Ghazal ಗಜಲ್‌ನಲ್ಲಿ ಮನುಷ್ಯ ಬದುಕಿನ ತಲ್ಲಣ

Ghazal ಹುಬ್ಬಳ್ಳಿಯಲ್ಲಿ ಭಾನುವಾರ ಲೇಖಕ ಡಾ. ಗೋವಿಂದ ಹೆಗಡೆ ಅವರ ‘ಬದುಕು ಬಾರಾ ಕಮಾನು’ ಮತ್ತು ‘ಗಜಲ್ ತಿಳಿಯೋಣ, ಬನ್ನಿ !’ ಗಜಲ್ ಕೃತಿಗಳ ಲೋಕಾರ್ಪಣೆಗೊಳಿಸಲಾಯಿತು.
Ghazal ಹುಬ್ಬಳ್ಳಿಯಲ್ಲಿ ಭಾನುವಾರ ಲೇಖಕ ಡಾ. ಗೋವಿಂದ ಹೆಗಡೆ ಅವರ ‘ಬದುಕು ಬಾರಾ ಕಮಾನು’ ಮತ್ತು ‘ಗಜಲ್ ತಿಳಿಯೋಣ, ಬನ್ನಿ !’ ಗಜಲ್ ಕೃತಿಗಳ ಲೋಕಾರ್ಪಣೆಗೊಳಿಸಲಾಯಿತು.
Published on
ಹುಬ್ಬಳ್ಳಿ: ಉರ್ದು, ಪಷಿರ್ಯನ್ ಭಾಷೆಯ ಮೂಲದಿಂದ Ghazal ಗಜಲ್‌ನಲ್ಲಿ ಪ್ರೀತಿ, ಪ್ರೇಮ, ವಿರಹ ವೇದನೆ ಶ್ರುತಪಡಿಸಿದರೆ, ಈಗಿನ ಗಜಲ್‌ಗಳಲ್ಲಿ ಮನುಷ್ಯ ಬದುಕಿನ ತಲ್ಲಣ, ದ್ರೋಹ, ಪ್ರಚಲಿತ ವಿದ್ಯಾಮಾನಗಳ ಉಲ್ಲೇಖವಿದೆ ಎಂದು ವಿಮರ್ಶಕ ಸುಬ್ರಾಯ ಮತ್ತೀಹಳ್ಳಿ ಅಭಿಪ್ರಾಯಪಟ್ಟರು.
ಇಲ್ಲಿಯ ಹೊಸೂರು ರಸ್ತೆಯ ಡಾ.ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಲೇಖಕ ಡಾ. ಗೋವಿಂದ ಹೆಗಡೆ ಅವರ ‘ಬದುಕು ಬಾರಾ ಕಮಾನು’ ಮತ್ತು ‘ಗಜಲ್ ತಿಳಿಯೋಣ, ಬನ್ನಿ !’ ಗಜಲ್ ಕೃತಿಗಳ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕನ್ನಡದ ಗಜಲ್‌ಗಳಲ್ಲಿಯೇ ಉರ್ದುವಿನ ಗತ್ತು ಇದೆ. ಮೊದಲು ಇದರ ಬಗ್ಗೆ ಅಪಸ್ವರ ಇತ್ತಾದರೂ ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಗಜಲ್ ತನ್ನ ಸ್ವರೂಪ ಬದಲಿಸಿತು. ಅಂತೆಯೇ ಡಾ. ಗೋವಿಂದ ಹೆಗಡೆ ಅವರು ತಮ್ಮ ಗಜಲ್‌ಗಳಲ್ಲಿ ಹೊಸತು ಬೆಳಕು ಮೂಡಿಸುವತ್ತ ಗಮನಹರಿಸಿದ್ದಾರೆ ಎಂದರು.
ಸಾಹಿತಿ ಸಿ.ಎಸ್. ಸುದರ್ಶನ ಮಾತನಾಡಿ, ಗೋವಿಂದ ಹೆಗಡೆ ಅವರು ಗಜಲ್‌ನಲ್ಲಿ ಅಂಥಕರಣ, ಅನುಭವ ಮಂಥನ ಒಳಗೊಂಡಿದೆ. ಪ್ರಗತಿಶೀಲ ಕವಿಯಾಗಿರುವ ಅವರು, ಸಾಹಿತ್ಯಕೃಷಿಯಲ್ಲಿ ವಿಭಿನ್ನ ಪ್ರಯೋಗಕ್ಕಿಳಿದಿದ್ದಾರೆ ಎಂದರು.
ಕೃತಿ ಕರ್ತೃ ಡಾ. ಗೋವಿಂದ ಹೆಗಡೆ ಮಾತನಾಡಿ, ಕವಿತೆ ಬರೆಯುವುದೇಕೆ? ಎಂಬ ಉಲ್ಲೇಖದ ಪ್ರಯೋಗ ಮಾಡಿದ್ದರೂ ಅದಕ್ಕೆ ತಕ್ಕುದಾದ ಉತ್ತರವನ್ನೂ ಹುಡುಕಿ ಕೊಟ್ಟಿದ್ದೇನೆ. ಮನಸ್ಸಿನ ಅಂತರಾಳದ ಬೇಗುದಿ, ಸಾಮಾಜಿಕ ತಲ್ಲಣಗಳನ್ನು ಗಜಲ್‌ನಲ್ಲಿ ಕಟ್ಟಿಕೊಡಲಾಗಿದೆ. ಗಜಲ್‌ನಲ್ಲಿ ಹುಮ್ಮಸ್ಸಿದೆ, ನಡೆದಷ್ಟು ದಾರಿ ಇದೆ ಎಂಬುದನ್ನು ಕಂಡುಕೊಂಡಿದ್ದೇನೆ ಎಂದರು.
ಮೈಸೂರು ಪುಸ್ತಕ ಪ್ರಕಾಶಕ ಸಂಸ್ಕೃತಿ ಸುಬ್ರಹ್ಮಣ್ಯ ಮಾತನಾಡಿದರು.
ಸಾಹಿತಿ ಡಾ. ಶ್ಯಾಮಸುಂದರ ಬಿದರಕಂದಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದುಷಿ ರೇಖಾ ಭಟ್ ಗಜಲ್ ಗಾಯನ ಪ್ರಸ್ತುತಪಡಿಸಿದರು.
ಅರುಣಕುಮಾರ ಹಬ್ಬು, ದತ್ತಾತ್ರೇಯ ಭಟ್, ಡಾ. ಸಿದ್ದೇಶ್ವರ ಕಟಕೋಳ, ದಿವಾಕರ ಹೆಗಡೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net