(gastrochisis) ಹೊಟ್ಟೆಯ ಕರಳು ಕಾಣುವಂಥ ಮಗು ಜನನ

(gastrochisis) ಕೆಎಂಸಿಆರ್‌ಐನ ಎಸ್‌ಎನ್‌ಸಿಯುನಲ್ಲಿ ವಿಶೇಷ ಆರೈಕೆ
(gastrochisis) ಕೆಎಂಸಿಆರ್‌ಐನ ಎಸ್‌ಎನ್‌ಸಿಯುನಲ್ಲಿ ವಿಶೇಷ ಆರೈಕೆ
Published on
ಹುಬ್ಬಳ್ಳಿ: ಹೊಟ್ಟೆಯೊಳಗಿನ ಕರಳು ಕಾಣುವಂಥ (gastrochisis) ಮಗು ಕೊಪ್ಪಳದಲ್ಲಿ ಜನಿಸಿದ್ದು, ಇಲ್ಲಿಯ ಕೆಎಂಸಿಆರ್‌ಐನ ಎಸ್‌ಎನ್‌ಸಿಯುನಲ್ಲಿ (ನವಜಾತ ಶಿಶುಗಳ ವಿಶೇಷ ಆರೈಕೆ ಘಟಕ) ಭಾನುವಾರ ಬೆಳಗ್ಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಅಪರೂಪದ ಈ ಮಗುವನ್ನು ಕೊಪ್ಪಳದಲ್ಲಿ ತಾಯಿಯೊಬ್ಬರು ಇಂದು ಬೆಳಗ್ಗೆ ಹೆತ್ತಿದ್ದಾರೆ. ಅಲ್ಲಿನ ವೈದ್ಯರು ಹುಬ್ಬಳ್ಳಿಯ ಕೆಎಂಸಿಆರ್‌ಐಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದು, ಅದರಂತೆ ಝೀರೋ ಟ್ರಾಫಿಕ್‌ನಲ್ಲಿ ಮಗು ತಂದು ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಹೊಟ್ಟೆಯ ಮೇಲ್ಭಾಗದಲ್ಲಿ ಚರ್ಮ ಇಲ್ಲದೇ ಅಂಗಾಂಗಗಳು ಹೊರಭಾಗದಲ್ಲಿ ಕಾಣುತ್ತಿವೆ. ಹೀಗಿರುವುದರಿಂದ ಮಗುವಿಗೆ ಸೋಂಕು (ಇನ್ಫೆಕ್ಷನ್), ಗ್ಯಾಂಗ್ರಿನ್, ನಂಜು ತಗುಲಿದೆ. ನಮ್ಮ ಆಸ್ಪತ್ರೆಯ ವೈದ್ಯರು, ಕೂಡಲೇ ಎಸ್‌ಎನ್‌ಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾರಂಭಿಸಿದ್ದಾರೆ. ಅಲ್ಲದೇ ನಿಗಾ ಇಡಲಾಗಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net