ಧಾರವಾಡ: ಒಂದೇ ಕುಟುಂಬದ ನಾಲ್ವರು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಚಿಕ್ಕಮಲ್ಲಿಗವಾಡ ಜನತಾ ಪ್ಲಾಟ್ ನಿವಾಸಿಗಳಾದ ವಿಠ್ಠಲ ಶಿಂಧೆ (75), ನಾರಾಯಣ ವಿಠ್ಠಲ ಶಿಂಧೆ (44), ಶಿವು ನಾರಾಯಣ ಶಿಂಧೆ (12) ಹಾಗೂ ಶ್ರೀನಿಧಿ ನಾರಾಯಣ ಶಿಂಧೆ (10) ಮೃತರು. ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಹೊರೆತೆಗೆದು ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕುಟುಂಬದ ನಾಲ್ವರ ಸಾಮೂಹಿಕ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.