ganesha mahamandala ಕಲಾವಿದರಿಗೆ ಪ್ರೋತ್ಸಾಹಿಸುವ ಮಹಾಮಂಡಳ

 ganesha mahamandala ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಬಹುಮಾನ ನಿರ್ಣಾಯಕ ನಿಯೋಗಕ್ಕೆ ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಂಗಳವಾರ ಚಾಲನೆ ನೀಡಿದರು.
ganesha mahamandala ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಬಹುಮಾನ ನಿರ್ಣಾಯಕ ನಿಯೋಗಕ್ಕೆ ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಂಗಳವಾರ ಚಾಲನೆ ನೀಡಿದರು.
Published on
ಹುಬ್ಬಳ್ಳಿ: ಹುಬ್ಬಳ್ಳಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಗಳ ganesha mahamandala ಮಹಾಮಂಡಳದ ಬಹುಮಾನ ನಿರ್ಣಾಯಕ ನಿಯೋಗವು ನಗರದಲ್ಲಿ ಸ್ಥಾಪಿಸಿದ ಕಲಾತ್ಮಕ ಗಣಪತಿಗಳ ವೇದಿಕೆ, ಕಲಾಕಾರರು, ಜಾನಪದ, ಸಾಂಸ್ಕೃತಿಕ ಕಲಾವಿದರು, ವಿದ್ಯುತ್ ಅಲಂಕಾರ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ.
ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಈ ನಿಯೋಗಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿ, ಹುಬ್ಬಳ್ಳಿಯ ಗಣೇಶೋತ್ಸವವು ವೈಭವ, ಆಡಂಬರ ಎನ್ನದೆ ಕಲಾಕಾರರಿಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಶ್ಲಾಘನೀಯ. ಒಬ್ಬ ಕಲಾವಿದ, ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗುವಂತೆ ಮನಸ್ಸಿನಿಂದ, ಬುದ್ಧಿ ಶಕ್ತಿಯಿಂದ, ಕೈ ಚಳಕದಿಂದ ಹೊಸ ವಿನ್ಯಾಸದ ಮೂರ್ತಿಗಳನ್ನು ತಯಾರಿಸುತ್ತಾನೆ. ನೋಡುವ ಭಕ್ತರಿಗೆ ಮನಸ್ಸನ್ನು ಸಮೃದ್ಧಿಗೊಳಿಸುವಂತ ಶಕ್ತಿ ಕಲಾಕಾರರಿಗೆ ಇದೆ ಎಂದರು.
ಕುಷ್ಟಗಿ ತಾಲೂಕಿನ ಬಿಜಕಲ್ ನಗರದ ವಿರಕ್ತ ಮಠದ ಶ್ರೀ ಶಿವಲಿಂಗ ಸ್ವಾಮೀಜಿ ಮಾತನಾಡಿ, ಹುಬ್ಬಳ್ಳಿಯ ಗಣೇಶೋತ್ಸವವು ನಾಡಿನಲ್ಲೇ ಹೆಸರು ಪಡೆದಿದೆ. ಈ ನಗರದಲ್ಲಿ ಸಾಂಸ್ಕೃತಿಕ, ಧಾರ್ಮಿಕತೆಯೊಂದಿಗೆ ಅನೇಕ ಸೇವಾ ಚಟುವಟಿಕೆಗಳಿಗೆ ಪ್ರೋತ್ಸಾಹಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.
ಮಹಾಮಂಡಳದ ಉಪಾಧ್ಯಕ್ಷ ಶಾಂತರಾಜ ಪೋಳ ಮಾತನಾಡಿ, ಗಣೇಶೋತ್ಸವದಿಂದ ವ್ಯಾಪಾರ, ಉದ್ದಿಮೆಗಳು ಅಭಿವೃದ್ಧಿಗೊಳ್ಳುತ್ತಿವೆ. ಕಲಾಕಾರರಿಗೆ, ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸಿಕೊಡುತ್ತಿದೆ ಎಂದರು.
ಹಿರಿಯ ಕಲಾಕಾರರಾದ ಎಸ್.ಎಂ. ಅಂಗಡಿ, ಅಶೋಕ ಬೆಳ್ಳಿಗಟ್ಟಿ, ಈರಣ್ಣ ಪಾಳೆದ, ಎಸ್.ಎಸ್. ಕಮಡೊಳ್ಳಿಶೆಟ್ಟರ್, ಮೋಹನ ಪತ್ತಾರ, ಹರೀಶ ಭರಾಡ, ಜಯಾ ಮುರಗೋಡ, ಅನಿಲ ಕವಿಶೆಟ್ಟಿ, ರವಿ ಹಳಿಜೋಳ, ಮಹೇಶ ಹಚಡದ, ಚನ್ನಬಸಪ್ಪ ಧಾರವಾಡಶೆಟ್ಟರ್, ಮೃತ್ಯುಂಜಯ ಕಮಡೊಳ್ಳಿಶೆಟ್ಟರ್, ಮಂಜುನಾಥ ಚಿಕ್ಕಣ್ಣವರ, ವಿಶ್ವನಾಥ ಹಿತ್ತಾಳಿ ತಂಡಕ್ಕೆ ಶ್ರೀಗಳು ಹಾರೈಸಿದರು.
ಮಹಾಮಂಡಳದ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ಸ್ವಾಗತಿಸಿ, ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net