ಹುಬ್ಬಳ್ಳಿ: gruhalaxmi anniversary ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿಯೋಜನೆಯ ಮೂರನೇ ವಾರ್ಷಿಕೋತ್ಸವವನ್ನು ನಗರದಲ್ಲಿ ವಿಭಿನ್ನವಾಗಿ ಆಚರಿಸಲಾಯಿತು.
ಯೋಜನೆ ಫಲಾನುಭವಿಗಳು ರಾಜ್ಯಾದ್ಯಂತ ಅರ್ಥಪೂರ್ಣವಾಗಿ ಆಚರಿಸುತ್ತಿದ್ದು, ಪರಿಸರ ಕಾಳಜಿ ಮೆರೆಯುವ ಸಲುವಾಗಿ ಸಾವಿರ ಸಸಿಗಳನ್ನು ನೆಡುವ ಅಭಿಯಾನ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಭಾಗವಾಗಿ ಹುಬ್ಬಳ್ಳಿಯ ವಾರ್ಡ್ ನಂಬರ್ 47ರ ಕುಂಭಕೋಣಂ ಪ್ಲಾಟ್ ಗಾರ್ಡನ್ನಲ್ಲಿ ಸಸಿ ನೆಡಲಾಯಿತು. ನಗರದ ನೂರಾರು ಫಲಾನುಭವಿಗಳು ಹಾಗೂ ಸ್ಥಳಿಯ ನಿವಾಸಿಗಳು ಪಾಲ್ಗೊಂಡು ಸಂಭ್ರಮಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ಗೃಹಲಕ್ಷ್ಮಿ ಯೋಜನೆ ಕೇವಲ ಆರ್ಥಿಕ ನೆರವಲ್ಲ, ಇದು ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಮತ್ತು ಆತ್ಮಗೌರವದ ಸಂಕೇತವಾಗಿದೆ.
ಸಸಿ ನೆಟ್ಟು ಗಿಡ ಬೆಳೆಸಿದಂತೆ, ಈ ಯೋಜನೆಯು ಕುಟುಂಬದ ಭವಿಷ್ಯವನ್ನು ಕಟ್ಟುವ ಕೆಲಸ ಮಾಡುತ್ತಿದೆ ಎಂದರು.
ರಾಜ್ಯದ 1.24 ಕೋಟಿಗೂ ಹೆಚ್ಚು ಮಹಿಳೆಯರ ಖಾತೆಗೆ ಈಗಾಗಲೇ 31 ಕಂತುಗಳಲ್ಲಿ ತಲಾ 62 ಸಾವಿರ ರೂ. ನೇರವಾಗಿ ಜಮೆಯಾಗಿದೆ. ಈ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಬದ್ಧವಾಗಿದೆ ಎಂದು ತಿಳಿಸಿದರು.