ಹುಬ್ಬಳ್ಳಿ: ಕೈಯಲ್ಲಿ ಕತ್ತಿ ಹಿಡಿದು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನು gangadhara madiwalara ಇಲ್ಲಿಯ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಶ್ವರ ನಗರದ 4ನೇ ಕ್ರಾಸ್ ನಿವಾಸಿ ಗಂಗಾಧರ ಆನಂದ ಮಡಿವಾಳರ ಬಂಧಿತ. ಬಂಧಿತನಿಂದ ಕತ್ತಿ ವಶಪಡಿಸಿಕೊಳ್ಳಲಾಗಿದೆ.
ದಿ ಜೀವಾ 007 ಇನ್‌ಸ್ಟಾಗ್ರಾಮ್ ಐಡಿಯಲ್ಲಿ ಕೈಯಲ್ಲಿ ಕತ್ತಿ ಹಿಡಿದುಕೊಂಡಿದ್ದ ವಿಡಿಯೋ ಪೋಸ್ಟ್ ಮಾಡಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟು ಮಾಡಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.