(gavishree) ಯಶಸ್ಸು ಅಂದರೇನು? ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದ್ದು ಓದ್ರೀ...

(gavishree)ನಿಖಿಲ್ ಡೆವೆಲಪರ್ಸ್ ವತಿಯಿಂದ ಹುಬ್ಬಳ್ಳಿಯ ರಾಜೀವನಗರ ಬಸ್ ನಿಲ್ದಾಣ ಬಳಿಯ ದತ್ತಾತ್ರೇಯ ಕಾಲನಿಯಲ್ಲಿ ನಿರ್ಮಿಸಿರುವ ನೂತನ ಓಂ ಮಗಲ ಅಪಾರ್ಟ್‌ಮೆಂಟ್ ಲೋಕಾರ್ಪಣೆ ಕಾರ್ಯಕ್ರಮವನ್ನು ಶಿರಹಟ್ಟಿಯ ಶ್ರೀ ಜಗದ್ಗುರು ಫಕೀರ ಸಿದ್ಧರಾಮೇಶ್ವರ ಸ್ವಾಮೀಜಿ ಉದ್ಘಾಟಿಸಿದರು.
(gavishree)ನಿಖಿಲ್ ಡೆವೆಲಪರ್ಸ್ ವತಿಯಿಂದ ಹುಬ್ಬಳ್ಳಿಯ ರಾಜೀವನಗರ ಬಸ್ ನಿಲ್ದಾಣ ಬಳಿಯ ದತ್ತಾತ್ರೇಯ ಕಾಲನಿಯಲ್ಲಿ ನಿರ್ಮಿಸಿರುವ ನೂತನ ಓಂ ಮಗಲ ಅಪಾರ್ಟ್‌ಮೆಂಟ್ ಲೋಕಾರ್ಪಣೆ ಕಾರ್ಯಕ್ರಮವನ್ನು ಶಿರಹಟ್ಟಿಯ ಶ್ರೀ ಜಗದ್ಗುರು ಫಕೀರ ಸಿದ್ಧರಾಮೇಶ್ವರ ಸ್ವಾಮೀಜಿ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • * ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅಭಿಪ್ರಾಯ
  • ಸಂಕಲ್ಪ, ಸಂತೋಷವಿದ್ದರೆ ಯಶಸ್ಸು ಸುಲಭ
ಹುಬ್ಬಳ್ಳಿ: ಪ್ರತಿಯೊಬ್ಬರೂ ಹುಟ್ಟು-ಸಾವಿನ ಮಧ್ಯೆ ಇರುವ ಜೀವನವನ್ನು ಅರ್ಥ ಮಾಡಿಕೊಳ್ಳಬೇಕು. ಯಾರು ಜೀವನದಲ್ಲಿ ಸಂಕಲ್ಪ ಹೊಂದುತ್ತಾರೋ ಸಂತೋಷವನ್ನು ಪಡೆಯುತ್ತಾರೋ ಅಂಥವರು ಯಶಸ್ಸು ಕಾಣಲು ಸಾಧ್ಯ ಎಂದು (gavishree) ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಸಂಸ್ಥಾನ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಿಖಿಲ್ ಡೆವೆಲಪರ್ಸ್ ವತಿಯಿಂದ ಇಲ್ಲಿಯ ರಾಜೀವನಗರ ಬಸ್ ನಿಲ್ದಾಣ ಬಳಿಯ ದತ್ತಾತ್ರೇಯ ಕಾಲನಿಯಲ್ಲಿ ನಿರ್ಮಿಸಿರುವ ನೂತನ ಓಂ ಮಗಲ ಅಪಾರ್ಟ್‌ಮೆಂಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭೌತಿಕ ಪ್ರಪಂಚದಲ್ಲಿ ಸಂತೋಷದಿಂದ ಇರುವುದೇ ಯಶಸ್ಸು. ಸಂಪತ್ತಿನ ಮೇಲೆ ಸಂತೋಷವನ್ನು ಅಳೆಯಲು ಸಾಧ್ಯವಿಲ್ಲ. ಎಲ್ಲ ಇದ್ದರೂ ಅಂತರಂಗದಲ್ಲಿ ದುಃಖ ಇದ್ದರೆ ಅದೇ ಬಡತನ. ಹೃದಯದಲ್ಲಿ ಸಂತೋವಿದ್ದರೆ ಜಗತ್ತು ದೊಡ್ಡದಾಗಿ ಕಾಣುತ್ತದೆ. ದುಃಖವಿದ್ದರೆ ವಿಶ್ವ ಚಿಕ್ಕದಾಗಿ ಕಾಣುತ್ತದೆ. ದೇವರು ನಮಗೆ ಕೊಟ್ಟದರಲ್ಲಿಯೇ ಸಂತೃಪ್ತಿ ಮತ್ತು ಸಂತೋಷವನ್ನು ಹೊಂದಿರಬೇಕು ಎಂದರು.
ಶಿರಹಟ್ಟಿಯ ಶ್ರೀ ಫಕೀರೇಶ್ವರ ಸಂಸ್ಥಾನ ಮಠದ ಶ್ರೀ ಜಗದ್ಗುರು ಫಕೀರ ಸಿದ್ಧರಾಮೇಶ್ವರ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ಎಲ್ಲಿ ಪ್ರೀತಿ ಇರುತ್ತದೋ ಅದು ಗುಡಿಸಲೂ ಅರಮನೆಯಂತಿರುತ್ತದೆ. ಪ್ರೀತಿ ಇಲ್ಲದ ಅರಮನೆಯು ಗುಡಿಸಲಿಗಿಂತ ಕಷ್ಟವಾಗಿರುತ್ತದೆ. ಹಾಗಾಗಿ ಜೀವನದಲ್ಲಿ ಪ್ರೀತಿ, ಶಾಂತಿ, ಸಂತೃಪ್ತಿ, ಸಮಾಧಾನವನ್ನು ಹೊಂದಿರಬೇಕು ಎಂದರು.
ನಿಖಿಲ್ ಡೆವೆಲಪರ್ಸ್ ವ್ಯವಸ್ಥಾಪಕ ನಿರ್ದೇಶಕ ಸದಾಶಿವ ದೇವಸೂರ ಒಳ್ಳೆಯ ಮನೆಗಳನ್ನು ನಿರ್ಮಿಸಿದ್ದಾರೆ. ಪ್ರತಿಯೊಂದು ಕುಟುಂಬವು ನೆಮ್ಮದಿಯ ಜೀವನ ನಡೆಸಲು ಅವರು ಸಂಕಲ್ಪ ತೊಟ್ಟಿದ್ದಾರೆ. ಈ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವವರ ಬದುಕು ಚೆನ್ನಾಗಿರಲಿ ಎಂದು ಆಶೀರ್ವದಿಸಿದರು.
ನಿರೂಪಕಿ ಗೌರಿ ಮಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಳಗಾನೂರು ಶ್ರೀ ಶಿವಶಾಂತವೀರ ಶರಣರು, ನಿಖಿಲ್ ಡೆವೆಲಪರ್ಸ್ ವ್ಯವಸ್ಥಾಪಕ ನಿರ್ದೇಶಕ ಸದಾಶಿವ ದೇವಸೂರ, ನಿರ್ಮಲಾ ದೇವಸೂರ, ಕಿರಣ ಕರಿಗೌಡರ, ಶೇಖರ ಮೊರಬದ, ಇತರರು ಇದ್ದರು. ವಂದನಾ ನೂಲ್ವಿ ಪ್ರಾರ್ಥಿಸಿ ಸಂಗೀತ ಸೇವೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net