green day ನವಲಗುಂದ ತಾಲೂಕಿನ ಖನ್ನೂರಿನ ಆರ್ವಿಎಸ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಪರಿಸರ ದಿನ ಆಚರಿಸಲಾಯಿತು. ಸುರೇಶ ಅಂಗಡಿ, ಲತಾ ಸಿದ್ದರಾಮಶೆಟ್ಟರ್, ಫಿರೋಜಾ ಖಾನಂ, ವಿಜಯ ಇತರರು ಇದ್ದರು.
ಮಕ್ಕಳು ಸ್ವತಃ ಗಿಡಗಳನ್ನು ತಂದು ಶಾಲೆ ಆವರಣದಲ್ಲಿ ನೆಟ್ಟರು. ಪಂಚವಟಿ, ಬಟರ್ ಪ್ಲೈ ಗಾರ್ಡನ್, ಸಾಲುಮರದ ತಿಮ್ಮಕ್ಕ ವಲಯ, ಆಕ್ಸಿಜನ್, ಹಣ್ಣುಗಳ ವಲಯ ಹೀಗೆ ಹಲವು ಸಸಿಗಳನ್ನು ನೆಡಲಾಯಿತು.
ಸಾಲು ಮರದ ತಿಮ್ಮಕ್ಕಳಿಗೆ ಪರಿಸರ ದಿನವನ್ನು ಅರ್ಪಿಸಲಾಯಿತು. ಒಟ್ಟಾರೆ, ಮಕ್ಕಳು, ಆಡಳಿತ ಮಂಡಳಿ, ಶಿಕ್ಷಕರು, ಸಿಬ್ಬಂದಿ ಸೇರಿ ಪರಿಸರ ದಿನಕ್ಕೆ ವಿಶೇಷ ಮೆರಗು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆ ಆಡಳಿತ ಮಂಡಳಿ ಚೇರ್ಮನ್ ಸುರೇಶ ಅಂಗಡಿ ಅವರು, ಸಾಲು ಮರದ ತಿಮ್ಮಕ್ಕ ಯಾವುದೇ ಫಲಾಪೇಕ್ಷೆ ಇಲ್ಲದೇ ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ನಮಗೆಲ್ಲ ಮಾದರಿಯಾಗಿದ್ದಾರೆ. ಪರಿಸರ ಪ್ರೇಮ ಎಂದರೆ ಹೇಗಂದು ಅವರಿಂದ ನಾವೆಲ್ಲ ಬಹಳಷ್ಟು ಕಲಿಯುವುದಿದೆ ಎಂದರು.