ಸಂಗೀತದೊಂದಿಗೆ ಸಾಮೂಹಿಕ ಧ್ಯಾನ meditation

meditation ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸೀನಿಯರ್ ಪಿರಾಮಿಡ್ ಮಾಸ್ಟರ್ ವಿಶಾಲಾಕ್ಷಿ ಆಕಳವಾಡಿ.
meditation ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸೀನಿಯರ್ ಪಿರಾಮಿಡ್ ಮಾಸ್ಟರ್ ವಿಶಾಲಾಕ್ಷಿ ಆಕಳವಾಡಿ.
Published on

ಪ್ರಮುಖ ಮುಖ್ಯಾಂಶಗಳು

  • ಬುದ್ಧ ಪೂರ್ಣಿಮಾ
  • ಹುಬ್ಬಳ್ಳಿ ಪಿರಾಮಿಡ್ ಧ್ಯಾನಿಗಳ ಸಂಘ ಆಯೋಜನೆ
  • ಧ್ಯಾನಾಸಕ್ತರಿಗೆ ಉಚಿತ ವಸತಿ, ಉಪಾಹಾರ ಮತ್ತು ಊಟದ ವ್ಯವಸ್ಥೆ ಒದಗಿಸಲಾಗಿದೆ
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸೀನಿಯರ್ ಪಿರಾಮಿಡ್ ಮಾಸ್ಟರ್ ವಿಶಾಲಾಕ್ಷಿ ಆಕಳವಾಡಿ, ಅಂದು ಬೆಳಗ್ಗೆ 5 ರಿಂದ ಸಂಜೆ 5 ಗಂಟೆಯವರೆಗೆ ಉತ್ಸವ ನಡೆಯಲಿದೆ. ಸುಮಾರು 2 ಸಾವಿರ ಧ್ಯಾನಾಸಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಂಗೀತದೊಂದಿಗೆ ಸಾಮೂಹಿಕ ಧ್ಯಾನ ನಡೆಯಲಿದೆ ಎಂದರು.
ಎಲ್ಲ ಧ್ಯಾನಾಸಕ್ತರಿಗೆ ಉಚಿತ ವಸತಿ, ಉಪಾಹಾರ ಮತ್ತು ಊಟದ ವ್ಯವಸ್ಥೆ ಒದಗಿಸಲಾಗಿದೆ ಎಂದು ಹೇಳಿದರು.
ಬೆಳಗಿನಜಾವ 5 ಗಂಟೆಯಿಂದ 8ರವರೆಗೆ ಸಂಗೀತನಾದ ಧ್ಯಾನ ಹಾಗೂ ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಜ್ಞಾನ ಹಂಚಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಬೆಳಗ್ಗೆ 9 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದರು.
ಬೆಂಗಳೂರಿನ ಪ್ರೇಮನಾಥ, ಬಂಡಿವಾಡದ ಸದ್ಗುರು ಸಮರ್ಥ ಡಾ. ಎ.ಸಿ. ವಾಲಿ, ಮೈಸೂರಿನ ಸಿ. ಕೃಷ್ಣಮೂರ್ತಿ, ಕುಡುಚಿಯ ಪಿ. ರಾಜೀವ, ಗಂಗಾವತಿಯ ಲಲಿತಾ ನಾರಾಯಣ ವಗ್ಗಾ, ಹೊಸಪೇಟೆಯ ವೆಂಕಟೇಶ ಕಾಕುಬಾಳ ಪಾಲ್ಗೊಳ್ಳುವರು.
ಸಂಜೆ ಹಾಸ್ಯಕಲಾವಿದ ಗಂಗಾವತಿ ಪ್ರಾಣೇಶ ಅವರಿಂದ ಹಾಸ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.
ಕಳೆದ ವರ್ಷ ನೃಪತುಂಗ ಬೆಟ್ಟ ಬಳಿಯ ಪಿರಾಮಿಡ್ ಕೇಂದ್ರದಲ್ಲಿ ಬುದ್ಧ ಪೂರ್ಣಿಮಾ ಉತ್ಸವ ಏರ್ಪಡಿಸಲಾಗಿತ್ತು. ಆಗ ಸಾವಿರಕ್ಕೂ ಹೆಚ್ಚು ಧ್ಯಾನಾಸಕ್ತರು ಪಾಲ್ಗೊಂಡಿದ್ದರು. ಜಾಗದ ಕೊರತೆಯಿಂದಾಗಿ ಈ ಬಾರಿ ಶ್ರೀನಿವಾಸ ಗಾರ್ಡನ್​ನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಧ್ಯಾನಕ್ಕೆ ಅನುಕೂಲವಾಗಲೆಂಬ ಉದ್ದೇಶದಿಂದ ಶ್ರೀನಿವಾಸ ಗಾರ್ಡನ್​ನಲ್ಲಿ ವಿವಿಧೆಡೆ ಕೃತಕ ಪಿರಾಮಿಡ್​ಗಳನ್ನು ಇರಿಸಲಾಗುವುದು ಎಂದರು.
ಹೆಚ್ಚುತ್ತಿರುವ ಅನಾರೋಗ್ಯ, ಸಂಬಂಧಗಳಲ್ಲಿ ಬಿರುಕು ಹಾಗೂ ಇನ್ನಿತರ ಸಮಸ್ಯೆಗಳಿಗೆ ಧ್ಯಾನ ಯೋಗ್ಯ ಪರಿಹಾರ. ಪ್ರತಿಯೊಬ್ಬರೂ ಧ್ಯಾನ ಮಾಡಬೇಕು ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಕಾರ್ಯದರ್ಶಿ ನೀಲಕಂಠ ಆಕಳವಾಡಿ, ಧರ್ಮದರ್ಶಿ ಲಲಿತ ಶಾಹ, ಜೀವನ ವಸ್ತ್ರದ ಅವರು ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net