ಸಮಾಜಮುಖಿ ಸಂಶೋಧನೆಗೆ ಹೆಚ್ಚು ಮಹತ್ವ ನೀಡಿ

ಕವಿವಿ ಅರ್ಥಶಾಸ್ತ್ರ ವಿಭಾಗದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಡಾ. ವಜೀದಾ ಬಾನು ಮಾತನಾಡಿದರು.
ಕವಿವಿ ಅರ್ಥಶಾಸ್ತ್ರ ವಿಭಾಗದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಡಾ. ವಜೀದಾ ಬಾನು ಮಾತನಾಡಿದರು.
Published on
ಧಾರವಾಡ: ಪ್ರಸ್ತುತ ಸಮಾಜಮುಖಿ ಸಂಶೋಧನೆಗೆ ಹೆಚ್ಚು ಮಹತ್ವ ನೀಡುವವುದರಿಂದ ಹೊಸ ವಿಚಾರಗಳನ್ನು ಅನ್ವೇಷಿಸಿ ಸಮಾಜಕ್ಕೆ ಉಪಯುಕ್ತ ಜ್ಞಾನ ನೀಡುವುದು ಸಂಶೋಧನೆಯ ಮುಖ್ಯ ಕಾರ್ಯವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತç ವಿಭಾಗದ ಪ್ರಾಧ್ಯಾಪಕಿ ಡಾ. ವಜೀದಾ ಬಾನು ಅಭಿಪ್ರಾಯಪಟ್ಟರು.
ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಸಭಾಗಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ `ಎಕನಾಮಿಕ್ಸ್ ರಿಸರ್ಚ್ ಫೋರಮ್ ಆಯೋಜಿಸಿದ್ದ ಪಿ.ಎಚ್‌ಡಿ ಸಂಶೋಧನಾ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಸಂಶೋಧನಾ ಸಾಹಿತ್ಯ ವಿಮರ್ಶೆಗೆ ಹೆಚ್ಚಿನ ಒತ್ತು ನೀಡಬೇಕು. ಸಂಶೋಧಕರು ತಮ್ಮ ಅಧ್ಯಯನವನ್ನು ಪುನರಾವರ್ತಿಸಬಹುದಾದ ರೀತಿಯಲ್ಲಿ ಹಾಗೂ ಸಂಶೋಧನೆಯ ಪರಿಶೀಲನೆಗೆ ಅನುಕೂಲವಾಗುವಂತೆ ಪಾರದರ್ಶಕತೆ ಮತ್ತು ಸಮಗ್ರ ಮಾಹಿತಿಯೊಂದಿಗೆ ಸಂಶೋಧನಾ ವಿನ್ಯಾಸ ರೂಪಿಸಬೇಕು ಎಂದರು.
ಪ್ರತಿಯೊಬ್ಬ ಸಂಶೋಧಕನೂ ಸಮಾಜದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದ್ದಾನೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಂಶೋಧನೆಯ ಮಹತ್ವ ಇನ್ನಷ್ಟು ಹೆಚ್ಚಾಗಿದೆ. ವಿಜ್ಞಾನ, ಸಾಹಿತ್ಯ, ತಂತ್ರಜ್ಞಾನ, ಸಮಾಜಶಾಸ್ತ್ರ ಹಾಗೂ ಶಿಕ್ಷಣ ಸೇರಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಹೊಸ ಆವಿಷ್ಕಾರಗಳು ಮತ್ತು ಗಂಭೀರ ಅಧ್ಯಯನಗಳ ಅಗತ್ಯವಿದೆ. ಆದ್ದರಿಂದ ವಿದ್ಯಾರ್ಥಿಗಳು ಕೇವಲ ಪದವಿಗೋಸ್ಕರವಲ್ಲದೆ ಸಮಾಜಕ್ಕೆ ಹೊಸ ದಿಕ್ಕು ತೋರಿಸುವ ಗುರಿಯೊಂದಿಗೆ ಸಂಶೋಧನೆ ಕೈಗೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಿ.ಎಚ್. ನಾಗೂರ ಮಾತನಾಡಿ, ಪ್ರಸ್ತುತ ಸಂಶೋಧಕರು ಸಂಶೋಧನೆಯಲ್ಲಿ ನೈತಿಕ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಯೋಜನೆಗಳನ್ನು ರೂಪಿಸಲು ಸಂಶೋಧನೆ ಮತ್ತು ಅಭಿವೃದ್ಧಿ ಬಹಳ ಪೂರಕವಾಗಿದೆ ಎಂದರು.
ಡಾ. ಎಚ್.ಎಚ್. ಭರಡಿ, ಸಂಶೋಧನಾ ವಿದ್ಯಾರ್ಥಿಗಳ ಕಾರ್ಯದರ್ಶಿ ಸಚಿನ್ ಕುರಾಡೆ, ಖಜಾಂಚಿ ಅನಂತ ಪೂಜಾರ, ಜಂಟಿ ಕಾರ್ಯದರ್ಶಿ ಆನಂದ ಎಂ.ಬಿ., ಪ್ರಾಧ್ಯಾಪಕರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net