ಹುಬ್ಬಳ್ಳಿಯ giants school ಜೈಂಟ್ಸ್ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಪೂರ್ವ ಪ್ರಾಥಮಿಕ ಶಾಲೆಯ ಶೈಕ್ಷಣಿಕ ಪ್ರಾರಂಭೋತ್ಸವದಲ್ಲಿ ಭಾಗವಹಿಸಿದ್ದ ಮಕ್ಕಳು, ಶಿಕ್ಷಕರು.
Published on:
Copied
Follow Us
ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ಜೈಂಟ್ಸ್ ಆಂಗ್ಲ ಮಾಧ್ಯಮ ಶಾಲೆ giants school ಆವರಣದಲ್ಲಿ ಸೋಮವಾರ ಪೂರ್ವ ಪ್ರಾಥಮಿಕ ಶಾಲೆಯ ಶೈಕ್ಷಣಿಕ ಪ್ರಾರಂಭೋತ್ಸವ ಏರ್ಪಡಿಸಲಾಗಿತ್ತು.
ಸಂಸ್ಥೆ ಅಧ್ಯಕ್ಷ ಎನ್.ಆರ್. ರವಿ ಮಾತನಾಡಿ, ಮಕ್ಕಳಲ್ಲಿ ಕಲಿಕಾಸಕ್ತಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಪ್ರೋತ್ಸಾಹ ನೀಡಬೇಕು ಎಂದರು.
ಮಕ್ಕಳಿಗೆ ಸಾಂಪ್ರದಾಯಿಕವಾಗಿ ಆರತಿ ಬೆಳಗಿ, ಹೂವು ಹಾಕಿ, ಸಿಹಿ ಹಂಚಿ ಮಕ್ಕಳನ್ನು ಸ್ವಾಗತಿಸಲಾಯಿತು.
ಕಾರ್ಯದರ್ಶಿ ಅಶೋಕ ವಕ್ಕುಂದ, ಮಾಜಿ ಅಧ್ಯಕ್ಷ ಜಿ.ಎಸ್. ನಾಯ್ಕ, ಸದಸ್ಯರಾದ ಪ್ರವೀಣ ನಾಗರಕಟ್ಟಿ, ಅಂಬೇಶ ಊಟವಾಲೆ, ಆಡಳಿತಾಧಿಕಾರಿ ಉಮಾ ಸಿ. ಪಾಟೀಲ, ಪ್ರಾಚಾರ್ಯ ಬಸವರಾಜ ಚಟ್ನಿ, ಪಲ್ಲವಿ ಪಾಸ್ತೆ, ರೇಣುಕಾ ಕತಕಲಿ, ಇತರರಿದ್ದರು.