ಗ್ರಾಮದೇವಿಯರ ಜಾತ್ರೆಗೆ ಅದ್ದೂರಿ ಚಾಲನೆ Jatre

ಕಲಘಟಗಿ ಪಟ್ಟಣದ ಪ್ರಮುಖ ಬಿದಿಗಳಲ್ಲಿ (Jatre) ಗ್ರಾಮದೇವಿಯರ ಶೋಭಾಯಾತ್ರೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತೀ ವಿಜೃಂಭಣೆಯಿಂದ ಜರುಗಿತು.
ಕಲಘಟಗಿ ಪಟ್ಟಣದ ಪ್ರಮುಖ ಬಿದಿಗಳಲ್ಲಿ (Jatre) ಗ್ರಾಮದೇವಿಯರ ಶೋಭಾಯಾತ್ರೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತೀ ವಿಜೃಂಭಣೆಯಿಂದ ಜರುಗಿತು.
Published on
ಕಲಘಟಗಿ: ಪ್ರತಿ ಮೂರು ವರ್ಷಗಳಿಗೊಮ್ಮೆ ಜರುಗುವು ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲಿ (Jatre) ಒಂದಾದ ಕಲಘಟಗಿ ಗ್ರಾಮದೇವಿಯರ ಜಾತ್ರೆಯ ಮೊದಲನೇ ದಿನ ಬುಧವಾರ ಸಂಜೆ ಗ್ರಾಮದೇವಿಯರನ್ನ ಪಟ್ಟಣದ ಪ್ರಮುಖ ಬಿದಿಗಳಲ್ಲಿ ವಿವಿಧ ವಾದ್ಯಮೇಳಗಳೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮೆರವಣಿಗೆ ಮಾಡಲಾಯಿತು.
ಮಂಗಳವಾರ ಬೆಳಗ್ಗೆ ದೇವಸ್ಥಾನದ ಅರ್ಚಕ ಮತ್ತು ಪುರೋಹಿತ ವರ್ಗದವರಿಂದ ಗ್ರಾಮದೇವಿಯರಿಗೆ ಮುತ್ತೈದೆ ಕಾರ್ಯದ ಜತೆಗೆ ಹೋಮ ಹವನ ಕಾರ್ಯಕ್ರಮಗಳು ಜರುಗಿದವು.
ಬುಧವಾರ ಬೆಳಗ್ಗೆ ಗ್ರಾಮದೇವಿ ದೇವಸ್ಥಾನದಲ್ಲಿ ಹೋಮ-ಹವನ, ಧಾರ್ಮಿಕ ಕಾರ್ಯಗಳ ನೆರವೇರಿಸಿದ ಬಳಿಕ, ಗ್ರಾಮದೇವಿಯರ ಬೆಳ್ಳಿ ಕಿರೀಟವನ್ನು ಶ್ರೀ ಗುರು ಸೋಮಲಿಂಗೇಶ್ವರ ಮಠದಿಂದ ಮುತ್ತೈದೆಯರೆಲ್ಲರೂ ತಂದು ದೇವಿಯರಿಗೆ ತೊಡಿಸಿದರು.
ನಂತರ ಪಟ್ಟಣದ ಗ್ರಾಮದೇವಿ ಓಣಿ, ಜೋಳದ ಓಣಿ, ಮಾರ್ಕೆಟ್ ರೋಡ್, ಅಕ್ಕಿ ಓಣಿ, ಚೌತಮನೆ ಕಟ್ಟೆ ಮಾರ್ಗವಾಗಿ ದೇವಿಯರ ಶೋಭಾಯಾತ್ರೆಯನ್ನ ವಿವಿಧ ವಾದ್ಯ ಮೇಳ, ಹುಲಿವೇಷ, ಗೊಂಬೆ ಕುಣಿತ, ಜಗ್ಗಲಗಿ, ವೀರಗಾಸೆ, ಡೊಳ್ಳು ಕುಣಿತ, ಕರಡಿ ಮಜಲು, ಜಾಂಜ್ ಮೇಳ, ಕಾಂತಾರ ಕಲಾ ತಂಡ, ಚಂಡೆ ವಾದ್ಯ, ನವಿಲು ನೃತ್ಯ, ಸ್ಥಳೀಯ ಭಜನೆ, ಕುಂಭ ಮೇಳ ಸೇರಿದಂತೆ ಸಹಸ್ರಾರು ಭಕ್ತರ ಹರ್ಷೋದ್ಘಾರದ ನಡುವೆ ಶೋಭಾಯಾತ್ರೆ ನಡೆಸಲಾಯಿತು.
ರಾತ್ರಿ ವೇಳೆ ಚೌತಮನೆ ಕಟ್ಟೆ ತಲುಪಿದ ಬಳಿಕ ದೇವಿಯರ ಪ್ರತಿಷ್ಠಾಪನೆ ಮಾಡಲಾಯಿತು. ನಂತರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ದೇವಿಯರಿಗೆ ಮಹಾ ಮಂಗಳಾರತಿ ಕಾರ್ಯಕ್ರಮ ಜರುಗಿತು.

ಬಿಗಿ ಪೊಲೀಸ್ ಭದ್ರತೆ

9 ದಿನಗಳ ಕಾಲ ನಡೆಯುವ ಪ್ರಸಿದ್ಧ ಜಾತ್ರೆಯಲ್ಲಿ ಯಾವುದೇ ಅವಘಡ ನಡೆಯದಂತೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸನ್ನದ್ಧಗೊಂಡಿದ್ದು. ಪಟ್ಟಣ ಆಯಕಟ್ಟಿನ, ಜನನಿಬಿಡ ಪ್ರದೇಶಗಳಲ್ಲಿ 50ಕ್ಕೂ ಅಧಿಕ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. 100ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net