fraud ಲಾಭಾಂಶ, ಅಸಲು ವಾಪಸ್ ಕೊಡದೆ ವಂಚನೆ

fraud ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ
fraud ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ
Published on
ಹುಬ್ಬಳ್ಳಿ: ರೈಲ್ವೆ ಇಲಾಖೆಯ ದೊಡ್ಡ ದೊಡ್ಡ fraud ಟೆಂಡರ್‌ಗಳಲ್ಲಿ ಹೂಡಿಕೆ ಮಾಡಿದರೆ ಲಾಭಗಳಿಸಿಬಹುದೆಂದು ರೈಲ್ವೆ ಇಲಾಖೆಯಲ್ಲಿ ಗುತ್ತಿಗೆದಾರನೊಬ್ಬ ನಂಬಿಸಿ, ವ್ಯಕ್ತಿಯಿಂದ ಬರೋಬ್ಬರಿ 86.06 ಲಕ್ಷ ರೂ. ಪಡೆದು ವಾಪಸ್ ಕೊಡದೆ ಮೋಸ ಮಾಡಿದ ಆರೋಪದಡಿ ಇಲ್ಲಿಯ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಲ್ಸನ್ ತಲಪತಿ ಎಂಬಾತನ ವಿರುದ್ಧ ನಗರದ ರಮೇಶ ವೈ. ಎಂಬುವವರು ದೂರು ದಾಖಲಿಸಿದ್ದಾರೆ.
ರೈಲ್ವೆ ಟೆಂಡರ್‌ಗಳಲ್ಲಿ ಹೂಡಿಕೆ ಮಾಡಿ ನಿಮಗೂ ಶೇ. 18ರಿಂದ 28ರಷ್ಟು ಲಾಭಾಂಶ ಕೊಡುತ್ತೇನೆಂದು ನಂಬಿಸಿ 2024ರಿಂದ 2025 ಫೆಬ್ರುವರಿರವರೆಗೆ ಒಟ್ಟು 86.06 ಲಕ್ಷ ರೂ. ಪಡೆದು ಲಾಭಾಂಶ ಮತ್ತು ಅಸಲು ಕೊಡದೇ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net