gandhi shilp ಗಾಂಧಿ ಶಿಲ್ಪ ಬಜಾರ್​ ಪ್ರದರ್ಶನ ಮೇಳ

gandhi shilp ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ.
gandhi shilp ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ.
Published on
ಹುಬ್ಬಳ್ಳಿ: gandhi shilp ಇಲ್ಲಿಯ ಸಿಬಿಟಿ ಕಾಂಪ್ಲೆಕ್ಸ್​ ಬೆಸ್ಟ್​ ಇವೆಂಟ್ಸ್​ನಲ್ಲಿ ಗಾಂಧಿ ಶಿಲ್ಪ ಬಜಾರ್​ ಜಿಲ್ಲಾ ಮಟ್ಟದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಜುಲೈ 31ರಿಂದ ಆಯೋಜಿಸಲಾಗಿದೆ ಎಂದು ರೇಣುಕಾ ಎಜುಕೇಶನ್​ ಆ್ಯಂಡ್​ ವೆಲ್​ಫೇರ್​ ಸೊಸೈಟಿ ಅಧ್ಯಕ್ಷೆ ಡಾ. ಸುನೀತಾ ದಿವಟೆ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಜವಳಿ ಮಂತ್ರಾಲಯದ ಅಭಿವೃದ್ಧಿ ಆಯುಕ್ತರ ಕಚೇರಿ ಸಹಯೋಗದಲ್ಲಿ ನಡೆಯುವ ಮೇಳಕ್ಕೆ ಜುಲೈ 31ರಂದು ಬೆಳಗ್ಗೆ 11ಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಪ್ರಸಾದ ಅಬ್ಬಯ್ಯ ಅವರು ಚಾಲನೆ ನೀಡುವರು ಎಂದರು.
ರೇಣುಕಾ ಎಜುಕೇಶನ್​ ಆ್ಯಂಡ್​ ವೆಲ್​ಫೇರ್​ ಸೊಸೈಟಿ ಎಚ್​ಆರ್​ ಶೋಭಾ ಮೈಸೂರ ಮಾತನಾಡಿ, ವಿಶೇಷ ಕರಕುಶಲ ವಸ್ತುಗಳ ಮೇಳದಲ್ಲಿ ದೇಶದ ವಿವಿಧ ರಾಜ್ಯಗಳಿಂದ 40 ಕುಶಲಕರ್ಮಿಗಳು ಮತ್ತು ಕಲಾವಿದರು ಭಾಗವಹಿಸಲಿದ್ದಾರೆ. ಭಾರತದ ವಿವಿಧ ಪ್ರದೇಶಗಳ ಸಾಂಪ್ರದಾಯಿಕ ಕಲೆ, ಕರಕುಶಲ ಉತ್ಪನ್ನಗಳು ಮಾರಾಟಕ್ಕೆ ಲಭ್ಯ ಇರಲಿವೆ ಎಂದರು.
ಭಾರತದ ಶ್ರೀಮಂತ ಹಸ್ತಶಿಲ್ಪ ಮತ್ತು ಕರಕುಶಲ ಪರಂಪರೆಯನ್ನು ಸಂರಕ್ಷಿಸುವುದು, ಕುಶಲಕರ್ಮಿಗಳಿಗೆ ನೇರ ಮಾರುಕಟ್ಟೆ ಅವಕಾಶ ಕಲ್ಪಿಸುವುದು, ಸ್ಥಳಿಯ ಮತ್ತು ಸಾಂಪ್ರದಾಯಿಕ ಕಲೆಯನ್ನು ಜನರಿಗೆ ಪರಿಚಯಿಸುವುದು ಮೇಳದ ಉದ್ದೇಶವಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net