ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಹೇಮಾ ವಾಘಮೋಡೆ, ಅಕಾಡೆಮಿಯಲ್ಲಿ 850 ವಿದ್ಯಾರ್ಥಿಗಳು ನೃತ್ಯ ತರಬೇತಿ ಪಡೆಯುತ್ತಿದ್ದಾರೆ. ಇದರಲ್ಲಿ 550 ವಿದ್ಯಾರ್ಥಿಗಳು ಹುಬ್ಬಳ್ಳಿಯವರಾಗಿದ್ದು, ಇನ್ನುಳಿದವರು ಲಕ್ಷೆ್ಮೕಶ್ವರ, ಸಂಶಿ ಹಾಗೂ ಲಿಂಗಸೂರಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಗೆಜ್ಜೆನಾದ ನೃತ್ಯ ಹಬ್ಬದಲ್ಲಿ ಹುಬ್ಬಳ್ಳಿಯ ಕೇಶ್ವಾಪುರ, ಕುಮಾರ ಪಾರ್ಕ್, ಅಮರಗೋಳ ಶಾಖೆಯ 550 ವಿದ್ಯಾರ್ಥಿಗಳು ಪ್ರದರ್ಶನ ನೀಡಲಿದ್ದಾರೆ.
ಬೆಳಗ್ಗೆ 10.30ಕ್ಕೆ 250 ಜನ ವಿದ್ಯಾರ್ಥಿಗಳು ಹಾಗೂ ಸಂಜೆ 4 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ 250 ವಿದ್ಯಾರ್ಥಿಗಳು ಚಲನಚಿತ್ರಗಳಲ್ಲಿನ ಶಾಸ್ತ್ರೀಯ ಸಂಗೀತಕ್ಕೆ ಭರತನಾಟ್ಯ ನೃತ್ಯ ಪ್ರದರ್ಶನ ನೀಡುವರು ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಲಾವಿದೆ ವೈಷ್ಣವಿ ಗಂಗೂಬಾಯಿ ಹಾನಗಲ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಡಾ. ತೇಜಸ್ವಿನಿ ನಾರಾಯಣಕರ ಹಾಗೂ ವಿದ್ಯಾವಿಕಾಸ ಪ್ರಾಂತ ಅಧ್ಯಕ್ಷೆ ಭಾರತಿ ನಂದಕುಮಾರ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಮಾರೋಪ ಸಮಾರಂಭದಲ್ಲಿ ಧಾರವಾಡ ಜಿಲ್ಲೆ ಪ್ರಾಚಾರ್ಯರ ಸಂಘದ ಅಧ್ಯಕ್ಷ ಡಿ. ಹನುಮಂತಪ್ಪ, ಚಿನ್ಮಯ ಎಜ್ಯುಕೇಶನಲ್ ಇನ್ಸ್ಟಿಟ್ಯೂಟ್ ಆಡಳಿತಾಧಿಕಾರಿ ವಿಶ್ವನಾಥ ರಾನಡೆ ಹಾಗೂ ಆರ್ಎನ್ಎಸ್ ವಿದ್ಯಾನಿಕೇತನದ ಪ್ರಾಚಾರ್ಯ ವಿಶಾಲಾ ಜೇಮ್್ಸ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.
ನೃತ್ಯ ಕಲಾವಿದರಾದ ಶಿವಪ್ರಕಾಶ ನಾಯ್ಕ, ಮೇಘನಾ ಆರ್. ಸಿ., ರಾಘವೇಂದ್ರ ಜಿ. ಬಿ., ವಿಕಾಸ ಮೆಹತಾ, ಶಿವಕುಮಾರ ಹಿಪ್ಪರಗಿ, ಸುಶಾಂತ ಕುಲಕರ್ಣಿ, ಅರ್ಜುನ ನಾಯ್ಡು, ಚಿನ್ನು ವಸ್ತ್ರದ, ಸ್ಯಾಮಸನ್ ಫ್ರಾನ್ಸಿಸ್, ಅಮಿತ ಶಿಂಧೆ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಹೇಳಿದರು.
ಅಕಾಡೆಮಿ ಕಾರ್ಯದರ್ಶಿ ದಿನೇಶ ವಾಘಮೋಡೆ ಸುದ್ದಿಗೋಷ್ಠಿಯಲ್ಲಿ ಇದ್ದರು.