ರೈತರು ಸರ್ಕಾರದ ಯಾವುದೇ ಯೋಜನೆಗಳಿಗೆ ಅಜಿರ್ ಸಲ್ಲಿಸಲು ಫ್ರೂಟ್ಸ್ ಐಡಿ ಕಡ್ಡಾಯ. ಕೃಷಿ, ತೋಟಗಾರಿಕೆಗೆ ಮೊದಲು ಎತ್ತುಗಳ ಮೇಲೆ ಅವಲಂಬಿತರಾಗಿದ್ದ ರೈತರು ಯಂತ್ರೋಪಕರಣಗಳ ಮೊರೆ ಹೋಗಿದ್ದಾರೆ. ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ, ಮೀನುಗಾರಿಕೆಯಲ್ಲಿ ಯಾಂತ್ರೀಕರಣ ಹಾಸುಹೊಕ್ಕಾಗಿದೆ. ಜಮೀನು ಉಳುಮೆಯಿಂದ ಬೆಳೆ ಕಟಾವು, ಸಾಗಣೆಯವರೆಗೆ ಯಂತ್ರೋಪಕರಣಗಳು ಬೇಕು. ಅವುಗಳನ್ನು ಸರ್ಕಾರದ ಸಬ್ಸಿಡಿ ದರದಲ್ಲಿ ಖರೀದಿಸಲು ಫ್ರೂಟ್ಸ್ ಐಡಿ ಕಡ್ಡಾಯ. ಬರ ಪರಿಹಾರ, ಅತಿವೃಷ್ಟಿ ಪರಿಹಾರಕ್ಕೆ ಪಡೆಯಲು ಫ್ರೂಟ್ಸ್ ಐಡಿ ಬೇಕು. ಕೇಂದ್ರ ಸರ್ಕಾರ ಪ್ರತಿಯೊಬ್ಬ ರೈತರಿಗೆ ವರ್ಷಕ್ಕೆ 3 ಕಂತುಗಳಲ್ಲಿ ನೀಡುವ 2,000 ರೂಪಾಯಿ ಕಿಸಾನ್ ಸಮ್ಮಾನ್ ಪಡೆಯಲು ಇದು ಕಡ್ಡಾಯವಾಗಿದೆ. ಸರ್ಕಾರದಿಂದ ಬಿಡುಗಡೆಯಾಗುವ ಸಹಾಯಧನ ಪಡೆಯಲು ಬೇಕು. ಅತಿವೃಷ್ಟಿ, ಅನಾವೃಷ್ಟಿಯಿಂದಾಗುವ ಬೆಳೆ ಹಾನಿಗೆ ಪರಿಹಾರ ಪಡೆಯಲು, ಬೆಳೆ ವಿಮೆ, ಖರೀದಿ ಕೇಂದ್ರಗಳಲ್ಲಿ ಬೆಂಬಲ ಬೆಲೆಯಡಿ ಧಾನ್ಯ ಮಾರಾಟ ಮಾಡಲು, ಕನಿಷ್ಠ ಬೆಂಬಲ ಬೆಲೆ ಪ್ರಯೋಜನ, ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿ ಸೇರಿ ಅನೇಕ ಸೌಲಭ್ಯಗಳನ್ನು ಪಡೆಯಲು ರೈತರು ್ರೂಟ್ಸ್ ಐಡಿ ಹೊಂದಿರಲೇಬೇಕು.