ಗ್ರಿಡ್ ಸ್ಥಿರತೆಗೆ (Grid Stability) ಪೂರಕ ತಂತ್ರಜ್ಞಾನ ಸಂಶೋಧಿಸಿ
ಹುಬ್ಬಳ್ಳಿಯ (Grid Stability) ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅಡ್ವಾನ್ಸ್ಡ್ ಸೈನ್ಸಸ್ ವತಿಯಿಂದ ಆಯೋಜಿಸಿರುವ ಭಾರತೀಯ ರಸಾಯನಶಾಸ್ತ್ರಜ್ಞರ ಮಂಡಳಿಯ ಮೂರು ದಿನಗಳ 44ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೋಮವಾರ ಉದ್ಘಾಟಿಸಿದರು. ಪದ್ಮಶ್ರೀ ಆಶುತೋಷ ಶರ್ವ, ಪ್ರೊ. ಅಶೋಕ ಶೆಟ್ಟರ್, ರಂಜಿತ ವರ್ವ, ಪ್ರೊ. ರಾಜೇಶ ಧಾಕರೆ, ಪ್ರೊ. ಪ್ರಕಾಶ ತೇವರಿ, ಪ್ರೊ. ಮನೋಜ ಕುಮಾರ ರಾವತ, ಪ್ರೊ. ನಾಗರಾಜ ಶೆಟ್ಟಿ ಇದ್ದರು.
ಹುಬ್ಬಳ್ಳಿ: ನವೀಕರಿಸಬಹುದಾದ (Grid Stability) ಇಂಧನ ಉತ್ಪಾದನೆಯಲ್ಲಿ ಭಾರತ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಸಾಧನೆ ದಾಖಲಿಸಿದೆ. ಇದಕ್ಕೆ ತಕ್ಕಂತೆ ಸಂಗ್ರಹ ಸಾಮರ್ಥ್ಯ ಹೆಚ್ಚಳ ಹಾಗೂ ಗ್ರಿಡ್ ಸ್ಥಿರತೆಗೆ ಪೂರಕವಾದ ತಂತ್ರಜ್ಞಾನಗಳ ಸಂಶೋಧನೆಗೆ ವಿಜ್ಞಾನಿಗಳು ಮುಂದಾಗಬೇಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅಡ್ವಾನ್ಸ್ಡ್ ಸೈನ್ಸಸ್ ವತಿಯಿಂದ ಆಯೋಜಿಸಿರುವ ಭಾರತೀಯ ರಸಾಯನಶಾಸ್ತ್ರಜ್ಞರ ಮಂಡಳಿ(ಐಸಿಸಿ)ಯ ಮೂರು ದಿನಗಳ 44ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಉಷ್ಣ ವಿದ್ಯುತ್ಗಿಂತ ಸೌರ ಶಕ್ತಿ, ಪವನ ಶಕ್ತಿಯಂಥ ನವೀಕರಿಸಬಹುದಾದ ಇಂಧನಗಳ ಉತ್ಪಾದನೆಯು ಅಗ್ಗವಾದವು. ಇದರ ಉತ್ಪಾದನೆಯಲ್ಲಿ ಭಾರತ ಅಪರಿಮಿತ ಪ್ರಗತಿ ಸಾಧಿಸುತ್ತಿರುವಾಗ ಸಂಗ್ರಹ ಸಾಮರ್ಥ್ಯ ಹೆಚ್ಚಳ ಹಾಗೂ ಗ್ರಿಡ್ ಸ್ಥಿರತೆ ಎಂಬ ಸವಾಲುಗಳನ್ನು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಹೆಚ್ಚು ಸಂಶೋಧನೆಗಳು ಆಗಲಿ ಎಂದರು.
ಮುಖ್ಯ ಭಾಷಣ ಮಾಡಿದ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಅಧ್ಯಕ್ಷ ಪದ್ಮಶ್ರೀ ಅಶುತೋಷ ಶರ್ವ, ಹವಾಮಾನ ಬದಲಾವಣೆಯು ತಂದಿರುವ ಸಮಸ್ಯೆಗಳು ಸಾಮಾನ್ಯವಾದುದಲ್ಲ. ಇದು ಹಲವು ಕ್ಷೇತ್ರಗಳನ್ನು ಬಾಧಿಸುತ್ತಿದೆ. ಹವಾಮಾನ ಬದಲಾವಣೆಯಿಂದ ಆಗಿರುವ ಸಮಸ್ಯೆಗಳನ್ನು ಎದುರಿಸುವಲ್ಲಿ ರಸಾಯನ ಶಾಸ್ತ್ರಜ್ಞರು ಬಹು ಮುಖ್ಯ ಪಾತ್ರ ನಿಭಾಯಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಸಮ ಕುಲಾಧಿಪತಿ ಪ್ರೊ. ಅಶೋಕ ಶೆಟ್ಟರ್ ಮಾತನಾಡಿ, ಅಭಿವೃದ್ಧಿಯಲ್ಲಿ ವೈಜ್ಞಾನಿಕ ಸಂಶೋಧನೆ ಅನಿವಾರ್ಯ. ವಿಜ್ಞಾನ ಮತ್ತು ತಂತ್ರಜ್ಞಾನ ಒಟ್ಟಿಗೆ ಸಾಗಬೇಕು ಎಂದರು.
ಐಸಿಸಿ ಅಧ್ಯಕ್ಷ ರಂಜಿತ ವರ್ವ, ಕಾರ್ಯದರ್ಶಿ ಪ್ರೊ. ರಾಜೇಶ ಧಾಕರೆ ಮಾತನಾಡಿದರು.
ವಿವಿ ಕುಲಪತಿ ಪ್ರೊ. ಪ್ರಕಾಶ ತೇವರಿ, ಐಸಿಸಿ ಖಜಾಂಚಿ ಪೊ›. ಮನೋಜ ಕುಮಾರ ರಾವತ ಇದ್ದರು. ಸಮ್ಮೇಳನ ಸಂಚಾಲಕ ಪ್ರೊ. ನಾಗರಾಜ ಶೆಟ್ಟಿ ವಂದಿಸಿದರು.