garden place ಉದ್ಯಾನಗಳಲ್ಲಿ ಸರ್ಕಾರದ ರಿಯಲ್​ ಎಸ್ಟೇಟ್​ ಹುನ್ನಾರ

garden place ವಿಧಾನ ಪರಿಷತ್​ ಸದಸ್ಯ ಲಿಂಗರಾಜ ಪಾಟೀಲ.
garden place ವಿಧಾನ ಪರಿಷತ್​ ಸದಸ್ಯ ಲಿಂಗರಾಜ ಪಾಟೀಲ.
Published on

ಹುಬ್ಬಳ್ಳಿ: garden place ಸಾರ್ವಜನಿಕ ಉದ್ಯಾನಗಳ ಶೇ. 5ರಷ್ಟು ಭಾಗವನ್ನು ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ನೀಡಲು ಸರ್ಕಾರ ಮಂಡಿಸಿರುವ ವಿಧೇಯಕವು ಸಂಪೂರ್ಣ ಅವೈಜ್ಞಾನಿಕವಾಗಿದೆ. ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಇದರಲ್ಲಿ ಸರ್ಕಾರದ ರಿಯಲ್​ ಎಸ್ಟೇಟ್​ ಹುನ್ನಾರ ಅಡಗಿದೆ ಎಂದು ವಿಧಾನ ಪರಿಷತ್​ ಸದಸ್ಯ ಲಿಂಗರಾಜ ಪಾಟೀಲ ಆರೋಪಿಸಿದ್ದಾರೆ.

ನಗರಗಳು ಈಗಾಗಲೇ ಕಾಂಕ್ರೀಟ್​ ಕಾಡುಗಳಾಗಿ ಪರಿವರ್ತನೆಯಾಗಿವೆ. ಉದ್ಯಾನಗಳು ಕೇವಲ ಖಾಲಿ ಜಾಗಗಳಲ್ಲ. ನಗರಗಳ ಪರಿಸರ ಸಮತೋಲನ, ಹಸಿರು ವಲಯ, ಸಾರ್ವಜನಿಕರ ಆರೋಗ್ಯ, ಮಕ್ಕಳ ಆಟ, ಹಿರಿಯರ ವಾಯುವಿಹಾರ ಹಾಗೂ ಜನರ ಮಾನಸಿಕ ನೆಮ್ಮದಿಗೆ ಅವು ಅತ್ಯಂತ ಅಗತ್ಯ.
ಇಂತಹ ಸಾರ್ವಜನಿಕ ಆಸ್ತಿಯ ಒಂದು ಭಾಗವನ್ನು ಖಾಸಗಿಯವರಿಗೆ ನೀಡುವುದರಿಂದ ಮುಂದೆ ಹಂತ ಹಂತವಾಗಿ ಉದ್ಯಾನಗಳ ವಾಣಿಜ್ಯೀಕರಣಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಪ್ರಕಟಣೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಸದ್ಯ ಶೇ. 5ರಷ್ಟು ಜಾಗ ಎನ್ನುವ ಸರ್ಕಾರದ ಪ್ರಸ್ತಾವನೆ ನಾಳೆ ಮತ್ತಷ್ಟು ಜಾಗವನ್ನು ಖಾಸಗಿಯವರಿಗೆ ನೀಡುವ ಪ್ರಕ್ರಿಯೆಗೆ ಮುನ್ನುಡಿಯಾಗುವ ಆತಂಕವಿದೆ. ಸಾರ್ವಜನಿಕ ಉದ್ಯಾನಗಳ ಜಾಗವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಲು ಅವಕಾಶ ನೀಡಿದರೆ, ಉದ್ಯಾನಗಳ ಮೂಲ ಆಶಯವೇ ನಿಧಾನವಾಗಿ ನಾಶವಾಗಲಿದೆ.
ಸರ್ಕಾರಕ್ಕೆ ಉದ್ಯಾನಗಳ ನಿರ್ವಹಣೆಗೆ ಅನುದಾನದ ಕೊರತೆ ಇದ್ದರೆ, ಅದಕ್ಕೆ ಬಜೆಟ್​ನಲ್ಲಿ ಸೂಕ್ತ ಅನುದಾನ ಮೀಸಲಿಡಬೇಕು. ಉದ್ಯಾನಗಳ ಅಭಿವೃದ್ಧಿ ಮತ್ತು ನಿರ್ವಹಣೆಯ ಹೆಸರಿನಲ್ಲಿ ಸಾರ್ವಜನಿಕ ಆಸ್ತಿಯನ್ನು ಖಾಸಗಿಯವರಿಗೆ ಹಂಚಿಕೆ ಮಾಡುವುದು ಪರಿಹಾರವಲ್ಲ ಎಂದು ಅವರು ಸಲಹೆ ನೀಡಿದ್ದಾರೆ.
ಸರ್ಕಾರ ಕೂಡಲೇ ಉದ್ಯಾನಗಳ ಶೇ. 5ರಷ್ಟು ಜಾಗವನ್ನು ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ನೀಡುವ ವಿಧೇಯಕವನ್ನು ರದ್ದು ಪಡಿಸಬೇಕು. ಸಾರ್ವಜನಿಕ ಉದ್ಯಾನಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸರ್ಕಾರವೇ ಸಂಪೂರ್ಣ ಜವಾಬ್ದಾರಿ ವಹಿಸಬೇಕು ಎಂದು ಪಾಟೀಲ ಅವರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net