grow green ಮುಂದಿನ ಪೀಳಿಗೆಗಾಗಿ ಪರಿಸರ ಉಳಿಸೋಣ

ಡಾ.ಕೆ.ಎಫ್. ಕಮ್ಮಾರ ಸೇರಿ ಹಲವು ವೈದ್ಯರಿಗೆ grow green ಗ್ರೋ ಗ್ರೀನ್ ಪೆಡಲರ್ಸ್ ಅಧ್ಯಕ್ಷರಾದ ಬಾಲಚಂದ್ರ ಡಂಗನವರ ಸಸಿ ನೀಡಿದರು.
ಡಾ.ಕೆ.ಎಫ್. ಕಮ್ಮಾರ ಸೇರಿ ಹಲವು ವೈದ್ಯರಿಗೆ grow green ಗ್ರೋ ಗ್ರೀನ್ ಪೆಡಲರ್ಸ್ ಅಧ್ಯಕ್ಷರಾದ ಬಾಲಚಂದ್ರ ಡಂಗನವರ ಸಸಿ ನೀಡಿದರು.
Published on
ಹುಬ್ಬಳ್ಳಿ: ವಿಶ್ವ ಪರಿಸರ ದಿನ ನಿಮಿತ್ತ ಇಲ್ಲಿಯ ಕರ್ನಾಟಕ ವೈದ್ಯಕೀಯ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ.ಕೆ.ಎಫ್. ಕಮ್ಮಾರ ಸೇರಿದಂತೆ ಹಲವು ವೈದ್ಯರಿಗೆ ಗ್ರೋ ಗ್ರೀನ್ grow green ಪೆಡಲರ್ಸ್ ಅಧ್ಯಕ್ಷರಾದ ಬಾಲಚಂದ್ರ ಡಂಗನವರ ಅವರು ಶನಿವಾರ ಸಸಿ ನೀಡಿ ಗೌರವಿಸಿದರು.
ಡಾ.ಕೆ.ಎಫ್. ಕಮ್ಮಾರ ಮಾತನಾಡಿ, ಪರಿಸರ ಸಂರಕ್ಷಣೆಯಿಂದ ಮನುಕುಲ ಉಳಿಯುತ್ತದೆ. ಹೀಗಾಗಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಮುಂದಿನ ಪೀಳಿಗೆಗೆ ನಾವು ಕೊಡುವ ಕೊಡುಗೆ ಇದೊಂದೇ ಎಂದರು.
ಗ್ರೋ ಗ್ರೀನ್ ಪೆಡಲರ್ಸ್ ಅಧ್ಯಕ್ಷ ಬಾಲಚಂದ್ರ ಡಂಗನವರ ಅವರು ಮಾತನಾಡಿ, ಸಸಿ ನೆಡುವುದರಿಂದ ಮಾತ್ರ ನಾವು ಪರಿಸರ ಉಳಿಸಿದಂತೆ ಆಗುವುದಿಲ್ಲ. ಸಸಿಗಳು ಹೆಮ್ಮರವಾಗಿ ಬೆಳೆಯುವವರೆಗೆ ನಾವು ಸಂರಕ್ಷಣೆ, ಆರೈಕೆ ಮಾಡುತ್ತಿರಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯತತ್ಪರರಾಗಬೇಕು ಎಂದರು.
ನೂತನವಾಗಿ ನಿರ್ದೇಶಕರಾಗಿ ನೇಮಕವಾದ ಡಾ.ಕೆ.ಎಫ್. ಕಮ್ಮಾರ ಅವರಿಗೆ ಇದೇ ವೇಳೆ ಗೌರವಿಸಿ ಗುಣಗಾನ ಮಾಡಲಾಯಿತು.
ವೈದ್ಯಕೀಯ ಅಧೀಕ್ಷಕರಾದ ಡಾ. ಈಶ್ವರ ಹಸಬಿ, ಡಾ. ರಾಜಾಶಂಕರ ಎಸ್., ವೈದ್ಯರಾದ ಡಾ. ಮಿತಾಕ್ಷರಿ ಹೂಗಾರ, ಡಾ. ಅಮೃತ್, ಡಾ.ಎಸ್.ವೈ. ಮುಲ್ಕಿಪಾಟೀಲ, ಡಾ. ಸುನಿಲ ಬಿರಾದಾರ, ಡಾ. ರಾಜಶೇಖರ ದುಂಡರೆಡ್ಡಿ, ಡಾ. ವರ್ಷಾ ಬಂಗಾರಶೆಟ್ಟರ್, ಸಿಎಒ ರಮೇಶ ಕಳಸದ, ಆವರಣಾಧಿಕಾರಿ ಸಿ.ಜಿ. ಜಿನಗಾ, ಆರ್ಥಿಕ ಸಲಹೆಗಾರ್ತಿ ಅಂಜನಾ ಢವಳೇಶ್ವರ, ಮೆಹಬೂಬ್ ಖಾನ್, ಭರತ್ ಕಲ್ಲೇದ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net