ್ಕೆ ಅತಿಥಿಯಾಗಿ ಖ್ಯಾತ ಮಕ್ಕಳ ತಜ್ಞ ಡಾ. ರಾಜನ್ ದೇಶಪಾಂಡೆ ಭಾಗವಹಿಸಲಿದ್ದಾರೆ.
ಶಿರಸಿ, ಯಲ್ಲಾಪುರ, ಗೋವಾ, ಹಳಿಯಾಳ, ದಾಂಡೇಲಿ ಮುಂತಾದ ಕಡೆಗಳಿಂದ 300ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಸಮಾಜದ ಉದ್ಯಮಶೀಲ ಮನಸ್ಸುಳ್ಳ ಯುವಕರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಉಚಿತ ನೋಂದಣಿಗೆ ಅವಕಾಶ ನೀಡಲಾಗಿದೆ. ಉದ್ಯಮಶೀಲತೆ ಆರ್ಥಿಕ ಬೆಳವಣಿಗೆ ಮತ್ತು ಸ್ವಾವಲಂಬಿ ಬದುಕು ಇಂದಿನ ಅಗತ್ಯವಾಗಿದ್ದು, ಇದಕ್ಕೆ ಉತ್ತೇಜನ ನೀಡಲಾಗುತ್ತದೆ ಎಂದರು.