frogs ಸುರಶೇಟ್ಟಿಕೊಪ್ಪದಲ್ಲಿ ಮಳೆಗಾಗಿ ಕಪ್ಪೆಗಳ ಮದುವೆ

ಕಲಘಟಗಿ ತಾಲೂಕಿನ ಸುರಶೆಟ್ಟಿಕೊಪ್ಪ ಗ್ರಾಮಸ್ಥರು ಮಳೆಗಾಗಿ ಕಪ್ಪೆಗಳ frogs ಮದುವೆ ಮಾಡಿದರು.
ಕಲಘಟಗಿ ತಾಲೂಕಿನ ಸುರಶೆಟ್ಟಿಕೊಪ್ಪ ಗ್ರಾಮಸ್ಥರು ಮಳೆಗಾಗಿ ಕಪ್ಪೆಗಳ frogs ಮದುವೆ ಮಾಡಿದರು.
Published on
ಕಲಘಟಗಿ: ಮುಂಗಾರು ಮಳೆ ಕೈಕೊಟ್ಟಿದ್ದರಿಂದ ತಾಲೂಕಿನ ಸುರಶೇಟ್ಟಿಕೊಪ್ಪ ಗ್ರಾಮಸ್ಥರು ಶುಕ್ರವಾರ ಸಾಂಪ್ರದಾಯಿಕವಾಗಿ ಕಪ್ಪೆಗಳ frogs ಮದುವೆ ಮಾಡುವ ಮೂಲಕ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದರು.
ಗ್ರಾಮೀಣ ಭಾಗದಲ್ಲಿನ ಪದ್ಧತಿಯಂತೆ ಅರಿಶಿಣಶಾಸ್ತ್ರ, ಹಂದರಶಾಸ್ತ್ರ, ಬಳೆಶಾಸ್ತ್ರ, ಮಾಡಿ ಗ್ರಾಮಸ್ಥರು ಗಂಡಿನಮನೆ ಹಾಗೂ ಹೆಣ್ಣಿನ ಮನೆಯವರಾಗಿ, ಕರಡಿ ಮಜಲು, ಡೊಳ್ಳು, ಭಜನೆ ಸೇರಿದಂತೆ ವಿವಿಧ ವಾದ್ಯ ಮೇಳಗಳೊಂದಿಗೆ ಗ್ರಾಮದಲ್ಲಿ ಕಪ್ಪೆಗಳನ್ನು ಮೆರವಣಿಗೆ ಮಾಡಿದರು.
ನಂತರ ಗ್ರಾಮದ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಬಂದು ಕಪ್ಪೆಗಳಿಗೆ ಸುರಗಿಕಾರ್ಯ, ಕಂಕಣ ಧಾರಣೆ, ಮಾಂಗಲ್ಯ ಧಾರಣೆ ಮಾಡಿ ಮಳೆಗಾಗಿ ದೇವರಲ್ಲಿ ಬೇಡಿಕೊಂಡರು.
ಕಾರ್ಯಕ್ರಮದಲ್ಲಿ 500 ಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಮಕ್ಕಳು, ಮುತ್ತೈದೆಯರು, ಗಂಡು ಹೆಣ್ಣು ಕಪ್ಪೆಗಳಿಗೆ ಅರಿಶಿಣ ಕುಂಕುಮ ಹಚ್ಚಿ ಆರತಿ ಬೆಳಗಿದರು. ಮದುವೆಗೆ ಆಗಮಿಸಿದ ಎಲ್ಲರಿಗೂ ಅನ್ನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net