

ಪ್ರಮುಖ ಮುಖ್ಯಾಂಶಗಳು
ಹುಬ್ಬಳ್ಳಿ: govt school ಸರ್ಕಾರಿ ಶಾಲೆಗಳ ಕಟ್ಟಡ ಸುಧಾರಣೆ ಮಾಡಿ ಉನ್ನತ ವ್ಯಾಸಂಗ ಮಾಡಲು ಮಕ್ಕಳಿಗೆ ನೆರವಾಗಲು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರವೂ (ಹುಡಾ) ಕೈಜೋಡಿಸಲು ಮುಂದಾಗಿದೆ.
ಏನಿದರ ವಿಶೇಷತೆ
ಸರ್ಕಾರ ಈಗಾಗಲೇ ಶಾಲೆಗಳಿಗೆ ಅನುದಾನ ನೀಡುತ್ತಿದೆ. ಆದರೆ, ಬಹಳಷ್ಟು ಶಾಲೆಗಳಿಗೆ ಇದು ಸಾಲುತ್ತಿಲ್ಲ. ಕಟ್ಟಡಗಳಿಗೆ ಅನುದಾನ ಕೊರತೆಯಾಗುತ್ತದೆ ಎಂದು ಅನೇಕ ಶಾಲೆಯವರು ದಾನಿಗಳು,
ಶಾಸಕರ ನಿಧಿ ಬಳಕೆ ಮಾಡುತ್ತಾರೆ.
ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವುದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಕನಸಾಗಿದೆ. ಈ ದಿಸೆಯಲ್ಲಿ ಸಂಗ್ರಹವಾಗುವ ಸೆಸ್ ಅಡಿಯಲ್ಲಿ ಹಂತಹಂತವಾಗಿ ಸರ್ಕಾರಿ ಶಾಲೆ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಇದರೊಂದಿಗೆ ಶೈಕ್ಷಣಿಕ ಅಭಿವೃದ್ಧಿಗೆ ಹುಡಾ ಕೊಡುಗೆ ನೀಡಲಿದೆ.
— ಶಾಕೀರ್ ಸನದಿ, ಹುಡಾ ಅಧ್ಯಕ್ಷ