good rain ಭರ್ಜರಿ ಮಳೆಗೆ ತಂಪಾದ ಇಳೆ

good rain ಹುಬ್ಬಳ್ಳಿಯ ಉಣಕಲ್ಲ ಕೆರೆ ಸತತ ಮಳೆಯಿಂದ ಭರ್ತಿಯಾಗಿರುವುದು.
good rain ಹುಬ್ಬಳ್ಳಿಯ ಉಣಕಲ್ಲ ಕೆರೆ ಸತತ ಮಳೆಯಿಂದ ಭರ್ತಿಯಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿ ಕಾರ್ಯಕ್ಕೆ ಚುರುಕು ನೀಡಿದ ಕೃತ್ತಿಕಾ
  • ಬಿತ್ತನೆಗೆ ಸಜ್ಜಾದ ಧಾರವಾಡ ರೈತರು
ಹುಬ್ಬಳ್ಳಿ: good rain ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಭಾನುವಾರ ಬೆಳಗಿನ ಜಾವ ಭರ್ಜರಿ ಮಳೆ ಸುರಿಯುವ ಮೂಲಕ ಮುಂಗಾರಿನ ವಾತಾವರಣ ಸೃಷ್ಟಿಸಿದೆ.
ಶನಿವಾರ ರಾತ್ರಿವರೆಗೂ ಮಳೆಯ ಮುನ್ಸೂಚನೆ ಇರಲಿಲ್ಲ. ಆದರೆ, ಮಧ್ಯರಾತ್ರಿ ನಂತರ ಬೆಳಗಿನ ಜಾವ 1 ಗಂಟೆ ಹೊತ್ತಿಗೆ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮಳೆ ಸುರಿಯಿತು. ಒಂದು ತಾಸಿಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಎಲ್ಲ ಕಡೆ ನೀರು ಹರಿದಾಡಿತು. ಕೆರೆ, ಹಳ್ಳಗಳು ತುಂಬಿ ಹರಿದಿವೆ.
ನಗರ ಪ್ರದೇಶದಲ್ಲಿ ರಾತ್ರಿ ವೇಳೆ ಮಳೆ ಸುರಿದಿದ್ದರಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಜನರ ಓಡಾಟವೂ ಅಷ್ಟಾಗಿ ಇರಲಿಲ್ಲ. ಕೆಲವೆಡೆ ಗಟಾರುಗಳು ತುಂಬಿ ಕೊಳಕು ರಸ್ತೆ ಮೇಲೆ ಹರಿದಿದೆ.
ಮೇ 25ರಿಂದ ರೋಹಿಣಿ ಮಳೆ ಆರಂಭವಾಗುತ್ತಿದೆ. ರೈತ ಸಮೂಹದ ಭರವಸೆಯ ಮಳೆ ಎಂದೇ ಕರೆಯಲಾಗುವ ರೋಹಿಣಿ ಮಳೆಯಲ್ಲಿ ಬಿತ್ತನೆ ಮಾಡುವುದು ಧಾರವಾಡ ಜಿಲ್ಲೆಯಲ್ಲಿ ಬಹುತೇಕ ನಿಶ್ಚಿತವಾಗಿದೆ. ಹಾಗಾಗಿ ಉತ್ತಮ ಬೆಳೆಯ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗುತ್ತಿದೆ.

ಬೀಜ ವಿತರಣೆ

ಕೃಷಿ ಇಲಾಖೆ ಸಹ ಮುಂಗಾರು ಹಂಗಾಮಿಗೆ ಸಿದ್ಧತೆ ಮಾಡಿಕೊಂಡಿದೆ. ಬಿತ್ತನೆ ಬೀಜ, ರಸಗೊಬ್ಬರಗಳನ್ನು ಸಂಗ್ರಹ ಮಾಡಲಾಗಿದೆ. ಮೇ 25ರಂದು ಹುಬ್ಬಳ್ಳಿ ಎಪಿಎಂಸಿ ಆವರಣದ ರೈತ ಸಂಪರ್ಕ ಕೇಂದ್ರ ಹಾಗೂ ಬಿಡ್ನಾಳ ಹೆಚ್ಚುವರಿ ಮಾರಾಟ ಕೇಂದ್ರದಲ್ಲಿ ಮುಂಗಾರು ಬಿತ್ತನೆ ಬೀಜ ವಿತರಣೆ ಪ್ರಾರಂಭಿಸಲಾಗುವುದು ಎಂದು ತಿಳಿಸಲಾಗಿದೆ. ರೈತರು ಬಿತ್ತನೆ ಬೀಜ ಪಡೆಯಲು ಕಡ್ಡಾಯವಾಗಿ ಎಫ್ ಐಡಿ ಹೊಂದಿರುವ ಆಧಾರ್​ ಕಾರ್ಡ್​ ಝರಾಕ್ಸ್​, ಎಸ್ಸಿ, ಎಸ್ಟಿ ರೈತರು ಜಾತಿ ಪ್ರಮಾಣ ಪತ್ರದ ಝರಾಕ್ಸ್​ ಪ್ರತಿ ತರಬೇಕೆಂದು ಸೂಚಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net