greenary ಯುವಕರು ಸಸಿ ನೆಟ್ಟು ಪೋಷಿಸಲಿ

greenary ಹುಬ್ಬಳ್ಳಿ ಅಮರಗೋಳ ಅಶ್ವಮೇಧ ಪಾರ್ಕ್​ನಲ್ಲಿ ಪರಿಸರ ದಿನದ ಅಂಗವಾಗಿ ಸಸಿ ನೆಡಲಾಯಿತು. ಪ್ರಕಾಶ ದಾಸನೂರ, ಈಶ್ವರಗೌಡ ಪಾಟೀಲ, ನಜೀರ ಅಹ್ಮದ ಕೋಲಕಾರ, ಇತರರು ಇದ್ದರು.
greenary ಹುಬ್ಬಳ್ಳಿ ಅಮರಗೋಳ ಅಶ್ವಮೇಧ ಪಾರ್ಕ್​ನಲ್ಲಿ ಪರಿಸರ ದಿನದ ಅಂಗವಾಗಿ ಸಸಿ ನೆಡಲಾಯಿತು. ಪ್ರಕಾಶ ದಾಸನೂರ, ಈಶ್ವರಗೌಡ ಪಾಟೀಲ, ನಜೀರ ಅಹ್ಮದ ಕೋಲಕಾರ, ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಕಾಶ ದಾಸನೂರ ಸಲಹೆ
  • ಅಶ್ವಮೇಧ ಪಾರ್ಕನಲ್ಲಿ ಪರಿಸರ ಜಾಗೃತಿ
ಹುಬ್ಬಳ್ಳಿ: greenary ಪರಿಸರದ ಬಗ್ಗೆ ಎಲ್ಲರಿಗೂ ಕಾಳಜಿ ಇರಬೇಕು, ಭೂಮಿ ಮೇಲೆ ಗಿಡಮರಗಳು ಹೆಚ್ಚಾಗಿದ್ದರೆ ಉತ್ತಮವಾದ ಗಾಳಿ, ಮಳೆ ಲಭ್ಯವಾಗುತ್ತದೆ ಎಂದು ಉತ್ಸವ ರಾಕ್​ ಗಾರ್ಡನ್​ ನಿರ್ದೇಶಕ ಪ್ರಕಾಶ ದಾಸನೂರ ಹೇಳಿದರು.
ಇಲ್ಲಿಯ ಅಮರಗೋಳ ಅಶ್ವಮೇಧ ಪಾರ್ಕ್​ ಅಭಿವದ್ಧಿ ಸಂಘ ಆಯೋಜಿಸಿದ್ದ ಪರಿಸರ ಜಾಗೃತಿ ಹಾಗೂ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಒಂದರೆಡು ಗಿಡಗಳನ್ನಾದರೂ ನೆಟ್ಟು ಬೆಳಸುವ ಪರಿಪಾಠ ಬೆಳೆಸಿಕೊಳ್ಳಬೇಕು. ಅಂದಾಗ ಪರಿಸರ ದಿನಕ್ಕೆ ಅರ್ಥ ಬರುತ್ತದೆ ಎಂದರು.
ಅಶ್ವಮೇಧ ಪಾರ್ಕ್​ ಅಭಿವೃದ್ಧಿ ಸಂಘದ ಅಧ್ಯಕ್ಷ ಈಶ್ವರಗೌಡ ಪಾಟೀಲ ಮಾತನಾಡಿ, ಬಡಾವಣೆಗಳಲ್ಲಿ ಮನೆ ಅಕ್ಕಪಕ್ಕದ ಜಾಗದಲ್ಲಿ ಗಿಡ ಮರ ಬೆಳೆಸುವ ಮೂಲಕ ತಂಪಿನ ವಾತಾವರಣ ಸೃಷ್ಟಿಗೆ ಕೈ ಜೋಡಿಸಬೇಕು ಎಂದರು.
ಅಶ್ವಮೇಧ ಬಡಾವಣೆಯಲ್ಲಿ ನಿವಾಸಿಗಳು ಸಸಿ ನೆಡುವ ಮೂಲಕ ಪರಿಸರ ದಿನ ಆಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net