ganesha mahamandala ಹುಬ್ಬಳ್ಳಿ ಗಣೇಶೋತ್ಸವ ನಾಡಿನಲ್ಲಿ ಖ್ಯಾತಿ

ganesha mahamandala ಹುಬ್ಬಳ್ಳಿಯ ಹೊಸೂರಿನ ಶ್ರೀ ಗಣೇಶ ವಿಸರ್ಜನೆ ಬಾವಿಗೆ ಮುತ್ತೈದೆಯರು ಶನಿವಾರ ಬಾಗಿನ ಸಮರ್ಪಿಸಿದರು.
ganesha mahamandala ಹುಬ್ಬಳ್ಳಿಯ ಹೊಸೂರಿನ ಶ್ರೀ ಗಣೇಶ ವಿಸರ್ಜನೆ ಬಾವಿಗೆ ಮುತ್ತೈದೆಯರು ಶನಿವಾರ ಬಾಗಿನ ಸಮರ್ಪಿಸಿದರು.
Published on
ಹುಬ್ಬಳ್ಳಿ: ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ganesha mahamandala ನೇತೃತ್ವದಲ್ಲಿ ಇಲ್ಲಿಯ ಹೊಸೂರಿನ ಶ್ರೀ ಗಣೇಶ ವಿಸರ್ಜನೆ ಬಾವಿಗೆ ಮುತ್ತೈದೆಯರು ಶನಿವಾರ ಬಾಗಿನ ಸಮರ್ಪಿಸಿದರು.
ಮೇಯರ್ ದುರ್ಗಮ್ಮ ಬೆಜವಾಡ ಬಾಗಿನ ಸಮರ್ಪಿಸಿ ಮಾತನಾಡಿ, ಹುಬ್ಬಳ್ಳಿಯಲ್ಲಿ ನಡೆಯುವ ಗಣೇಶೋತ್ಸವ ನಾಡಿನಲ್ಲಿ ಖ್ಯಾತಿ ಗಳಿಸಿದೆ. ಪ್ರತಿ ವರ್ಷವೂ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಆಕರ್ಷಕ ಭವ್ಯ ಮಂಟಪಗಳು ಹುಬ್ಬಳ್ಳಿ ತುಂಬ ಕಂಗೊಳಿಸುತ್ತಿವೆ ಎಂದು ಬಣ್ಣಿಸಿದರು.
ಡಾ. ಚಂದ್ರಪ್ರಭಾ ಪೂಜಾರ, ಗೀತಾ ಮಹಾದೇವಪ್ಪನವರ ಮಾತನಾಡಿ, ನಮ್ಮ ನೆಲ, ಜಲ, ಆಕಾಶ ಇವೆಲ್ಲವೂ ದೇವರ ಸ್ವರೂಪ. ಇವುಗಳ ಸದಾ ಸ್ಮರಣೆಯಿಂದ ನಮ್ಮ ದಿವ್ಯ ಶಕ್ತಿ ಇಮ್ಮಡಿಯಾಗುತ್ತದೆ ಎಂದರು.
ನೀಲಕಂಠಸ್ವಾಮಿ ಹಿರೇಮಠ, ಮೇಯರ್ ದುರ್ಗಮ್ಮ ಬೆಜವಾಡ, ಡಾ. ಚಂದ್ರಪ್ರಭಾ ಪೂಜಾರ, ಗೀತಾ ಮಹಾದೇವಪ್ಪನವರ ಅವರನ್ನು ಸನ್ಮಾನಿಸಲಾಯಿತು.
ಮಹಾಮಂಡಳದ ಅಕ್ಕಮ್ಮ ಕಂಬಳಿ, ಸರಸ್ವತಿ ಮೆಹರವಾಡೆ, ಉಶಾ ಡೋಣಿ, ಸಾಧನಾ ಪೂಜಾರ, ಸವಿತಾ ಚಂದನಮಟ್ಟಿ, ಜ್ಯೋತಿ ಸಂಗನಾಳ, ರತ್ನಾ ಬಸಾಪುರ, ಶೋಭಾ ಕಂಪ್ಲಿ, ಕವಿತಾ ಅರಹುಣಸಿ, ವಿಜಯಲಕ್ಷ್ಮೀ ಏಕಬೋಟೆ, ಸಂಗೀತಾ ಜಡಿ, ಶಾರದಾ ಬಡಿಗೇರ, ರೇಖಾ ಏಕಬೋಟೆ, ಡಾ. ಸವಿತಾ ಎನ್.ಎಸ್., ವಿನುತಾ ಬಾಗೇವಾಡಿ, ಎಸ್.ಎಂ. ಅಂಗಡಿ, ಅಮರೇಶ ಹಿಪ್ಪರಗಿ, ಈರಣ್ಣ ಪಾಳೆದ, ಅನಿಲ ಕವಿಶೆಟ್ಟಿ, ರಾಜಶೇಖರ ಕರಕಣ್ಣವರ, ಎಸ್.ಎಸ್. ಕಮಡೊಳ್ಳಿಶೆಟ್ಟರ್, ಚನ್ನಬಸಪ್ಪ ಧಾರವಾಡಶೆಟ್ಟರ್, ಸಾಯಿನಾಥ ಹಿತ್ತಾಳಿ, ಚಂದ್ರಶೇಖರ ಗಾಣಿಗೇರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net